ವಿಶಿಷ್ಟ ಗುಣವೇ ಮನುಷ್ಯನ ವ್ಯಕ್ತಿತ್ವ:ನರೇಂದ್ರ ಬಡಶೇಷಿ
ಕಲಬುರಗಿ.ಆ ೮: ಜೀವನದಲ್ಲಿ ಒಬ್ಬ ವ್ಯಕ್ತಿ ಮೈಗೂಡಿಸಿಕೊಂಡಿರುವ ವಿಶಿಷ್ಟ ಗುಣವೇ ಮನುಷ್ಯನ ವ್ಯಕ್ತಿತ್ವ. ವ್ಯಕ್ತಿತ್ವ ಕೇವಲ ಒಂದು ದಿನ ಎರಡು ದಿನದಲ್ಲಿ ರೂಪಗೊಳ್ಳುವುದಿಲ್ಲ ಇದಕ್ಕೆ ಕಠಿಣವಾಗಿರುವ ಪರಿಶ್ರಮ , ಆದರ್ಶ ತತ್ವಗಳ ಪಾಲನೆ, ಒಳ್ಳೆಯ ಹವ್ಯಾಸ ಬೆಳೆಸಿಕೊಂಡಾಗ ಮಹತ್ತರವಾದ ಸಾಧನೆ ಮಾಡಲು ಸಾಧ್ಯ ಎಂದು ನಿವೃತ್ತ ಪ್ರಾಂಶುಪಾಲ ನರೇಂದ್ರ ಬಡಶೇಷಿ ಹೇಳಿದರು
ಅವರು ನಗರದ ಸ್ಟೇಷನ್ ಬಜಾರ್ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಹಮ್ಮಿಕೊಂಡ ಯುವಜನತೆ ಹಾಗೂ ವ್ಯಕ್ತಿತ್ವ ವಿಕಸನ ಮೇಲೆ ಉಪನ್ಯಾಸ ನೀಡಿ ಮಾತನಾಡಿದರು. ಇಂದು ನಾವು ತತ್ವಕ್ಕೆ ಮಹತ್ವ ಕೊಡದೆ ವ್ಯಕ್ತಿಗೆ ಮಹತ್ವ ಕೊಡುತ್ತಿದ್ದೇವೆ ಹೀಗಾಗಿ ಸಮಾಜದಲ್ಲಿ ಆಸ್ತಿವಂತರು ,ಹಣ ತೋಳ್ಬಲ ಇದ್ದವರಿಗೆ ಮಹತ್ವ ಸಿಗುತ್ತಿದೆ .ಇದು ಸುಸಂಸ್ಕೃತ ಸಮಾಜದ ಲಕ್ಷಣವಲ್ಲ.ಹೀಗಾಗಿ ಯಾರು ಸಚ್ಚಾರಿತ್ರ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರುತ್ತಾರೆ ಅಂತವರಿಗೆ ಸಮಾಜ ಮನ್ನಣೆ ಕೊಡಬೇಕು ಅಂದಾಗ ಆದರ್ಶ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಸಮಾಜದಲ್ಲಿ ಆದರ್ಶ ವ್ಯಕ್ತಿಗಳು ಬೆಳೆಯಲು ಅನುಕೂಲವಾಗುತ್ತದೆ . ವಿದ್ಯಾರ್ಥಿಗಳು ಜೀವನದಲ್ಲಿ ಕಠಿಣ ಪರಿಶ್ರಮ ನಿಶ್ಚಿತ ಗುರಿ ಸತತ ಪ್ರಯತ್ನ ಹಾಗೂ ಆದರ್ಶ ವ್ಯಕ್ತಿಗಳ ಸಮಾಜಕ್ಕಾಗಿ ಅವರ ಸೇವೆ ಇವುಗಳನ್ನು ಆದರ್ಶವಾಗಿ ಇಟ್ಟುಕೊಂಡು ಪ್ರಮಾಣಿಕ ಪ್ರಯತ್ನ ಮಾಡಿದಾಗ ಉತ್ತಮ ಆದರ್ಶ ವ್ಯಕ್ತಿತ್ವ ರೂಪಗೊಳ್ಳುತ್ತದೆ. ಅಂತಹ ವ್ಯಕ್ತಿಗೆ ಸಮಾಜ ಬೆಲೆ ಕೊಡುತ್ತದೆ ಎಂದರು.ಅಧ್ಯಕ್ಷತೆಯನ್ನು ವಹಿಸಿ ಪ್ರಾಂಶುಪಾಲರಾದ ಸುಜಾತ ಬಿರಾದರ್ ವಹಿಸಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಎನ್ ಎಸ್‌ಸ್ ವಿಭಾಗೀಯ ಅಧಿಕಾರಿ ಡಾ.ಚಂದ್ರಶೇಖರ್ ದೊಡ್ಡಮನಿ ಮಾತನಾಡಿದರು.ವೇದಿಕೆ ಮೇಲೆ ಎನ್ ಎಸ್ ಎಸ್ ಅಧಿಕಾರಿ ಪಾಂಡು ಎಲ್ ರಾಠೋಡ್ ,ಹಿರಿಯ ಉಪನ್ಯಾಸಕರಾದ ಚಂದ್ರಕಾAತ್ ಸನದಿ, ಮಲ್ಲಯ್ಯ ಮಠಪತಿ, ಬಲರಾಮ್ ಚೌಹಾಣ್,ವಿಜಯಲಕ್ಷ್ಮಿ ರೆಡಿ,್ಡ ಸಿದ್ದಲಿಂಗಪ್ಪ ಪೂಜಾರಿ, ಶಶಿಧರ್ ಭೂಸನೂರ್, ಶಿವಪ್ಪ ಎಹೆಚ್ ,ಡಾ.ಶೀಲಾವತಿ ವಾಡೇಕರ್ ಮುಂತಾದವರು ಉಪಸ್ಥಿತರಿದ್ದರು.