ನಿವೃತ್ತ ಪೊಲೀಸ್ ಸಿಬ್ಬಂದಿಗಳ ಬೇಡಿಕೆಗಳ ಈಡೇರಿಕೆ ಮನವಿ
ಕೋಲಾರಆ,೮:ಕರ್ನಾಟಕ ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲಿ ನಿವೃತ್ತ ಪೊಲೀಸ್ ಸಿಬ್ಬಂದಿಗೆ ನೌಕರರ ಭವನ, ವ್ಯೆದ್ಯಕೀಯ ಸಂಪೂರ್ಣ ವೆಚ್ಚದ ಬಿಲ್ಲ್ ಮರುಪಾವತಿ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೊಲೀಸ್ ಮಹಾ ನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರಿಗೆ ಕೋಲಾರ ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್ ರವರ ಮುಖಾಂತರ ನಿವೃತ್ತ ಎ.ಎಸ್.ಐಗಳಾದ ಕೆ.ಎನ್.ರವೀಂದ್ರನಾಥ್, ಟೈಗರ್ ವೆಂಕಟೇಶ್, ಬೆಗ್ಲಿ ಮುನಿಕೃಷ್ಣಪ್ಪ ರವರು ಮನವಿಯನ್ನು ಸಲ್ಲಿಸಿದರು.
ಕರ್ನಾಟಕ ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ ನಿರ್ವಹಿಸುವಂತಹ ಪೊಲೀಸ್ ಪೇದೆಗಳು, ಮುಖ್ಯಪೇದೆಗಳು, ಎ. ಎಸ್.ಐ, ಮತ್ತು ಪಿ.ಎಸ್.ಐ ಸಿಬ್ಬಂದಿ ವರ್ಗದವರುಗಳು ತಮ್ಮ ಜೀವದ ಹಂಗನ್ನು ತೊರೆದು, ರಾತ್ರಿ ಹಗಲೆನ್ನದೆ ದುಡಿದು, ಚಳಿ, ಮಳೆ, ಬಿಸಿಲು, ಗಾಳಿಗಳುನ್ನು ಲೆಕ್ಕಿಸದೆ ದುಡಿದು ನಿವೃತ್ತಿ ಹೊಂದುವ ಸಮಯಕ್ಕೆ ಬಹುತೇಕರು ವಿವಿಧ ರೋಗಗಳಿಂದ ಪೀಡಿತರಾಗಿರುತ್ತಾರೆ ಮತ್ತು ದೇಹವು ಅವರತ ನಿರಂತರ ಪರಿಶ್ರಮದ ಪರಿಣಾಮವಾಗಿ ಬಳಲಿ ಬೆಂಡಾಗಿರುತ್ತಾರೆ.
ನಿವೃತಿ ನಂತರದ ದಿನಗಳಲ್ಲಿ ತಾವುಗಳು ಅನುಭವಿಸುವಂತಹ ಕಷ್ಟ ಕಾರ್ಪಣ್ಯಗಳ ಕುರಿತು ತಮ್ಮಗೆ ಸಿಗಬೇಕಾದಂತಹ ಇಲಾಖೆ ಸೌಲಭ್ಯಗಳು ಸಿಗದಂತಾದಾಗ ಮತ್ತು ನಿವೃತ್ತಿ ನೌಕರರ ಕ್ಷೇಮಭಿವೃದ್ಧಿಯ ಕುರಿತು ಚಿಂತಿಸಿ ಒಗ್ಗಟಾಗಿ ಶ್ರಮಿಸಲು ಒಂದು ಕಡೆ ಸೇರಿ ಚರ್ಚಿಸಲು ಮತ್ತು ಕಾರ್ಯಪ್ರವೃತ್ತಿರಾಗಲು ಯಾವುದೇ ಖಾಯಂ ನೆಲೆ ಹಾಗು ಸ್ಥಳವಿಲ್ಲದೆ ಒದ್ದಾಡುವಂತಾಗಿದೆ.
ಸಮಾಜಕ್ಕಾಗಿ, ಸಮಾಜದ ಜನರ ರಕ್ಷಣೆಗಾಗಿ, ಸಮಾಜದ ಸುರಕ್ಷಾತೆಗಾಗಿ, ಭಯರಹಿತ ವಾತಾವರಣದ ನಿರ್ಮಾಣಕ್ಕಾಗಿ ತಮ್ಮ ಜೀವಗಳನ್ನೇ ಮೂಡುಪಾಗಿಟ್ಟು ಶ್ರಮಿಸಿದಂತಹ ಈ ವರ್ಗಕ್ಕೆ ನಿವೃತ್ತಿ ನಂತರ ಯಾವುದೇ ಆಸರೆ, ನೆಲೆ ಇಲ್ಲಿದಂತಾಗಿರುವುದು ದುರಂತದ ಸಂಗತಿಯಾಗಿದೆ ಎಂದು ಮನವಿಯಲ್ಲಿ ಕೋರಿದ್ದಾರೆ
ತಮ್ಮ ಬೇಡಿಕೆಗಳಾದ ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲಿ ನಿವೃತ್ತಿ ಪೊಲೀಸ್ ಸಿಬ್ಬಂದಿಯ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡವನ್ನು ಪ್ರಾರಂಭಿಸಬೇಕು.. ನಿವೃತ್ತಿ ಪೊಲೀಸ್ ಸಿಬ್ಬಂದಿಯ ವ್ಯೆದ್ಯ ಕೀಯ ವೆಚ್ಚದ ಸಂಪೂರ್ಣ ಹಣವನ್ನು ಇತರೆ ಕಾರ್ಯನಿರತ ಸಿಬ್ಬಂದಿಗೆ ಮರು ಪಾವತಿಸುತ್ತಿರುವಂತೆ ಇವರಿಗೂ ಸಂಪೂರ್ಣ ಮರುಪಾವತಿಗೆ ಆದೇಶಿಸಬೇಕು. ನಿವೃತ್ತಿ ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದವರ ಮಕ್ಕಳಿಗೆ ಪೊಲೀಸ್ ಇಲಾಖೆಯ ಗ್ರೂಪ್ ಡಿ ಮತ್ತು ಗ್ರೂಪ್ ಸಿ ನೇಮಕಾತಿಯಲ್ಲಿ ಶೇಕಡಾ ೧೦%ರಸ್ಟು ಮೀಸಲಾತಿಯನ್ನು ಕಲ್ಪಿಸಬೇಕು. ನಿವೃತ್ತಿ ಪೊಲೀಸ್ ಸಿಬ್ಬಂದಿಯವರು ಪ್ರವಾಸ ಮಾಡುವಾಗ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣದರದಲ್ಲಿ ರಿಯಾಯಿತಿ ನೀಡಬೇಕು ಸೇರಿ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿದರು.