ಭೂಮಿ ಮಂಜೂರಾದರು ಪಹಣಿಯಲ್ಲಿ ಸೇರದ ಹೆಸರು, ಸೇರ್ಪಡೆಗೆ ಒತ್ತಾಯಿಸಿ ದಲಿತರ ವೇದಿಕೆ ಮನವಿ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ ಅ.8 : ದೇವರು ವರ ಕೊಟ್ಟರೂ ಪೂಜಾರಿ ವರ ಕೊಡುತ್ತಿಲ್ಲ ಎನ್ನುವ ಹಾಗೇ ತಾಲೂಕಿನ ಜಂಗಮ ಸೋವೇನಹಳ್ಳಿ ಗ್ರಾಮದ ದಲಿತ ಚಲವಾದಿ ಪಕೀರಪ್ಪ ಅವರಿಗೆ ಈ ಹಿಂದೆ  ಮಂಜೂರು ಮಾಡಿದ್ದ ಸರ್ಕಾರಿ ಭೂಮಿಯನ್ನು  ಪಹಣಿಯಲ್ಲಿ ಅವರ ಹೆಸರು ಸೇರ್ಪಡೆ ಮಾಡದೇ ಅಧಿಕಾರಿಗಳು ಸತಾಯಿಸಿ ಪಕ್ಕೀರಪ್ಪ ಮೃತಪಟ್ಟರು ಪತ್ನಿ ಹೆಸರಿಗೆ ಮಂಜೂರಾದ ಭೂಮಿಯನ್ನು ಪಹಣಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲಾ ಸಮಿತಿಯ ಸದಸ್ಯರು ಕೂಡ್ಲಿಗಿ  ತಹಸೀಲ್ದಾರ್ ಎಂ.ರೇಣುಕಾ ಅವರ ಮುಖೇನಾ ವಿಜಯನಗರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ ಶಂಕರ ನಂದಿಹಾಳ್ ಮಾತನಾಡುತ್ತ ಕೂಡ್ಲಿಗಿ  ತಾಲೂಕಿನ ಶಿವಪುರ ಗ್ರಾಮದ ಸರ್ವೆ ನಂ 17ರಲ್ಲಿ  ಈ  ಹಿಂದೆ 3 ಎಕರೆ ಭೂಮಿಯನ್ನು 1999ರಲ್ಲಿ ಕೂಡ್ಲಿಗಿ ತಹಸೀಲ್ದಾರರು ಪಕೀರಪ್ಪ ಅವರಿಗೆ ಮಂಜೂರು ಮಾಡಿದ್ದರು  ಅಲ್ಲಿಂದ ಇಲ್ಲಿಯವರೆಗೂ ಅವರೆ ಸಾಗುವಳಿ ಮಾಡುತ್ತಿದ್ದಾರೆ   ಅಲ್ಲದೆ ಪಹಣಿಯಲ್ಲಿ ತಮ್ಮ ಹೆಸರು ಬಾರದೆ ಇದ್ದುದರಿಂದ  ಹೆಸರು ಸೇರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅನೇಕ ಬಾರಿ ಅರ್ಜಿ ಸಲ್ಲಿಸಿದರು ಸಂಬಂದಿಸಿದ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ.  2018ರಲ್ಲಿ ನಡೆದ ಬಗರ್ ಹುಕ್ಕುಂ ಸಾಗುವಳಿ ಸಕ್ರಮೀಕರಣ ಸಮಿತಿಯಲ್ಲಿ  ಸರ್ವೆ ನಂಬರ್ 17ರಲ್ಲಿ 2 ಎಕರೆ 15 ಗುಂಟೆ ಜಮೀನನ್ನು ನಂದಿ ಕೊಟ್ರೇಶಪ್ಪ ಎನ್ನುವವರಿಗೆ ಮಂಜೂರು ಮಾಡಿದ್ದಾರೆ. ಆದರೆ ಚಲವಾದಿ ಪಕ್ಕೀರಪ್ಪ   ಹೆಸರನ್ನು