ಬೀದಿ ನಾಯಿಗಳ ಕಾಟ: ಪಾಲಿಕೆ ಸಭೆಯಲ್ಲಿ ಪ್ರತಿಧ್ವನಿ
ಸಂಜೆವಾಣಿ ವರ‍್ತೆ,
ವಿಜಯಪುರ,ಆ.೮:ಕುಡಿಯುವ ನೀರು, ರಸ್ತೆ, ಬೀದಿ ದೀಪ, ಬೀದಿ ನಾಯಿಗಳ ಕಾಟ, ನಕಲಿ ದಾಖಲೆ ಸೃಷ್ಟಿಸಿ ಭೂ ವಂಚನೆ ಪ್ರಕರಣಗಳು ಸೇರಿದಂತೆ ಹಲವಾರು ರೀತಿಯ ಸಮಸ್ಯೆಗಳು ಮಹಾನಗರ ಪಾಲಿಕೆ ಸಭೆಯಲ್ಲಿ ಪ್ರತಿಧ್ವನಿಸಿದವು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಬುಧವಾರ ಮೇಯರ್ ಮೆಹಜಬೀನ್ ಹರ‍್ತಿ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಸಮಸ್ಯೆಗಳು ಪ್ರಸ್ತಾಪಗೊಂಡವು.
ಬೀದಿ ನಾಯಿಗಳ ಉಪಟಳ ಅಧಿಕವಾಗಿದೆ, ಚಿಕ್ಕ ಮಕ್ಕಳು ಹೊರಗಡೆ ಓಡಾಡದಂತಹ ಪರಿಸ್ಥಿತಿ ನರ‍್ಮಾಣವಾಗಿದೆ. ಕೇವಲ ಸಭೆ ನಡೆಸಿದರೆ ಯಾವ ಪ್ರಯೋಜನವೂ ಇಲ್ಲ. ಈ ಸಮಸ್ಯೆ ಪ್ರಸ್ತಾಪವಾಗುತ್ತಲೇ ಇದೆ ಹೊರತು ಯಾವ ರೀತಿ ಪರಿಹಾರವಾಗುತ್ತಿಲ್ಲ. ಬೀದಿ ನಾಯಿಗಳ ಹಾವಳಿ ನಿಯಂತ್ರಣವಾಗುತ್ತಿಲ್ಲ ಎಂದು ಸದಸ್ಯೆ ಆರತಿ ಶಹಾಪೂರ ಅಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ದನಿಗೂಡಿಸಿದ ಸದಸ್ಯೆ ವಿಮಲಾ ರಫೀಕ್‌ಅಹ್ಮದ್ ಖಾಣೆ, ಬೀದಿನಾಯಿಗಳ ಹಾವಳಿ ಕುರಿತು ಈ ಹಿಂದಿನ ಸಭೆಯಲ್ಲಿಯೂ ಪ್ರಸ್ತಾಪ ಮಾಡಿದ್ದೆ. ಈ ಹಾವಳಿ ನಿಯಂತ್ರಣವಾಗಿಲ್ಲ. ಕುಡಿಯುವ ನೀರು, ಬೀದಿ ನಾಯಿಗಳ ಸಮಸ್ಯೆ ರ‍್ಚೆಯಾಗುತ್ತಲೇ ಇದೆ. ಪರಿಹಾರ ಮಾತ್ರ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಮಾತನಾಡಿ, ಟೆಂಡರ್ ಪ್ರಕ್ರಿಯೆ ಮಾಡಿ, ರ‍್ಕಾರದ ನಿಯಮಾನುಸಾರ ಬೀದಿ ನಾಯಿ ಹಾವಳಿ ನಿಯಂತ್ರಣ ಕ್ಕೆ ಕ್ರಮ ಕೈಗೊಳ್ಳಲಾಗುವುದು. ಟೆಂಡರ್ ಪ್ರಕ್ರಿಯೆ ಮುಂದುವರಿಸಲು ಇಲ್ಲವೇ ಹೊಸ ಟೆಂಡರ್ ಕರೆಯಲು ಸಭೆಯ ತರ‍್ಮಾನದಂತೆ ನಡೆದುಕೊಳ್ಳಲಾಗುವುದು ಎಂದರು.
