ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ವೆಂಕಟಯ್ಯನ ಛತ್ರ ಕಾಲೇಜಿಗೆ ಸಮಗ್ರ ಪ್ರಶಸ್ತಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.08-ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಆಗಸ್ಟ್ 3, 4 ಮತ್ತು 5 ರಂದು ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಚಾಮರಾಜನಗರ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ವೆಂಕಟಯ್ಯನಛತ್ರ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿ ಹೆಚ್ಚಿನ ಸಂಖ್ಯೆಯ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.
ಈ ಸಂಬಂಧ ವೆಂಕಟಯ್ಯನಛತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಎಲ್ಲಾ ವಿಜಯಶಾಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಮಲ್ಲೇಶ ಅವರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳಿಸಿರುವ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೂ ಸಮರ್ಪಕ ತಯಾರಿ ನಡೆಸಿದ್ದರ ಫಲವಾಗಿ ವಿದ್ಯಾರ್ಥಿಗಳಿಗೆ ಈ ಗೌರವ ಒಲಿದು ಬಂದಿದೆ ಎಂದರು.
ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಿದ ಭೂಗೋಳಶಾಸ್ತ್ರ ಉಪನ್ಯಾಸಕರಾದ ಮಹಾಂತೇಶ ಕುರುಬರ ಅವರ ಪ್ರೋತ್ಸಾಹ ಮತ್ತು ಶ್ರಮವನ್ನು ವಿಶೇಷವಾಗಿ ಪ್ರಶಂಶಿಸಿದ ಮಲ್ಲೇಶ್ ಅವರು ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಮತ್ತು ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚಿನ ಸಾಧನೆ ಮೂಡಿ ಬರಲಿ. ವಿದ್ಯಾರ್ಥಿಗಳಿಗೆ ಈ ಕ್ರೀಡಾ ಪ್ರೀತಿಯನ್ನು ಕಾಪಾಡಿಕೊಳ್ಳುವಂತೆ ಕರೆ ನೀಡಿದರು.
ಉಪನ್ಯಾಸಕರಾದ ಮಲ್ಲೇಶ, ಪ್ರಶಾಂತ, ಮಹೇಶ್, ಪೂರ್ಣಿಮ, ಅನಿತ, ಗೋವಿಂದ, ಶೀಲಾವತಿ, ಮಹಾಂತೇಶ ಕುರುಬರ ಹಾಗೂ ಅತಿಥಿ ಉಪನ್ಯಾಸಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ವಿಜೇತ ವಿದ್ಯಾರ್ಥಿಗಳ ವಿವರ:- ಪುಟ್ಟಲಕ್ಷ್ಮೀ 100 ಮೀ ಪ್ರಥಮ, 200 ಮೀ ಪ್ರಥಮ, ತ್ರಿಪಲ್ ಜಂಪ್ ಪ್ರಥಮ ಸ್ಥಾನ, ಬಾಲಕಿಯರ ವಿಭಾಗದ ವೈಯಕ್ತಿಕ ಚಾಂಪಿಯನ್, ಪ್ರಶಸ್ತಿಯನ್ನು ಕೂಡ ಗಳಿಸಿ ಕ್ರೀಡಾಕೂಟದ ವೇಗದ ಓಟ ಗಾರ್ತಿಯಾಗಿ ಹೊರಹೊಮ್ಮಿದ್ದಾಳೆ.
ನಾಗರತ್ನ ಉದ್ದಜಿಗಿತ ಪ್ರಥಮ, ಯೋಗೇಶ್. ಎನ್ 3000 ಮೀ ಪ್ರಥಮ, ಗುಡ್ಡಗಾಡು ಓಟ ದ್ವಿತೀಯ, ರಾಜೇಶ್ವರಿ ವೇಗ ನಡಿಗೆ 3ನೇ ಸ್ಥಾನ, ಕಿರಣ್ ವಿ 800 ಮೀ ಪ್ರಥಮ, ಗೌರಮ್ಮ 800 ಮೀ ದ್ವಿತೀಯ, 400 ಮೀ ತೃತೀಯ, ಗುಡ್ಡಗಾಡು ಓಟ 6ನೇ ಸ್ಥಾನ, ರಾಧಿಕ 3000 ಮೀ ದ್ವಿತೀಯ, ಗಂಗಮ್ಮ 400 ಮೀ ತೃತೀಯ, ಗುಡ್ಡಗಾಡು ಓಟ 4ನೇ ಸ್ಥಾನ, ನದಿಯ 1500 ಮೀ ದ್ವಿತೀಯ, 3000 ಮೀ ತೃತಿಯ, ಗುಡ್ಡಗಾಡು ಓಟ 5ನೇ ಸ್ಥಾನ, ತೇಜಸ್ ಜಿ ವೇಗ ನಡಿಗೆ ದ್ವಿತೀಯ, ಯೋಗೇಶ್ 1500 ಮೀ ತೃತೀಯ, ಬಾಲಕಿಯರ ವಿಭಾಗದಲ್ಲಿ 400 ಮೀ ರಿಲೆ ಪ್ರಥಮ, ಬಾಲಕಿಯರ 100 ಮೀ ರಿಲೇ ತೃತೀಯ, ಬಾಲಕಿಯರ ಖೋ-ಖೋ ಪ್ರಥಮ ಸ್ಥಾನ, ಬಾಲಕರ ಖೋ-ಖೋ ದ್ವಿತೀಯ ಸ್ಥಾನ ಪಡೆದಿದ್ದು ಒಟ್ಟಾರೆ 16 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.