ಸಂಪಾಜೆ – ರಬ್ಬರ್ ಸ್ಮೋಕ್ ಹೌಸಿಗೆ ಬೆಂಕಿ – ಅಪಾರ ನಷ್ಟ
ಸುಳ್ಯ:ಸುಳ್ಯ ರಬ್ಬರ್ ಸ್ಮೋಕ್ ಹೌಸಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ರಬ್ಬರ್ ಸ್ಕ್ರಾಪ್, ಶೀಟು ಸೇರಿದಂತೆ ಸ್ಮೋಕ್ ಹೌಸ್ ಪೆಟ್ಟಿಗೆಗೆ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದ ಘಟನೆ ಸಂಪಾಜೆಯಲ್ಲಿ ಸೋಮವಾರ ಸಂಭವಿಸಿದೆ.
ಕೊಡಗು ಸಂಪಾಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ ಅವರ ಮನೆಯ ಸಮೀಪದಲ್ಲಿರುವ ರಬ್ಬರ್ ಸ್ಮೋಕ್ ಹೌಸ್‌ನಲ್ಲಿ ಸೋಮವಾರ ಆಕಸ್ಮಿಕವಾಗಿ ಬೆಂಕಿ ರಬ್ಬರ್ ಸ್ಕ್ರಾಪ್ ಹಾಗೂ ಶೀಟುಗಳಿಗೆ ಬೆಂಕಿ ತಗುಲಿ ಸ್ಮೋಕ್ ಹೌಸ್ ಪೆಟ್ಟಿಗೆಗೆ ಹಾನಿಯಾಗಿದೆ. ಕೂಡಲೇ ರಮಾದೇವಿ ಕಳಗಿ ಅವರು ಸ್ಥಳೀಯರಿಗೆ ವಿಷಯ ತಿಳಿಸಿ ಗ್ರಾ.ಪಂ. ಸದಸ್ಯ ನವೀನ, ರಬ್ಬರ್ ಟ್ಯಾಪರ್ ಗಳು ಸೇರಿ ಬೆಂಕಿ ನಂದಿಸಿದರು. ಘಟನೆಯಲ್ಲಿ ಸುಮಾರು ಐವತ್ತು ಸಾವಿರ ನಷ್ಟ ಸಂಭವಿಸಿದೆ ಎಂದು ತಿಳಿಸಿದ್ದಾರೆ.