ದಿ. 11 ರಂದು ಮುಕುಟ ಸಪ್ತಮಿ ಕಾರ್ಯಕ್ರಮ
ಚನ್ನಮ್ಮನ ಕಿತ್ತೂರು,ಆ8: ಸಮೀಪದ ಖಾನಾಪೂರ ತಾಲೂಕಿನ ಕಸಮಳಗಿ (ಕೇಸರಮಳಗಿ) ಗ್ರಾಮದಲ್ಲಿ ಶ್ರೀ 1008 ಪಾರ್ಶ್ವನಾಥ ತೀರ್ಥಂಕರರ ಮೋಕ್ಷ ಕಲ್ಯಾಣ ನಿಮಿತ್ಯ ಮುಕುಟ ಸಪ್ತಮಿ ಕಾರ್ಯಕ್ರಮ ನೇರವೇರಲಿದೆ.
ಕಸಮಳಗಿಯ ಶ್ರೀ 1008 ವರಸಿದ್ಧಿ ಪಾರ್ಶ್ವನಾಥ ದಿಗಂಬರ ಜೈನಮಂದಿರದಲ್ಲಿ ಭವ್ಯ ಮುಕುಟ ಸಪ್ತಮಿ ಮಹೋತ್ಸವವನ್ನು ರವಿವಾರ 11 ಅಗಷ್ಟ್ 2024 ರಂದು ಆಯೋಜಿಸಲಾಗಿದೆ.
ಬೆಳಿಗ್ಗೆ 6 ಗಂಟೆಗೆ ಮಹಾಭಿಷೇಕ, 9 ಗಂಟೆಗೆ ಸವಾಲ ಧ್ವಜಾರೋಹಣ, 9-30 ರಿಂದ ಪಂಚಾಮೃತ ಅಭಿಷೇಕ, ಸರ್ವದೋಷ ನಿವಾರಣಾ ವಿಧಾನ ಮತ್ತು ನಿರ್ವಾಣ ಲಡ್ಡು ಸಮರ್ಪಣೆ, 108 ಆರ್ಶೀವಾದದ ಹಸ್ತಗಳುಳ್ಳ ಸಕಲ ಅಭಿಷ್ಟ ಫಲದಾಯಿನಿ ಪದ್ಮಾವತಿ ದೇವಿಗೆ ಉಡಿ ತುಂಬುವ ಅಲಂಕಾರ ಕಾರ್ಯಕ್ರಮ ನಂತರ ಶ್ರೀಕ್ಷೇತ್ರ ಪಾಲ ಬ್ರಹ್ಮದೇವರಿಗೆ ಉಡುಗೊರೆ. 108 ಶ್ರೀ ಶಾಂತಿ ಸಾಗರ ಮುನಿ ನಿವಾಸದ ವಾಸ್ತುಶಾಂತಿ ಹಾಗೂ ಕಾರ್ಯಕ್ರಮ. ಭಕ್ತಾದಿಗಳಿಗೆ ಬೆಳಗಿನ ಉಪಹಾರ ಮತ್ತು ಮಹಾಪ್ರಸಾದವಿರುತ್ತದೆ ಎಂದು ಪಾರ್ಶ್ವನಾಥ ದಿಗಂಬರ ಜೈನ ಅಭಿವೃದ್ದಿ ಕಮೀಟಿಯವರು, ಗ್ರಾಮದ ಹಿರಿಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ರಾಜು ಜಕ್ಕನ್ನವರ-9448191108, ಅಭಿನಂದನ ಕೊಚೇರಿ-9448339730, ಅಭಯ ಅವಲಕ್ಕಿ-9845442871, ದೇವೇಂದ್ರ ಗೌಡ್ರ-9944007928 ಅವರನ್ನು ಸಂಪರ್ಕಿಸಲು ಕೋರಲಾಗಿದೆ.