ಅರಸು ಸಂಸ್ಥೆ ಸಂಸ್ಥೆಗಳಿಗೆ ಮಾದರಿ- ಡಿಸಿಅಕ್ರಂಪಾಷ ಶ್ಲಾಘನೆ
ಕೋಲಾರ,ಆ.೮:ನಗರದ ಶ್ರೀ ದೇವರಾಜ ಅರಸ್ ವೈದ್ಯಕೀಯ ಮತ್ತು ಉನ್ನತ ಶಿಕ್ಷಣ ಸಂಶೋಧನ ಸಂಸ್ಥೆ ಹಾಗೊ ಆರ್.ಎಲ್. ಜಾಲಪ್ಪ ಆಸ್ಪತ್ರೆ ವತಿಯಿಂದ ಕೇರಳದ ವಯನಾಡಿನಲ್ಲಿ ನಡೆದಿರುವ ಅತಿವೃಷ್ಟಿಯ ಸಂತ್ರಸ್ಥರಿಗೆ ಪರಿಹಾರ ನಿಧಿ ಒಂದು ಕೋಟಿ ರೂಗಳನ್ನು ಜಿಲ್ಲಾಧಿಕಾರಿಗಳ ಮೂಲಕ ವಯನಾಡು ಜಿಲ್ಲಾಡಳಿತಕ್ಕೆ ನೀಡಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಜಿ.ಹೆಚ್.ನಾಗರಾಜ್ ತಿಳಿಸಿದರು,
ನಗರದ ಶ್ರೀ ದೇವರಾಜ ಅರಸ್ ವೈದ್ಯಕೀಯ ಮತ್ತು ಉನ್ನತ ಶಿಕ್ಷಣ ಸಂಶೋಧನ ಸಂಸ್ಥೆಯ ಕಚೇರಿಯಲ್ಲಿ ಜಿಲ್ಲಾಧಿಕಾರಿ ಅಕ್ರಂಪಾಷ ಅವರಿಗೆ ಒಂದು ಕೋಟಿ ರೂಗಳ ಚೆಕ್ ವಿತರಿಸಿದ ಅವರು ಮಾತನಾಡಿ ವಯನಾಡಿನಲ್ಲಿ ಅತಿವೃಷ್ಟಿಯಿಂದ ಸುಮಾರು ೫೦೦ ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಾಪ್ಪಿರುವುದು ಖೇದನಿಯ ಸಂಗತಿಯಾಗಿದೆ ಎಂದರು.
ಕರ್ನಾಟಕ ರಾಜ್ಯ ಸರ್ಕಾರವು ವಸತಿಹೀನರಿಗೆ ೧೦೦ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿರುವುದು ಸ್ವಾಗತಾರ್ಹವಾಗಿದೆ. ರಾಜ್ಯದಲ್ಲಿನ ಉದ್ಯಮಿಗಳು ಸಹ ಕೋಟ್ಯಾಂತರ ರೂಪಾಯಿ ದೇಣಿಗೆ ನೀಡುವ ಮೂಲಕ ಮಾನವೀಯತೆ ತೋರುವಂತಾಗ ಬೇಕು, ಇಂಥಹ ಘಟನೆಗಳು ನಡೆಯ ಬಾರದಾಗಿತ್ತು. ಇದೊಂದು ನೋವಿನ ಸಂಗತಿಯಾಗಿದೆ ಎಂದ ಅವರು ನಮ್ಮ ಸಂಸ್ಥೆಯಲ್ಲಿ ಕೇರಳ ಸೇರಿದಂತೆ ಅನೇಕ ರಾಜ್ಯಗಳ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಕೆಲಸ ನಿರ್ವಹಿಸುತ್ತಿದ್ದಾರೆ. ಎಲ್ಲರನ್ನು ಮಾನವೀಯತೆ ದೃಷ್ಟಿಯಿಂದ ಕಂಡು ಸಹಾಯದ ಹಸ್ತ ಚಾಚುವಂತಾಗ ಬೇಕೆಂದರು,
ಕೇರಳದ ವಯನಾಡಿನಲ್ಲಿ ನಡೆದಿರುವಂತ ದುರಂತಗಳನ್ನು ನಾವೆಲ್ಲಾ ದೃಶ್ಯಮಾದ್ಯಮಗಳ ಮೂಲಕ ಕಂಡಿದ್ದು ಅವರಿಗೆ ನಮ್ಮ ಸಂಸ್ಥೆಯ ಪರವಾಗಿ ನೆರವು ನೀಡಲು ನಿರ್ಧರಿಸಿ ಎಲ್ಲಾ ನೌಕರರು ಒಂದು ದಿನ ವೇತನ ೩೦ ಲಕ್ಷ ರೂ ಸೇರಿದಮತೆ ಉಳಿದ ೭೦ ಲಕ್ಷ ರೂಗಳನ್ನು ಸಂಸ್ಥೆಯ ವತಿಯಿಂದ ದೇಣಿಗೆ ನೀಡಲು ನಿರ್ಧರಿಸಿ ಇಂದು ಜಿಲ್ಲಾಧಿಕಾರಿಗಳ ಮೂಲಕ ಒಂದು ಕೋಟಿ ರೂಗಳ ಚೆಕ್‌ನ್ನು ಕೇರಳ ರಾಜ್ಯದ ವಯನಾಡು ಜಿಲ್ಲಾಧಿಕಾರಿಗಳಿಗೆ ಹಸ್ತಂತರಿಸಲಾಗುತ್ತಿದೆ ಎಂದು ಹೇಳಿದರು,
