ನಾಗರ ಚೌತಿ ಆಚರಣೆ
ಸಂಜೆವಾಣಿ ವಾರ್ತೆ
ಸಿರುಗುಪ್ಪ:ಅ,8- ಶ್ರಾವಣ ಶುಕ್ಲ ಪಕ್ಷದ ಚತುರ್ಥಿಯನ್ನು ನಾಗ ಚತುರ್ಥಿ ಅಥವಾ ನಾಗರ ಚೌತಿ ಎಂದು ಕರೆಯಲಾಗುತ್ತದೆ. ಈ ದಿನ ಮಹಿಳೆಯರು ತಮ್ಮ ಗಂಡ ಮತ್ತು ಮಕ್ಕಳ ದೀರ್ಘಾಯುಷ್ಯ ಮತ್ತು ಸಂತೋಷದ ಜೀವನಕ್ಕಾಗಿ ಉಪವಾಸವನ್ನು ಆಚರಿಸುತ್ತಾರೆ. ನಂಬಿಕೆಗಳ ಪ್ರಕಾರ, ಈ ದಿನದಂದು ಸರ್ಪ ದೇವರನ್ನು ಪೂಜಿಸುವುದರಿಂದ ಕಾಲಸರ್ಪ ಮತ್ತು ರಾಹು-ಕೇತುಗಳ ದುಷ್ಪರಿಣಾಮಗಳು ದೂರವಾಗುತ್ತವೆ ಎನ್ನುವ ನಂಬಿಕೆಯಾಗಿದೆ.
ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ನಾಗರ ಚೌತಿಯ ಪ್ರಯುಕ್ತ ಹೈಸ್ಕೂಲ್ ಮೈದಾನ ದಲ್ಲಿರುವ ಈರಣ್ಣ ಕಟ್ಟೆ(ನಾಗರ ಕಟ್ಟೆ)ಗೆ ನೂತನ ವಧು ವರರಾದ ಪ್ರವೀಣ್ ಕುಮಾರ್ ಮತ್ತು ಸುರೇಖಾ ದಂಪತಿಗಳು ಹಾಲು ಎರೆದರು. ಅಂಬರೀಶ್, ವೀಣಾ ಹಾಗೂ ಭಕ್ತರು ಇದ್ದರು.