ಶಾಸಕರ ನಡೆ ಹಳ್ಳಿಗಳ ಅಭಿವೃದ್ಧಿ ಕಡೆ: ಜನರ ಸಮಸ್ಯೆಗಳಿಗೆ ಶಾಸಕ ಬಸವರಾಜು ವಿ ಶಿವಗಂಗಾ ಸ್ಪಂದನೆ
ಸಂಜೆವಾಣಿ ವಾರ್ತೆ
ಚನ್ನಗಿರಿ.ಆ‌.೮ : ಶಾಸಕರ ನಡೆ ಹಳ್ಳಿಗಳ ಅಭಿವೃದ್ಧಿ ಕಡೆ ಕಾರ್ಯಕ್ರಮದ ಮೂಲಕ ತಾಲ್ಲೂಕಿನ ಕೆಂಪನಹಳ್ಳಿಗ್ರಾಪಂ ಮತ್ತು ದೊಡ್ಡಮಲ್ಲಾಪುರಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಶಾಸಕರಾದ ಬಸವರಾಜು ವಿ ಶಿವಗಂಗಾ ತೆರಳಿ ಜನರ ಸಮಸ್ಯೆ ಆಲಿಸಿದರು.ಈ ವೇಳೆ ಮಾತನಾಡಿದ ಅವರು ,  ಮಳೆಯಿಂದಾಗಿಹಲವು ಗ್ರಾಮಗಳಲ್ಲಿ ಮನೆಗಳುಹಾನಿಗೊಳಗಾಗಿವೆ.ಅವುಗಳಿಗೆಪರಿಹಾರ, ಹೊಸ ಮನೆ ಮಂಜೂರುಸೇರಿದಂತೆ ಮನೆ ಇಲ್ಲದವರನ್ನು ಪಟ್ಟಿಮಾಡಿ ಮಾಡುವಂತೆ ಆಯಾ ಗ್ರಾಪಂಗಳಪಿಡಿಒಗಳಿಗೆ ಸೂಚನೆ ನೀಡಲಾಗಿದೆ.ಕ್ಷೇತ್ರಾದ್ಯಂತ ಸಾಕಷ್ಟು ನಿವೇಶನಗಳಬೇಡಿಕೆ ಕೇಳಿ ಬರುತ್ತಿದ್ದು ಮುಂದಿನದಿನಗಳಲ್ಲಿ ಪರಿಹಾರ ಕಲ್ಪಿಸಲುಕ್ರಮವಹಿಸಲಾಗುವುದು ಎಂದರು.