ರಾಷ್ಟ್ರೀಯ ಕೈಮಗ್ಗ ದಿನ: ಕೇಂದ್ರದ ಯೋಜನೆ ಅರಿವು
ಬೀದರ್: ಆ.8:ರಾಷ್ಟ್ರೀಯ ಕೈಮಗ್ಗ ದಿನದ ಮುನ್ನಾದಿನವಾದ ಬುಧವಾರ ಬೀದರನಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಘಟಕದಿಂದ ಬುಟ್ಟಿ ನೇಯ್ಗೆ ಕಾಯಕದಲ್ಲಿ ತೊಡಗಿಸಿಕೊಂಡವರನ್ನು ಸತ್ಕರಿಸಿ, ಕೇಂದ್ರದ ಯೋಜನೆಗಳ ಅರಿವು ಮೂಡಿಸಲಾಯಿತು.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಉಲ್ಲಾಸಿನಿ ವಿಕ್ರಮ್ ಮುದಾಳೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶಕುಂತಲಾ ಬೆಲ್ದಾಳೆ, ಯೋಗೇಶ್ವರಿ ಸೋನಕಾಂಬಳೆ, ವಿಜಯಲಕ್ಷ್ಮಿ ಕೌಟಗೆ, ಮಾಯಾವತಿ ಕೋಟೆ ಸೌಭಾಗ್ಯವತಿ ಬಿರಾದಾರ ಇದ್ದರು.