ಆರೋಗ್ಯಾಧಿಕಾರಿ ಡಾ. ಎಸ್.ಜೆ. ಲಕ್ಕಣ್ಣವರ ಮಾತನಾಡಿ, ಶ್ವಾನಗಳನ್ನು ಸ್ಥಳಾಂತರ ಮಾಡಲು ಅನೇಕ ಕಾನೂನಾತ್ಮಕ ಅಂಶಗಳು ಅಡ್ಡಿಯಾಗಿವೆ. ಈ ಹಿಂದೆ ಈ ಕರ‍್ಯಾಚರಣೆ ನಡೆಸಿದ ಸಂರ‍್ಭದಲ್ಲಿ ಕರ‍್ಟ್ ನಮಗೆ ಛೀಮಾರಿ ಹಾಕಿದೆ ಎಂದು ಸಭೆಯ ಗಮನಕ್ಕೆ ತಂದರು.
ನಕಲಿ ಭೂ ದಾಖಲೆ ವಿಷಯ ಪ್ರತಿಧ್ವನಿ
ಪಾಲಿಕೆ ಸದಸ್ಯ ರಾಜಶೇಖರ ಮಗಿಮಠ ಮಾತನಾಡಿ, ನಕಲಿ ದಾಖಲೆ ಸೃಷ್ಟಿಸಿ ಪಾಲಿಕೆ ಆಸ್ತಿ ಕಬಳಿಕೆಯ ವಿಷಯ ಸಹ ಪ್ರಬಲವಾಗಿ ಮಂಡಿಸಿದರು. ಆಸ್ತಿ ಕಬಳಿಕೆಗೆ ಸಂಬಂಧಿಸಿದAತೆ ಮಾಹಿತಿ ನೀಡಿ ಎಂದು ವಿವರಣೆ ಕೇಳಿದರೂ ಉತ್ತರ ಕೊಟ್ಟಿಲ್ಲ ಏಕೆ ಎಂದು ಮೇಯರ್ ಅವರನ್ನು ಪ್ರಶ್ನಿಸಿದರು.
ಸದಸ್ಯರು ಕೇಳಿದ ಮಾಹಿತಿಯನ್ನು ನೀಡಲು ವಿಳಂಬ ಮಾಡಿದ ಅಧಿಕಾರಿ ವಿರುದ್ಧ ವಾರದಲ್ಲಿ ಕ್ರಮ ಕೈಗೊಳ್ಳುವುದು, ಈ ಪ್ರಕರಣವನ್ನು ಸಮಗ್ರ ತನಿಖೆ ನಡೆಸುವುದಾಗಿ ತಿಳಿಸಿದರು.
ಸದಸ್ಯ ಮಗಿಮಠ ಮಾತು ಮುಂದುವರೆಸಿ, ಮಹಾನಗರ ಪಾಲಿಕೆ ಅಧಿಕಾರಿಗಳು ಶಾಮೀಲು ಆಗಿರುವ ಶಂಕೆ ಇದೆ. ಹೀಗಾಗಿ ಈ ಬಗ್ಗೆ ತನಿಖೆ ಆಗಬೇಕು ಎಂದರು. ಮಾಹಿತಿ ನೀಡಲು ವಿಳಂಬ ಮಾಡಿದವರ ಮೇಲೂ ಕ್ರಮ ಆಗಬೇಕು, ಮಹಾನಗರ ಪಾಲಿಕೆ ಆಸ್ತಿಯ ಹಕ್ಕನ್ನೇ ಬೇರೊಬ್ಬರಿಗೆ ಬಿಟ್ಟುಕೊಡಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಸದಸ್ಯ ಶಿವರುದ್ರ ಬಾಗಲಕೋಟೆ ಮಾತನಾಡಿ, ಹಿರಿಯ ಅಧಿಕಾರಿಗಳು ಶಾಮೀಲು ಇಲ್ಲದೇ ಈ ರೀತಿಯ ಪ್ರಕರಣ ನಡೆಯಲು ಸಾಧ್ಯವಿಲ್ಲ, ಅಮಾಯಕನ ಮೇಲೆ ಕ್ರಮ ಕೈಗೊಂಡಿದ್ದೀರಿ. ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ತಂಡ ರಚಿಸಬೇಕು ಎಂದರು.
ಉಪಮೇಯರ್ ದಿನೇಶ ಹಳ್ಳಿ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಪಾಲಿಕೆ ಸದಸ್ಯರು, ನಾಮನರ‍್ದೇಶಿತ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.