ಹದಗೆಟ್ಟ ರಸ್ತೆ ಹೈರಾಣದ ಸವಾರರು.
ಕುರುಗೋಡು:ತಾಲೂಕು ಕೇಂದ್ರ ಕುರುಗೋಡು ನಗರದಿಂದ ಕಂಪ್ಲಿ ತಾಲೂಕಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ತೀರಾ ಹದಗೆಟ್ಟಿದ್ದು, ನಿತ್ಯ ಸಂಚರಿಸುವ ಪ್ರಯಾಣಿಕರು, ವಾಹನ ಸವಾರರು ರೋಸಿ ಹೋಗಿದ್ದಾರೆ.
ರಸ್ತೆಯ ಮೇಲೆ ಮೋಣಕಾಲುದ್ದ ತಗ್ಗು ಗುಂಡಿಗಳು ನಿರ್ಮಾಣಗೊಂಡಿವೆ. ಡಾಂಬರುಕಿತ್ತು ಹೋಗಿ ವರ್ಷಗಳೇ ಕಳೆದಿವೆ. ಆದರು ಈ ರಸ್ತೆ ಸುಧಾರಣೆಯತ್ತ ಮಾತ್ರ ಏಕೆ ಗಮನ ಹರಿಸುತ್ತಿಲ್ಲ ಎಂಬುವುದು ವಾಹನ ಸವಾರರ ಪ್ರಶ್ನೆಯಾಗಿದೆ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಮೇಲೆ ಪ್ರಯಾಣಿಕರು ಹಿಡಿಶಾಪ ಹಾಕುತ್ತಲೇ ಸಂಚರಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಹದಗೆಟ್ಟ ಇಂಥ ರಸ್ತೆಯಿಂದ ಆಸ್ಪತ್ರೆಗೆ ಹೋಗುವ ರೋಗಿಗಳ ಕಷ್ಟಒಂದೆಡೆಯಾದರೆ ಇನ್ನೊಂದೆಡೆ ಗರ್ಭಿಣಿಯರು, ಪ್ರಯಾಣಿಕರ ಪಾಡು ಹೇಳತಿರದು.
ರಸ್ತೆಯ ಮೇಲೆ ದೊಡ್ಡ ಪ್ರಮಾಣದ ತಗ್ಗು ಗುಂಡಿಗಳು ಬಿದ್ದ ಕಾರಣ ವಾಹನ ಸವಾರರು ನರಕಯಾತನೆ ಪಡುವಂಥಾಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಜ್ಞಾವಂತರು,  ವಾಹನ ಸವಾರರು ಈ ವ್ಯವಸ್ಥೆಗೆಹಿಡಿಶಾಪ ಹಾಕಿದ್ದಾರೆ. ಕೂಡಲೇ ಸಂಬಂಧಿತ ಅಧಿಕಾರಿಗಳು ಎಚ್ಚೆತ್ತು ರಸ್ತೆ ದುರಸ್ತಿಗೆ ಮುಂದಾಗಬೇಕು ಎನ್ನುವುದು ಸಾರ್ವಜನಿಕರ ಒತ್ತಾಸೆಯಾಗಿದೆ.
ಪಟ್ಟಣದಿಂದ ಕಂಪ್ಲಿ ತಾಲೂಕಿಗೆ ತೆರಳುವ ಮುಖ್ಯ ರಸ್ತೆ ಸಂಪೂರ್ಣ ಹಾಳೆಗಿದ್ದು. ವಾಹನ ಸವಾರರು ಪ್ರತಿದಿನ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ರೋಗಿಗಳು ಗರ್ಭಿಣಿ ಸ್ತ್ರೀಯರು ಚಿಕಿತ್ಸೆಗೆ ತೆರಳಲು ಅನಾನುಕೂಲವಾಗುತ್ತಿದೆ. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು, ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು.

ಪ್ರತಿನಿತ್ಯ ಪಟ್ಟಣದಿಂದ ಕಂಪ್ಲಿ ತಾಲೂಕಿನ ಹಳ್ಳಿಗಳಿಗೆ ಹೋಲಿ ಕೆಲಸಕ್ಕೆ ಎಂದು ತೆರಳುತ್ತೇವೆ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು. ಜೀವ ಅಂಗೈಯಲ್ಲಿಟ್ಟು ಪ್ರಯಾಣ ಬೆಳೆಸುವ  ಅನಿವಾರ್ಯ ಎದುರಾಗಿದೆ. ಆದಷ್ಟು ಬೇಗ ಜನಪ್ರತಿನಿಧಿಗಳು ಅಧಿಕಾರಿಗಳು ಎಚ್ಚೆತ್ತುಕೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಕೋರುತ್ತೇವೆ.. ಸಿದ್ದಪ್ಪ ವಾಹನ ಸವಾರರು
One attachment • Scanned by Gmail