ಬನಶಂಕರಿ ಬಡಾವಣೆಯಲ್ಲಿ ವನಸ್ಪತಿ ವನ ನಿರ್ಮಾಣ
ಸಂಜೆವಾಣಿ ವಾರ್ತೆದಾವಣಗೆರೆ.ಆ.೮; ನಗರದ ಬನಶಂಕರಿ ಬಡಾವಣೆಯ ಉದ್ಯಾನವನದಲ್ಲಿ ವನಸ್ಪತಿ ವನ ನಿರ್ಮಾಣ ಮಾಡುವ ಉದ್ದೇಶದೊಂದಿಗೆ  ಔಷಧೀಯ ಸಸಿಗಳನ್ನು ನೆಡಲಾಯಿತು. ಮಾಜಿ ಮೇಯರ್ ಎಸ್ ಟಿ ವೀರೇಶ್ ಅವರ  ಉಸ್ತುವಾರಿಯಲ್ಲಿ ಬಡಾವಣೆಯ ನಾಗರೀಕರು ಈ ಕೆಲಸಕ್ಕೆ ಕೈಜೋಡಿಸಿದರು. ಈ ವೇಳೆ ಮಾತನಾಡಿದ ಎಸ್ .ಟಿ ವಿರೇಶ್ ಅವರು  ಬೇಸಿಗೆ ಕಾಲದಲ್ಲಿಯೂ ಈ ಗಿಡಗಳನ್ನು ರಕ್ಷಿಸುವುದಾಗಿ ಭರವಸೆ ನೀಡಿದರು. ವಿಶ್ರಾಂತ ಡಿ ಡಿ ಪಿ ಐ ಭರ್ಮಪ್ಪ ಹಾಗೂ ವಿಶ್ರಾಂತ ಅರಣ್ಯ ಅಧಿಕಾರಿ ಎಎಂ ಕೊಟ್ರೇಶ್  ಈ ಗಿಡಗಳು ಮನುಷ್ಯನಿಗೆ ತುಂಬಾ ಅವಶ್ಯಕ ಎಂದು ಹೇಳಿದರು. ಇವುಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಆಗಬೇಕು ಎಂದರು. ಪಾರಂಪರಿಕ ವೈದ್ಯರಾದ ಮಮತಾ ನಾಗರಾಜ್   ಗಿಡ ಮೂಲಿಕೆಗಳನ್ನು ತಂದು ಅವುಗಳ ಉಪಯೋಗಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಶೇಖರಪ್ಪ, ಲೀಲಾ, ಬಿಂದು, ಜಯಂತಿ, ಹನುಮಂತಪ್ಪ, ಲತಾ,  ಪೂರ್ಣಿಮಾ, ಜಯಣ್ಣ  ಮುಂತಾದವರು ಉಪಸ್ಥಿತರಿದ್ದರು.