ಆ.10 ರಂದು ನೂತನ ಕವಚ ಧಾರಣೆ
ಸಂಜೆವಾಣಿ ವಾರ್ತೆ
ಹಿರಿಯೂರು: ಆ.8-ನಗರದ ತೇರುಬೀದಿಯಲ್ಲಿರುವ ಶ್ರೀ ಖಾದ್ರಿ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯದಲ್ಲಿ ಇದೇ 10 ರ  ನೂತನ ರಜತ ಕವಚ ಧಾರಣಾ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.  ಇದರ ಅಂಗವಾಗಿ ಅಂದು ಮುಂಜಾನೆ 3 ಗಂಟೆಯಿಂದ  ಗಣಪತಿ ಪೂಜೆ ,ನವಗ್ರಹ ಕಳಸ ಸ್ಥಾಪನೆ, ಗಣ ಹೋಮ, ನವಗ್ರಹ ಹೋಮ,ಅಷ್ಟೋತ್ತರ, ಅಭಿಷೇಕ, ಮೂಲ ಮಂತ್ರ ಅಷ್ಟೋತ್ತರ ಹೋಮ, ಪೂರ್ಣಾಹುತಿ, ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ ಭಕ್ತಾದಿಗಳಿಗೆ ಅನ್ನ ದಾಸೋಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ದೇವಸ್ಥಾನದ ಪೂಜಾ ಕಾರ್ಯಕ್ರಮ ಸಂಯೋಜಕರು ಪತ್ರಿಕೆಗೆ ತಿಳಿಸಿದ್ದಾರೆ