ಉಡುಗೊರೆ ಕಾರ್ಯಕ್ರಮ
ಬ್ಯಾಡಗಿ,ಆ.8: ಪರಿಸರ ಸ್ವಚ್ಛತೆಯ ಜೊತೆಗೆ ಜನರ ಮನೋಭಾವವನ್ನು ಬದಲಾಯಿಸುವುದು ಸ್ವಚ್ಛ ಭಾರತದ ಪರಿಕಲ್ಪನೆಯಾಗಿದ್ದು, ಸ್ವಚ್ಛತೆಯ ಕುರಿತು ಕಾನೂನು ಜಾರಿಗೆ ಬಂದರೆ ಸಾಲದು, ಜನರ ಮನಸ್ಥಿತಿ ಪರಿವರ್ತನೆ ಆಗಬೇಕು, ಪರಿಸರವನ್ನು ಸ್ವಚ್ಛವಾಗಿರಿಸುವಲ್ಲಿ ಪೌರ ಕಾರ್ಮಿಕರ ಕೊಡುಗೆ ಅಪಾರವಾದುದು ಎಂದು ರೋಟರಿ ಸಂಸ್ಥೆಯ ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ ಹೇಳಿದರು.
ಪಟ್ಟಣದ ಇನ್ನರ್ವಿಲ್ ಕ್ಲಬ್ ಬ್ಯಾಡಗಿ ವತಿಯಿಂದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಸ್ಥಳೀಯ ಪುರಸಭೆಯ ಮಹಿಳಾ ಪೌರಕಾರ್ಮಿಕರಿಗೆ ಪಂಚಮಿ ಹಬ್ಬದ ಪ್ರಯುಕ್ತ ಸೀರೆ, ಅರಿಶಿನ,ಕುಂಕುಮ ಮತ್ತು ಬಳೆಗಳನ್ನು ಉಡುಗೊರೆಯಾಗಿ ಕೊಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಚತೆಯ ಕುರಿತು ಬಿಡುವಿಲ್ಲದೆ ನಿರಂತರ ಸೇವೆ ಸಲ್ಲಿಸುವ ಪೌರ ಕಾರ್ಮಿಕರ ಸೇವೆ ಸ್ಮರಣೀಯವಾಗಿದೆ. ಪಟ್ಟಣಕ್ಕೆ ಸ್ವಚ್ಛತೆಯಲ್ಲಿ ಹಲವಾರು ಪ್ರಶಸ್ತಿಗಳು ಬಂದಿರುವಲ್ಲಿ ಪೌರಾಡಳಿತ ಹಾಗೂ ಪೌರಕಾರ್ಮಿಕರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪುರಸಭೆ ಮುಖ್ಯ ಅಧಿಕಾರಿ ವಿನಯಕುಮಾರ ಹೊಳೆಪ್ಪಗೋಳ ಮಾತನಾಡಿ, ಪುರಸಭೆಯ ಮಹಿಳಾ ಪೌರಕಾರ್ಮಿಕರಿಗೆ ಆಯೋಜಿಸಿದ ಈ ಒಂದು ಕಾರ್ಯಕ್ರಮ ಬಹಳ ಮಹತ್ತರವಾದದ್ದು ಹಾಗೂ ಅಪರೂಪವಾದದ್ದು, ಈ ಕಾರ್ಯಕ್ರಮ ಏರ್ಪಡಿಸಿ ಮಹಿಳಾ ಪೌರಕಾರ್ಮಿಕರಿಗೆ ಗೌರವ ನೀಡಿದ ಇನ್ನರ್ ವ್ಹೀಲ್ ಕಬ್ಬಿನ ಸದಸ್ಯರಿಗೆ ಅಭಿನಂದನೆಗಳನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇನ್ನರ್ ವ್ಹೀಲ್ ಕಬ್ಬಿನ ಅಧ್ಯಕ್ಷೆ ಕವಿತಾ ಸೊಪ್ಪಿನಮಠ ಮಾತನಾಡಿ, ಒಬ್ಬರಿಂದಲೇ ಏನು ಮಾಡಲು ಸಾಧ್ಯವಾಗುವುದಿಲ್ಲ. ನಮ್ಮ ಕ್ಲಬ್ಬಿನ ಎಲ್ಲಾ ಸದಸ್ಯರ ಸಹಾಯ ಸಹಕಾರದಿಂದ ಪಟ್ಟಣದ ಮಹಿಳಾ ಕಾರ್ಮಿಕರಿಗೆ ಪಂಚಮಿ ಉಡುಗೊರೆ ಕೊಡಲು ಸಾಧ್ಯವಾಗಿದೆ ಹಾಗೂ ನಮ್ಮ ಸಂಸ್ಥೆಯ ವತಿಯಿಂದ ಎಲ್ಲ ಸದಸ್ಯರ ಸಹಾಯ ಸಹಕಾರದಿಂದ ಅನೇಕ ಕಾರ್ಯಕ್ರಮಗಳನ್ನು ಕಳೆದ ಮೂರು ವರ್ಷಗಳಿಂದ ಮಾಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿತಾಲೂಕಾ ಕಸಾಪ ಅಧ್ಯಕ್ಷ ಬಿ.ಎಂ.ಜಗಾಪುರ, ರೋಟರಿ ಕ್ಲಬ್ ಅಧ್ಯಕ್ಷ ಎಸ್.ಎಂ.ಬೂದಿಹಾಳಮಠ, ಇನ್ನರ್ ವ್ಹೀಲ್ ಸದಸ್ಯರಾದ ಲಕ್ಷ್ಮಿ ಉಪ್ಪಾರ, ರೂಪಾ ಕಡೆಕೊಪ್ಪ, ದ್ರಾಕ್ಷಾಯಿನಿ ಹರಮಗಟ್ಟಿ, ಶೋಭಾ ನೋಟದ, ಸುಶೀಲ ಕಲಶೆಟ್ಟಿ, ಪ್ರತಿಭಾ ಮೇಲಗಿರಿ, ಪುಷ್ಪ ಇಂಡಿಮಠ, ಸುಧಾ ಹೊಸಮನಿ, ಛಾಯಾ ತುಂಬಾಕದ, ಮಹೇಶ್ವರಿ ಪಸಾರದ, ಜಯಾ ಪಟ್ಟಣಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಧ್ಯಾರಾಣಿ ದೇಶಪಾಂಡೆ ಸ್ವಾಗತಿಸಿ ನಿರೂಪಿಸಿದರು, ಸುಮಾ ಸುಂಕಾಪುರ ವಂದಿಸಿದರು,