ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಸಿಗುವ ಉಚಿತ ರಿಯಾಯಿತಿ ದರದ ಸೌಲಭ್ಯಗಳನ್ನು ಸದ್ಬಳಿಸಿ
ಕೋಲಾರ,ಆ,೮-ನಗರದ ಆರ್.ಎಲ್. ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಜನಪರವಾಗಿ ಉಚಿತ ಮತ್ತು ರಿಯಾಯಿತಿ ದರದಲ್ಲಿ ಹಲವಾರು ಆರೋಗ್ಯ ಸೇವೆಗಳು ಲಭ್ಯವಾಗಲಿದ್ದು ಸಾರ್ವಜನಿಕರು ಇವುಗಳನ್ನು ಸದ್ಬಳಿಸಿ ಕೊಳ್ಳುವಂತಾಗ ಬೇಕೆಂದು ಸಂಸ್ಥೆಯ ಅಧ್ಯಕ್ಷ ಜಿ.ಹೆಚ್.ನಾಗರಾಜ್ ಕರೆ ನೀಡಿದರು.
ಸಂಸ್ಥೆಯ ಕಚೇರಿಯಲ್ಲಿ ಮಾದ್ಯಮದವ ರೊಂದಿಗೆ ಅವರು ಮಾತನಾಡುತ್ತಾ ಆರ್.ಎಲ್. ಜಾಲಪ್ಪ ಆಸ್ಪತ್ರೆ ನಗರದಲ್ಲಿರುವುದರಿಂದ ಬೆಂಗಳೂರಿನಲ್ಲಿ ಸಿಗುವಂತ ಹೈಟೆಕ್ ಆಸ್ಪತ್ರೆಗಳ ಎಲ್ಲಾ ವೈದ್ಯಕೀಯ ಸೌಲಭ್ಯಗಳನ್ನು ಕಡಿಮೆ ದರದಲ್ಲಿ ಕೋಲಾರ ಜಿಲ್ಲಾ ಕೇಂದ್ರದಲ್ಲಿಯೇ ಲಭ್ಯವಾಗಲಿದೆ. ಎಲ್ಲಾ ರೋಗಗಳಿಗೂ ಅನುಭವಿ ತಜ್ಞರು ನಮ್ಮಲಿ ಇದ್ದಾರೆ. ಗುಣಮಟ್ಟದ ವಿಧೇಶಿ ಅಧುನಿಕ ತಂತ್ರಜ್ಞಾನದ ಯಂತ್ರಗಳು ನಮ್ಮಲ್ಲಿ ಇದೆ. ನಮ್ಮಲ್ಲಿರುವಂತ ಅಧುನಿಕ ಯಂತ್ರಗಳು ಬೆಂಗಳೂರಿನ ಹೆಸರಾಂತ ಆಸ್ಪತ್ರೆಗಳಲ್ಲೂ ಇಲ್ಲ. ಹಾಗಾಗಿ ನಮ್ಮ ಆಸ್ಪತ್ರೆಯಲ್ಲಿ ಸೇವೆ ಪಡೆಯುವುದರಿಂದ ಸಾರ್ವಜನಿಕರಿಗೆ ಅಮುಲ್ಯವಾದ ಸಮಯ ಹಾಗೂ ಹಣ ಎರಡು ಉಳಿಯಲಿದೆ. ಜೂತೆಗೆ ಅನೇಕ ಉಚಿತವಾದ ಸೌಲಭ್ಯಗಳನ್ನು ಸಂಸ್ಥೆಯು ನೀಡುತ್ತಿದೆ. ಈ ಕುರಿತು ಸಾರ್ವಜನಿಕರಿಗೆ ಸಮರ್ಪಕವಾದ ಮಾಹಿತಿ ಸಿಗದೆ ಸೌಲಭ್ಯಗಳಿಂದ ವಂಚಿತರಾಗುವುದನ್ನು ತಪ್ಪಿಸಲು ಮಾದ್ಯಮಗಳು ಸಹಕಾರ ನೀಡ ಬೇಕೆಂದು ಮನವಿ ಮಾಡಿದರು,
ಹೊರ ರೋಗಿಗಳ ವಿಭಾಗದಲ್ಲಿ ಓಪಿಡಿ ಕಾರ್ಡ್,ವೈದ್ಯರ ಶುಲ್ಕ,ಸಾಮಾನ್ಯ ಆರೋಗ್ಯ ತಪಾಸಣೆ,ಚರ್ಮರೋಗ ಚಿಕಿತ್ಸೆಗಳು ಉಚಿತವಾಗ ಸಿಗಲಿದೆ. ಒಳ ರೋಗಿಗಳ ವಿಭಾಗದಲ್ಲಿ ಸಮಾನ್ಯ ವಾರ್ಡ್‌ಗಳ ಬೆಡ್, ವೈದ್ಯರ ಮತ್ತು ಶಸ್ತ್ರ ಚಿಕಿತ್ಸೆ ಶುಲ್ಕಗಳು, ಸಾಮಾನ್ಯ ಹೆರಿಗೆ, ಮತ್ತು ಸಿಸೇರಿಯನ್ ಹೆರಿಗೆ, ಕಣ್ಣಿನ ಶಸ್ತ್ರ ಚಿಕಿತ್ಸೆ ಮತ್ತು ಕನ್ನಡಗಳು ಉಚಿತವಾಗಿ ಲಭ್ಯವಾಗಲಿದೆ ಎಂದರು,
