ರಾಷ್ಟ್ರೀಯ ಮೂಳೆ ದಿನಾಚರಣೆ
ಬೀದರ್:ಆ.8: ರೋಟರಿ ಕ್ಲಬ್ ಬೀದರ್, ಬೀದರ್ ಅರ್ಥೋಪೆಡಿಕ್ ಅಸೋಸಿಯೇಷನ್, ಷಟ್ಲರ್ಸ್ ಕ್ಲಬ್ ಹಾಗೂ ಜಿಲ್ಲಾ ಪೆÇಲೀಸ್ ಇಲಾಖೆ ವತಿಯಿಂದ ನಗರದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಈಚೆಗೆ ರಾಷ್ಟ್ರೀಯ ಮೂಳೆ ಹಾಗೂ ಕೀಲುಗಳ ದಿನ ಆಚರಿಸಲಾಯಿತು.
ಆಗಸ್ಟ್ ಮೊದಲ ವಾರದಲ್ಲಿ ದೇಶದಾದ್ಯಂತ ರಾಷ್ಟ್ರೀಯ ಮೂಳೆ ಹಾಗೂ ಕೀಲುಗಳ ದಿನ ಆಚರಿಸಲಾಗುತ್ತಿದೆ ಎಂದು ಬೀದರ್ ಮೂಳೆ ಚಿಕಿತ್ಸಕರ ಸಂಘದ ಅಧ್ಯಕ್ಷ ಡಾ. ರಾಜಶೇಖರ ಸೇಡಂಕರ್ ಹೇಳಿದರು.
ಮಾನವನ ಆರೋಗ್ಯಪೂರ್ಣ ಜೀವನದಲ್ಲಿ ಮೂಳೆ ಹಾಗೂ ಕೀಲುಗಳ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಯುವಜನರು ಅತಿ ವೇಗದಲ್ಲಿ ಹಾಗೂ ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಬಾರದು ಎಂದು ಹೇಳಿದರು.
ಷಟ್ಲರ್ಸ್ ಕ್ಲಬ್ ಅಧ್ಯಕ್ಷ ಓಂಕಾರ ಕುಂಚಗೆ ಮಾತನಾಡಿ, ಸುರಕ್ಷತೆಯ ದೃಷ್ಟಿಯಿಂದ ವಾಹನ ಸವಾರರು ತಪ್ಪದೆ ಹೆಲ್ಮೆಟ್ ಧರಿಸಬೇಕು. ನಿಧಾನಗತಿಯಲ್ಲಿ ವಾಹನ ಚಲಾಯಿಸಬೇಕು ಎಂದು ತಿಳಿಸಿದರು.
ಸೇವ್ ಲೈಫ್ ಎನ್ನುವ ಘೋಷವಾಕ್ಯದೊಂದಿಗೆ ಹೆಲ್ಮೆಟ್ ಥಾನ್ ನಡೆಸಲಾಯಿತು.
ರೋಟರಿ ಕ್ಲಬ್ ಆಫ್ ಬೀದರ್ ಅಧ್ಯಕ್ಷ ಸೋಮಶೇಖರ ಪಾಟೀಲ, ಕಾರ್ಯದರ್ಶಿ ಕೃಪಾಸಿಂಧು ಪಾಟೀಲ, ಖಜಾಂಚಿ ಅನಿಲ್ ಮಸೂದಿ, ಹಿರಿಯ ಸದಸ್ಯರಾದ ಹಾವಶೆಟ್ಟಿ ಪಾಟೀಲ, ರವಿ ಮೂಲಗೆ, ಡಾ. ಸುರೇಶ ಪಾಟೀಲ, ಡಾ. ರಘು ಕೃಷ್ಣಮೂರ್ತಿ, ಸಂಚಾರ ಪೆÇಲೀಸ್ ಠಾಣೆಯ ಸಬ್ ಇನಸಪೆಕ್ಟರ್ ದಶರಥ ಹಾಗೂ ಸಿಬ್ಬಂದಿ ಇದ್ದರು.