ಕುಕ್ಕೆಗೆ ನಟ ಯಶ್ ಕುಟುಂಬ ಭೇಟಿ – ವಿಶೇಷ ಪೂಜೆ ಸಲ್ಲಿಕೆ
ಸುಳ್ಯ:ಸುಳ್ಯ ಕನ್ನಡ ಚಿತ್ರ ರಂಗದ ನಟ ರಾಕಿಂಗ್ ಸ್ಟಾರ್ ಯಶ್ ಕುಟುಂಬ ಸಮೇತ ಮಂಗಳವಾರ ಕುಕ್ಕೆಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದರು.
ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳೊಂದಿಗೆ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಸುಬ್ರಹ್ಮಣ್ಯ ದೇವರ ದರುಶನ ಪಡೆದರು. ಬಳಿಕ ನರಸಿಂಹ ದೇವರ ಹಾಗೂ ಕ್ಷೇತ್ರದ ದೈವ ಹೊಸಲಿಗಮ್ಮ ದೈವದ ಗುಡಿಯಲ್ಲಿ ಕೂಡ ಪೂಜೆ ಸಲ್ಲಿಸಿದರು. ಕ್ಷೇತ್ರದಲ್ಲಿನ ಅನ್ನಧಾನಕ್ಕೆ ಒಂದು ಲಕ್ಷ ದೇಣಿಗೆ ಕೂಡ ನೀಡಿದ್ದಾರೆ. ಕ್ಷೇತ್ರಕ್ಕೆ ಆಗಮಿಸಿದ ಸಂದರ್ಭ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದ ದೃಶ್ಯ ಕೂಡ ಕಂಡು ಬಂತು.