ಸೇರ್ಪಡೆ ಮಾಡುವಂತೆ ಅನೇಕ ಬಾರಿ ಮನವಿ ಸಲ್ಲಿಸಿದರು ಸೇರ್ಪಡೆ ಮಾಡುತ್ತಿಲ್ಲ  ನಂತರ . ಪಕ್ಕೀರಪ್ಪಮರಣದ ನಂತರವೂ ಅವರ ಪತ್ನಿ ಬಸಮ್ಮ ಅವರ ಹೆಸರು ಸೇರ್ಪಡೆ ಮಾಡುವಂತೆ ಮನವಿ ಮಾಡಿದ್ದರು ಆ ಭೂಮಿಯನ್ನು ತಮ್ಮ ಹೆಸರಿನ ಬದಲಾಗಿ  ಬೇರೆಯವರಿಗೆ ಭೂಮಿ ಮಂಜೂರು ಮಾಡಿದ್ದರ ವಿರುದ್ಧ ನ್ಯಾಯಾಲಯದ ತಡೆಯಾಜ್ಞೆ ಸಹ  ತಂದಿದ್ದರು ಕೋರ್ಟಿನ ತೀರ್ಪುನ್ನು ಸಹ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ  ಇದರಿಂದ ದಲಿತ ಮಹಿಳೆ ಚಲವಾದಿ ಬಸಮ್ಮ ಇವರಿಗೆ  ಅನ್ಯಾಯವಾಗಿದ್ದು   ಇದನ್ನು ಸರಿ ಪಡಿಸಲು ತಕ್ಷಣ ಅಧಿಕಾರಿಗಳು ಸವರ್ಣಿಯರಿಗೆ ಮಂಜೂರು ಮಾಡಿದ ಭೂಮಿಯನ್ನು ರದ್ದು ಮಾಡಿ. ಪಹಣಿಯಲ್ಲಿ ಬಸಮ್ಮಪಕ್ಕೀರಪ್ಪ  ಅವರ ಹೆಸರು  ಸೇರ್ಪಡೆ ಮಾಡಬೇಕು.
ಅದೇ ರೀತಿ ಒಮ್ಮೆ ದಲಿತರಿಗೆ ಮಂಜೂರಾದ ಭೂಮಿಯನ್ನು ಮತ್ತೊಬ್ಬರಿಗೆ ಮಂಜೂರು ಮಾಡಿ ಗೊಂದಲ ಸೃಷ್ಟಿಸಿದ ಅಧಿಕಾರಿಗಳು ಹಾಗೂ ಮೇಲ್ವರ್ಗದದವರ ಮೇಲೆ ಪರಿಶಿಷ್ಟ ಜಾತಿ, ಪಂಗಡದ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ  ಮನವಿ ಪತ್ರದಲ್ಲಿ ಒತ್ತಾಯಿಸಿದೆ ಎಂದು ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ ಶಂಕರ್ ನಂದಿಹಾಳ್ ಮಾತನಾಡಿ ಕೂಡ್ಲಿಗಿ  ತಹಸೀಲ್ದಾರ್ ಎಂ. ರೇಣುಕಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ  ಜಿಲ್ಲಾ ಕಾರ್ಯಧ್ಯಕ್ಷ ಹನುಮೇಶ್ ಕಟ್ಟಿಮನಿ, ಚಲವಾದಿ ಬಸಮ್ಮ. ತಾಲೂಕು ಅಧ್ಯಕ್ಷ ನಾಗರಾಜ, ಮಲ್ಲಿಕಾರ್ಜುನ ಸ್ವಾಮಿ,ಸಿ.ಎಂ.ಬಸಮ್ಮ,ತಳವಾರಬಸವರಾಜ, ಸಿ.ಎಂ. ನಾಗಯ್ಯ, ಸಿ.ಎಂ. ಸಂಗಯ್ಯ, ಎಸ್. ಈರಣ್ಣ, ಶಂಕ್ರಿ ಶಿವಾನಂದಪ್ಪ, ಸಿ.ಎಂ. ಮಲ್ಲಿಕಾರ್ಜುನಯ್ಯ, ವಡೇರಹಳ್ಳಿ ಶರಣಪ್ಪ ಸೇರಿದಂತೆ ಇತರೆ ವೇದಿಕೆ ಪದಾಧಿಕಾರಿಗಳು ಇದ್ದರು.