ಸ್ವಾತಂತ್ರ್ಯ ದಿನಾಚರಣೆ-ಪೂರ್ವಭಾವಿ ಸಭೆ
ಸಂಜೆವಾಣಿ ವಾರ್ತೆ
ನಂಜನಗೂಡು: ಆ.08:- ತಾಲ್ಲೂಕು ಮಿನಿ ವಿಧಾನಸೌಧದಲ್ಲಿ ನಡೆದ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಸಂಬಂಧ ಪೂರ್ವಭಾವಿ ಸಭೆಯನ್ನು ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ನಡೆಸಿದರು.
ಸಭೆಯಲ್ಲಿ ಹಲವಾರು ಸಂಘ ಸಂಸ್ಥೆಗಳ ಅಧ್ಯಕ್ಷರು ಕಾರ್ಯದರ್ಶಿಗಳು ಮುಖಂಡರುಗಳು ಪಕ್ಷದ ಮುಖಂಡರು ನಗರಸಭಾ ಸದಸ್ಯರುಗಳು ರೈತ ಸಂಘದವರು ಎಲ್ಲಾ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು
ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಲು ತಹಸಿಲ್ದಾರ್ ಸೂಚಿಸಿದರು.
ಸಭೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ರೂಪುರೇಷೆ ಮತ್ತು ಸಲಹೆ ಸೂಚನೆ ಬಗ್ಗೆ ಸಭೆಲಿದ್ದಂತಹ ಅಧಿಕಾರಿಗಳು ಸಂಘ ಸಂಸ್ಥೆಯ ಅಧ್ಯಕ್ಷರುಗಳು ಮುಖಂಡರ ಜೊತೆ ಚರ್ಚಿಸಿ ಸಲಹೆಗಳನ್ನು ಪಡೆದುಕೊಂಡರು.
ಮುಂದುವರೆದು ಮಾತನಾಡಿದ ಶಾಸಕ ದರ್ಶನ್ ಧ್ರುವನಾರಾಯಣ್ ಈ ಬಾರಿಯೂ ಕೂಡ ಅರ್ಥಪೂರ್ಣವಾಗಿ ಆಚರಿಸಬೇಕು ಪ್ರತಿವರ್ಷ ಬೆಳಗಿನ ಸಂದರ್ಭದಲ್ಲಿ ಮಕ್ಕಳ ನೃತ್ಯಗಳನ್ನು ನಡೆಸುತ್ತಿದ್ದರು ಬಿಸಿಲಿನ ಬಗ್ಗೆ ಜಾಸ್ತಿ ಆಗಿರುವುದರಿಂದ ಪ್ರತಿವರ್ಷವೂ ಇದು ಚರ್ಚೆ ಉಂಟಾಗುತ್ತಿತ್ತು ಆದ್ದರಿಂದ ಹೊಸತನ ರೂಪಿಸಿದ ಶಾಸಕ ದರ್ಶನ್ ಈ ಬಾರಿ ಸಂಜೆ 4 ಗಂಟೆಗೆ ಮಕ್ಕಳ ನೃತ್ಯಗಳನ್ನು ಆಚರಿಸಲು ಸೂಚಿಸಿದರು .ಬೆಳಗ್ಗೆ ಎಂದಿನಂತೆ ಬೆಳಿಗ್ಗೆ ಫ್ಲಾಗ್ ಆಚರಣೆ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಭಾಷಣ ನಂತರ ಮೆರವಣಿಗೆ ಶ್ರೀಕಂಠೇಶ್ವರ ದಾಸೋ ಭವನದಲ್ಲಿ ಊಟದ ವ್ಯವಸ್ಥೆ ನಂತರ ಬಾಲಕಿಯರ ಗಲ್ರ್ಸ್ ಕಾಲೇಜಿನಲ್ಲಿ ಮಕ್ಕಳ ನೃತ್ಯ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು ಈ ಸಂದರ್ಭದಲ್ಲಿ ಹೋರಾಟಗಾರರಿಗೆ ಪತ್ರಕರ್ತರಿಗೆ ಶಿಕ್ಷಕರಿಗೆ ರೈತರಿಗೆ ಮತ್ತು ಕ್ರೀಡಾಪಟುಗಳಿಗೆ ಸನ್ಮಾನಿಸುವ ವ್ಯವಸ್ಥೆ ಮೊದಲಿನಿಂದಲೂ ಬಂದಿತ್ತು ಆದರೆ ಒಂದು ಕಾರ್ಯಕ್ರಮದಲ್ಲಿ ಉತ್ತಮವಾಗಿ ಒಬ್ಬರನ್ನು ಗೌರವವಾಗಿ ಪ್ರಶಸ್ತಿ ನೀಡಿ ಸನ್ಮಾನಿಸಬೇಕು ಹೆಚ್ಚಿನ ಸಂಖ್ಯೆಯಲ್ಲಿ ಗೌರವಿಸುವುದು ಬೇಡ ಇಂದು ಸಲಹೆ ನೀಡಿದರು ಯಾವ ಕ್ಷೇತ್ರದಲ್ಲಾದರೂ ಸರಿ ಉತ್ತಮ ಕೆಲಸ ಮಾಡುವವರಿಗೆ ಉತ್ತಮವಾದ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲು ಒಬ್ಬರಿಗೆ ಮಾತ್ರ ಅವಕಾಶ ನೀಡಬೇಕೆಂದು ಸಭೆಯಲ್ಲಿ ನಿರ್ಣಯ ಆಯಿತು ಇದರ ಜೊತೆಗೆ ಚರ್ಚಿಸಲು ಒಂದು ಕಮಿಟಿ ಮಾಡಲಾಗಿದೆ ಅಲ್ಲಿಯೂ ಕೂಡ ಚರ್ಚೆ ಮಾಡಿ ತೀರ್ಮಾನ ಮಾಡಲು ಸೂಚಿಸಿದರು ಒಟ್ಟಾರೆ ಬಾರಿ ಅರ್ಥಪೂರ್ಣವಾಗಿ 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ತಾಲೂಕು ಆಡಳಿತ ಮಂಡಳಿ ಸಕಲ ಸಿದ್ಧತೆ ನಡೆಸಲು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ರವರು, ತಹಸೀಲ್ದಾರ್ ಶಿವಕುಮಾರ್ ಕಾಸನೂರ್ ರವರು, ಇಔ ಜೆರಾಲ್ಡ್ ರಾಜೇಶ್ ರವರು, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘಟನೆಯ ಅಧ್ಯಕ್ಷರುಗಳು, ಪದಾಧಿಕಾರಿಗಳು, ಉಪಸ್ಥಿತರಿದ್ದರು.