ನಮ್ಮ ಸಂಸ್ಥೆಯು ನೀಡುತ್ತಿರುವ ದೇಣಿಗೆ ನೀಡುತ್ತಿರುವುದು ಇತರರಿಗೆ ಪ್ರೇರಣೆಯಾಗ ಬೇಕು, ಸಂಕಷ್ಟದಲ್ಲಿರುವವರಿಗೆ ಸಹಾನುಭೂತಿ ತೋರುವುದು ಮಾನವೀಯತೆಗೆ ಮೆರುಗು ನೀಡಲಿದೆ ಎಂದು ಅಭಿಪ್ರಾಯ ಪಟ್ಟರು,
ಜಿಲ್ಲಾಧಿಕಾರಿ ಅಕ್ರಂಪಾಷ ಅವರು ಸಂಸ್ಥೆಯ ಅಧ್ಯಕ್ಷರು ನೀಡಿದ ಒಂದು ಕೋಟಿ ರೂ ಚೆಕ್‌ನ್ನು ಸ್ವೀಕರಿಸಿ ಮಾತನಾಡುತ್ತಾ ವಯನಾಡು ಪ್ರಕೃತಿಯ ವಿಕೋಪಕ್ಕೆ ತುತ್ತಾಗಿದ್ದು ಅಲ್ಲಿನ ಜನತೆ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿರುವುದರಿಂದ ಉದರ ಮನಸ್ಸಿನಿಂದ ಸ್ವಯಂ ಪ್ರೇರಿತರಾಗಿ ಯಾರೂ ಕೇಳದೆಯೇ ದೇಣಿಗೆ ನೀಡಲು ಮುಂದಾಗಿರುವ ಸಂಸ್ಥೆಯು ನಮ್ಮ ಜಿಲ್ಲೆಯಲ್ಲಿ ಪ್ರಥಮವಾಗಿದೆ ಎಂದು ಶ್ಲಾಘಸಿದರು,
ಪ್ರಕೃತಿಯ ವಿಕೋಪಕ್ಕೆ ತುತ್ತಾಗಿರುವ ವಯನಾಡಿನಲ್ಲಿ ಯಾರು ನಿರೀಕ್ಷಿಸಲಾಗದಷ್ಟು ಅವಘಾಡಗಳು ಸಂಭವಿಸಿರುವುದು ನೋವಿನ ಸಂಗತಿಯಾಗಿದೆ ಇದಕ್ಕೆ ಸ್ಪಂದಿಸಿರುವ ಸಂಸ್ಥೆಯು ಒಂದು ಕೋಟಿ ರೂಗಳನ್ನು ಉದರವಾಗಿ ದೇಣಿಗೆ ನೀಡುವ ಮೂಲಕ ಮಾನವೀಯತೆಗೆ ಮೆರುಗು ನೀಡುವಲ್ಲಿ ಶ್ರೀ ದೇವರಾಜು ಅರಸ್ ವೈದ್ಯಕೀಯ ಸಂಸ್ಥೆ ಮುಂಚೂಣಿಯಲ್ಲಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು,
ಪ್ರತಿಯೊಬ್ಬರು ಇಂಥ ಕಾರ್ಯಕ್ಕೆ ಮುಂದಾಗ ಬೇಕು. ಮುಖ್ಯವಾಗಿ ಸಂಘ ಸಂಸ್ಥೆಗಳು ಸ್ಪಂದಿಸುವಂತಾಗ ಬೇಕು, ಜೀವನ ಪರ್ಯಾಂತ ದುಡಿಮೆಯ ಆಸ್ತಿ ಪಾಸ್ತಿಗಳು ಮಾಡಿದ್ದು ಎಲ್ಲವೂ ನೆಲ ಕಚ್ಚಿ ದ್ದು ಎಲ್ಲವನ್ನು ಕಳೆದು ಕೊಂಡು ನಿರ್ಗತಿಕರಾದವರ ಬಗ್ಗೆ ಕನಿಕರ ತೋರಿ ಮಾನವೀಯತೆಯನ್ನು ಮೆರೆಯುವಂತಾಗ ಬೇಕೆಂದರು.
ಇದೇ ಸಂದರ್ಭದಲ್ಲಿ ಸಂಸ್ಥೆವತಿಯಿಂದ ಜಿಲ್ಲಾಧಿಕಾರಿ ಅಕ್ರಂಪಾಷ ಅವರನ್ನು ಸನ್ಮಾನಿಸಲಾಯಿತು,
ದೇವರಾಜು ಅರಸು ವೈದ್ಯಕೀಯ ಮತ್ತು ಉನ್ನತ ಶಿಕ್ಷಣ ಸಂಶೋಧನ ಸಂಸ್ಥೆಯ ಉಪಾಧ್ಯಕ್ಷ ರಾಜೇಂದ್ರ, ಕಾರ್ಯದರ್ಶಿ ಹನುಮಂತರಾಜು, ವಿಶ್ವವಿದ್ಯಾಲಯದ ಕುಲಪತಿ ವೆಂಗಮ್ಮ, ನೋಂದಣಿ ಅಧಿಕಾರಿ ಮುನಿನಾರಯಣ, ಜಾಲಪ್ಪ ಆಸ್ಪತ್ರೆಯ ಅಧೀಕ್ಷಕ ಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು,