ಎರಡು ಮಕ್ಕಳೊಂದಿಗೆ ವಿವಾಹಿತ ಮಹಿಳೆ ನಾಪತ್ತೆ
ಮಂಗಳೂರು : ಉಳ್ಳಾಲ ಗ್ರಾಮದ ತೊಕ್ಕೊಟ್ಟು ನಿವಾಸಿ ಮಂಜುಳಾ (೩೧) ಎಂಬಾಕೆ ಜು. ೩೧ರಂದು ತನ್ನ ಇಬ್ಬರು ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಬರುವುದಾಗಿ ಹೇಳಿ ವಾಪಸ್ ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
೫ ಅಡಿ ಎತ್ತರದ, ಸಾಧಾರಣ ಶರೀರದ, ಎಣ್ಣೆ ಕಪ್ಪು ಮೈಬಣ್ಣದ, ಕೋಲು ಮುಖದ ಈಕೆ ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ. ಈಕೆಯು ತನ್ನ ೮ರ ಹರೆಯದ ಮಗ ಕೃಷ್ಣ ಮತ್ತು ೬ ವರ್ಷ ಪ್ರಾಯದ ಖುಷಿಯೊಂದಿಗೆ ನಾಪತ್ತೆಯಾಗಿದ್ದಾರೆ.
ಕೃಷ್ಣ ಮೂರುವರೆ ಅಡಿ ಎತ್ತರ, ಗೋದಿ ಮೈ ಬಣ್ಣ, ಸಾಧಾರಣ ಶರೀರ, ಕೋಲು ಮುಖ ಹೊಂದಿದ್ದು, ಕನ್ನಡ ಮತ್ತು ಇಂಗ್ಲಿಷ್ ಭಾಷೆ ತಿಳಿದಿದೆ. ೩ ಅಡಿ ಎತ್ತರದ ಖುಷಿ ಸಾಧಾರಣ ಶರೀರ, ಗೋದಿ ಮೈ ಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ತಿಳಿದಿದೆ. ಕಾಣೆಯಾದ ದಿನ ಮಕ್ಕಳಿಬ್ಬರೂ ಶಾಲಾ ಸಮವಸ್ತ್ರ ಧರಿಸಿದ್ದರು.
ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಕಂಟ್ರೋಲ್ ರೂಮ್ (೦೮೨೪-೨೨೨೦೮೦೦) ಉಳ್ಳಾಲ ಠಾಣೆ (೦೮೨೪-೨೪೬೬೨೬೯) ಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.