ಚೆಂಬು ಗ್ರಾಮದ ಊರುಬೈಲಿನಲ್ಲಿ ಕೃಷಿ ತೋಟಗಳಿಗೆ ಕಾಡಾನೆ ದಾಳಿ
ಸುಳ್ಯ:ಸುಳ್ಯ ಕೃಷಿಕರ ತೋಟಗಳಿಗೆ ಕಾಡಾನೆ ದಾಳಿ ಮಾಡಿ ಕೃಷಿ ಬೆಳೆಗಳನ್ನು ನಾಶ ಮಾಡಿದ್ದು, ನಿರಂತರವಾಗಿ ಒಂಟಿ ಸಲಗದ ದಾಳಿಯಿಂದ ಚೆಂಬು ಗ್ರಾಮದ ಊರುಬೈಲು ಭಾಗದ ಕೃಷಿಕರು ಕಂಗಾಲಾಗಿದ್ದಾರೆ.
ಊರುಬೈಲಿನ ನಿಡಿಂಜಿ ವಾಸುದೇವ, ಕುಶಾಲಪ್ಪ ನಿಡಿಂಜಿ ಅವರ ತೋಟಗಳಿಗೆ ಕಾಡಾನೆ ದಾಳಿ ನಡಿಸಿದ್ದು, ಅಡಕೆ ಮರ, ತೆಂಗಿನ ಸಸಿ ಮತ್ತು ಬಾಳೆ ಗಿಡಗಳನ್ನು ಪುಡಿಗಟ್ಟಿದೆ. ಕಳೆದ ಕೆಲವು ದಿನಗಳಿಂದ ಚೆಂಬು ಗ್ರಾಮದಲ್ಲಿ ಕಾಡಾನೆ ದಾಳಿ ನಡೆಯುತ್ತಿದೆ. ಕೃಷಿ ಹಾನಿಗೆ ಕೃಷಿಕರು ಕಂಗಲಾಗಿದ್ದಾರೆ.