ದಿ.9 ರಂದು ರಥೋತ್ಸವ
ನವಲಗುಂದ,ಆ.8: ತಾಲ್ಲೂಕಿನ ಅಮರಗೋಳ ಗ್ರಾಮದ ಶ್ರೀ ನಾಗಸ್ವಾಮಿ ರಥೋತ್ಸವ ದಿನಾಂಕ 9 ರಂದು ಸಂಜೆ 5.30 ಕ್ಕೆ ಅದ್ದೂರಿಯಾಗಿ ಜರುಗಲಿದೆ.
ಯಾವುದೇ ಪ್ರದೇಶದಲ್ಲಿ ವಿಷಜಂತುಗಳ ಬಾಧೆಯಿಂದ ಬಳಲುವವರು ನಾಗಸ್ವಾಮಿಯನ್ನು ನೆನೆಯುತ್ತಾ ಮಠಕ್ಕೆ ತಕ್ಷಣ ಕರೆದುಕೊಂಡು ಬಂದು ಆರಾಧಿಸಿದರೆ ವಿಷಮುಕ್ತರಾಗುತ್ತಾರೆಂಬ ನಂಬಿಕೆ ಭಕ್ತರಲ್ಲಿ ನೆಲೆಯೂರಿರುವುದರಿಂದ ನಾಗಸ್ವಾಮಿ ಮಠ ವರ್ಷ ವೀಡಿ ಭಕ್ತರಿಗೆ ಪುಣ್ಯ ಕ್ಷೇತ್ರವಾಗಿದೆ.