ಶಸ್ತ್ರ ಚಿಕಿತ್ಸೆಗಳಿಗೆ ವಿಶೇಷವಾದ ಪ್ಯಾಕೇಜ್‌ಗಳಿವೆ, ಗರ್ಭಕೋಶ ಶಸ್ತ್ರ ಚಿಕಿತ್ಸೆ,, ಸಾಮಾನ್ಯ ಶಸ್ತ್ರ ಚಿಕಿತ್ಸೆಗಳು ಕೇವಲ ರೂ ೫ ಸಾವಿರ, ಸಂತಾನ ಹರಣ ಶಸ್ತ್ರ ಚಿಕಿತ್ಸೆ ರೂ ೧೦ ಸಾವಿರ ನಿಗಧಿ ಪಡೆಸಲಾಗಿದೆ. ಎಕ್ಸ್ ರೇ, ಆಲ್ಟ್ರಾ ಸೌಂಡ್ ಸಿ.ಟಿ. ಸ್ಕಾನ್, ಎಂ.ಆರ್.ಐ. ಸ್ಕ್ಯಾನ್, ಲ್ಯಾಬೋರೇಟರಿ ಮತ್ತು ರಕ್ತ ಪರೀಕ್ಷೆಗಳು ರಿಯಾಯಿತಿ ಸೇವೆಗಳಲ್ಲಿ ದೊರಕಲಿದೆ ಎಂದು ಹೇಳಿದರು,
ಪ್ರಸಕ್ತ ಸಾಲಿನಲ್ಲಿ ಹೊಸ ಸೇವೆಗಳನ್ನು ಪ್ರಾರಂಭಿಸಿದೆ. ರಕ್ತ ವರ್ಗಾವಣೆ ವೈದ್ಯ ವಿಭಾಗ, ಥಲಸ್ಸೆಮಿಯಾ-ರಕ್ತ ವರ್ಗಾವಣೆ ಮತ್ತು ಔಷಧಿಗಳು ಉಚಿತ, ಹಿಮೋಫಿಲಿಯಾ-ರಿಯಾಯಿತಿ ದರದಲ್ಲಿ ಔಷಧಿಗಳು, ಎ.ಆರ್.ಟಿ.( ಏಡ್ಸ್ ರೋಗ) ಸೆಂಟರ್ ಉಚಿತ ಸೇವೆ, ಮಕ್ಕಳ ಮಧು ಮೇಹ ಚಿಕಿತ್ಸಾ ಘಟಕ- ಇನ್ಸುಲಿನ್ ಉಚಿತ ಆಹಾರ ಪೋಷಣೆ ಪದ್ದತಿ ವಿಭಾಗ ಬಂಜೆತನ ಚಿಕಿತ್ಸೆ ವಿಭಾಗ ಮಕ್ಕಳ ಪುನರ್ ಚೇತನ ಚಿಕಿತ್ಸಾಲಯಗಳ ಸೇವೆಗಳು ಪ್ರಾರಂಭಿಸಿವೆ ಎಂದರು.
ವಿಮೆ ಕಂಪನಿಗಳಾದ ಮೆ ಅಸಿಸ್ಟ್ ,ಪ್ಯಾರಾಮೌಂಟ್, ಐ.ಸಿ.ಐ.ಸಿ.ಐ. ಲೊಂಬಾಡ್, ಕೇರ್ ಹೆಲ್ತ್, ಎಸ್.ಬಿ.ಐ. ಯೂನೈಟೆಡ್ ಹೆಲ್ತ್ ಕೇರ್, ಪ್ಯೊಚರ್, ಜನರಲ್ ಇನ್ಸೂರೆನ್ ಕಂಪನಿಗಳಿಗೆ ಮಾನ್ಯತೆ ನೀಡಲಿದೆ. ಕಾರ್ಪೋರೇಟ್ ಕಂಪನಿಗಳು ಬಿ.ಇ.ಎಂ.ಎಲ್. ಹೊಂಡಾ ಮೋಟರ್‍ಸ್ ಟಾಟಾ ಎಲೆಕ್ಟ್ರಾನಿಕ್, ಭುವಲ್ಕ , ವಿಶ್ವಕರ್ಮ, ನೀಲ್ ಮೆಟಲ್ ಇವುಗಳನ್ನು ಸಹ ಒಳಗೊಂಡಿದೆ ಎಂದ ಅವರು ಉಚಿತ ಆರೋಗ್ಯ ಶಿಬಿರ ಸೇವೆಗಳನ್ನು ಗ್ರಾಮೀಣಾ ಭಾಗದಲ್ಲಿ ಮೊಬೈಲ್ ಸರ್ವಿಸ್ಸ್ ನೀಡಲಿದೆ. ವೃದ್ದಾಶ್ರಮ ಮತ್ತು ಮಕ್ಕಳ ಆಶ್ರಮದ ಸದಸ್ಯರಿಗೆ ಮಾನಸಿಕ, ನಿರ್ಗತಿಕ, ಶೋಷಿತ, ಅನಾಥ್ ಮತ್ತು ಕಡುಬಡವರಿಗೆ ಕಣ್ಣಿನ ಪರೀಕ್ಷೆ ಮತ್ತು ರಕ್ತದಾನ ಶಿಬಿರಗಳ ಸೇವೆಗಳನ್ನು ನೀಡಲಿದೆ,ಜನರಿಕ್ ಔಷಧಿಗಳು ಉಚಿತವಾಗಿ ಲಭ್ಯವಿದೆ ಎಂದು ವಿವರಿಸಿದರು