ಗಾನ ಗಂಧರ್ವ ಪುಟ್ಟರಾಜಗವಾಯಿಗಳವರು ಸಮಾಜಕ್ಕೆ ಸ್ಪೂರ್ತಿ
ಸಂಜೆವಾಣಿ ವಾರ್ತೆ
ಜಗಳೂರು.ಆ.೮;:- ವಿಕಲಚೇತನರ ಕಾಳಜಿ ಸಮಾಜದ ಪ್ರತಿಯೊಬ್ಬರ ಹೊಣೆಯಾಗಬೇಕಿದೆ.ಅಂತಃಕರಣದಿಂದ ಅವರ ಭಾವನೆಗಳಿಗೆ ಸ್ಪಂದಿಸಿ ಸಹಾಯಸ್ತಚಾಚಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಕಿವಿಮಾತು ಹೇಳಿದರು. ಪಟ್ಟಣದ ಗುರುಭವನದಲ್ಲಿ ವಿಕಲಚೇತನರ ಅಭಿವೃದ್ದಿ ಸಂಘದ ವಾರ್ಷಿಕೋತ್ಸವ ಹಾಗೂ ಗಣ್ಯರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹುಟ್ಟುತ್ತಲೇ ಅಂಧರಾಗಿದ್ದ ಪಂಡಿತ ಗಾನ ಗಂಧರ್ವ ಪುಟ್ಟರಾಜಗವಾಯಿ ಸಾಧನೆಗೆ ಅಂಗವೈಕಲ್ಯತೆ ಅಡ್ಡಿ ಯಲ್ಲ ಎಂಬುದನ್ನು ಸಾಧಿಸಿತೋರಿಸಿ ಸಮಾಜಕ್ಕೆ ಸ್ಪೂರ್ತಿಯಾಗಿದ್ದು. ವಿಕಲಚೇತನರು ಕೀಳಿರಿಮೆ ತೊರೆದು ಆಸಕ್ತಿದಾಯಕ‌ಕ್ಷೇತ್ರದಲ್ಲಿ ಸಾಧನೆಗೈಯಬೇಕು.ತಾಲೂಕಿನ ವಿಕಲಚೇತನರ ಶ್ರೇಯೋಭಿವೃದ್ದಿಗೆ ಸದಾ ಬದ್ದನಾಗಿರುವೆ’ ಎಂದು ಭರವಸೆ ನೀಡಿದರು.ಕೋವಿಡ್ ಸಂದರ್ಭದಲ್ಲಿ ಕೆಲವರ ಕಣ್ತೆರೆಸಲು ತಾಲೂಕಿ ನ ಪೌರಕಾರ್ಮಿಕರು,ಕ್ಷೌರಿಕರು,ಪತ್ರಕರ್ತರೊಂದಿಗೆ ಗುರುತಿಸಿ ವಿಕಲಚೇತನರಿಗೂ ಉಚಿತ ಆಹಾರ ಕಿಟ್ ವಿತರಿಸಿದ ತೃಪ್ತಿಯಿದೆ.ಆದರೆ ನಿತ್ಯ ಸಾವಿನದವಡೆಯಲ್ಲಿ ದ್ದ ಶ್ರೀಮಂತವರ್ಗ ನೆರವಿಗೆ ಬಾರದೆ ಕಣ್ಮುಚ್ಚಿಕುಳಿತಿತ್ತು ಎಂದು ಬೇಸರ ವ್ಯಕ್ತಪಡಿಸಿದರು.ಗ್ರಾಮೀಣ ಭಾಗದಲ್ಲಿ ಆಶಾ,ಅಂಗನವಾಡಿ ಕಾರ್ಯಕರ್ತೆ ಯರು ವಿಕಲಚೇತನರನ್ನು ಗುರುತಿಸಿ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕು. ಜೊತೆಗೆ ನಾನು ವೈಯಕ್ತಿಕವಾಗಿ ಸಹಾಯಧನ ನೀಡುವೆ’ಎಂದು ವಿಶ್ವಾಸ ವ್ಯಕ್ತಪಡಿಸಿದರು.ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಸಂತೋಷ್ ಮಾತನಾಡಿ, ವಿಕಲಚೇತನರನ್ನು ಸರಪಳಿ ಯಿಂದ ಬಂಧನದಲ್ಲಿಡುವ,ಪೋಷಕರೇ ಹತ್ಯೆಗೈಯುವ, ಅನಿಷ್ಠ ಪದ್ದತಿ ಸಮಾಜದಲ್ಲಿ ಜೀವಂತವಾಗಿತ್ತು.ದೇಶದಲ್ಲಿ 2016 ರ‌ಲ್ಲಿ ಜಾರಿಗೊಂಡ ವಿಕಲಚೇತನರ ಕಾಯ್ದೆಜಾರಿ ಯಾದ ನಂತರ ಕ್ರಮೇಣವಾಗಿ ವಿಕಲಚೇತನರ ರಕ್ಷಣೆ ಮತ್ತು ಹಕ್ಕುಗಳು,ಸರ್ಕಾರಿ ಸೌಲಭ್ಯಗಳು ಸಿಗುತ್ತಿವೆ.ನನ್ನ ಪುತ್ರನೂ ಕೂಡ ವಿಕಲಚೇತನನಾಗಿ ಜನಿಸಿದ್ದು.ಅವನನ್ನು ತಾತ್ಸಾರಮಾಡದೆ ಗೌರವದಿಂದ ಪೋಷಣೆ,ಪಾಲನೆ ಮಾಡುತ್ತಾ ದೈವಸ್ವರೂಪವಾಗಿ ಕಾಣುತ್ತಿದ್ದೇವೆ ಎಂದು ಭಾವುಕರಾದರು.ವಿಕಲಚೇತನರ ಅಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಮಹಾಂತೇಶ್ ಬ್ರಹ್ಮ ಮಾತನಾಡಿ, ತಾಲೂಕಿನಲ್ಲಿ ವಿಕಲಚೇತನರ ಸಮಸ್ಯೆಗಳನ್ನು ಅರಿತು ವಿಕಲಚೇತನರ ಅಭಿವೃದ್ದಿ ಸಂಘಸ್ಥಾಪಿಸಿ ವಿಕಲಚೇತನರ ಹಕ್ಕುಗಳು ಮತ್ತು ಸೌಲಭ್ಯಗಳ ಸೇವೆಗಾಗಿ ಸಂಕಲ್ಪಗೈದಿರುವೆ.ಒಂದು ವರ್ಷದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ವಿಕಲಚೇತನರಿಗೆ ಜಾಗೃತಿಕಾರ್ಯಕ್ರಮ,ಸಾಧನಸಲಕರಣೆ ವಿತರಣೆ,ಅವರ ಸಂಚಾರಕ್ಕೆ ರ್ಯಾಂಪ್ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.ಯುಡಿಐಡಿ ಕಾರ್ಡ್ ಗಳನ್ನು ಸ್ಥಳೀಯ ವಾಗಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ.ವಿಕಲಚೇತನರ ಅಭಿವೃದ್ದಿ ಸಂಘ ರಾಜ್ಯ ವ್ಯಾಪಿ ವಿಸ್ತರಿಸಿ ವಿಕಲಚೇತನರಿಗೆ ನ್ಯಾಯ ಸೌಲಭ್ಯಗಳ ನ್ನು ಕೊಡಿಸಲು ಮುಂದಾಗಲಿ ಸದಾ ನಮ್ಮ ಸಹಕಾರವಿ ರುತ್ತದೆ  ಎಂದರು.