ಟೀಚರ್ಸ್ ಕಾಲೋನಿಯಲ್ಲಿ ಡೆಂಗ್ಯೂ ಹರಡುವ ಭೀತಿ
ಚಿತ್ರದುರ್ಗ. ಆ.೭; ಎಲ್ಲಾ ವಿದ್ಯಾವಂತರೂ, ಶಿಕ್ಷಕರು, ಅಧಿಕಾರಿಗಳು, ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳು, ವಕೀಲರು, ಮುಖ್ಯೋಪಾಧ್ಯಾಯರು, ತಾಂತ್ರಿಕ ತಜ್ಞರು, ವೈದ್ಯರು, ಪ್ರಾಧ್ಯಾಪಕರು, ಉಪನ್ಯಾಸಕರು ವಾಸವಿರುವಂತಹ ಟೀಚರ್ಸ್ ಕಾಲೋನಿಯಲ್ಲಿ, ಮನೆಮನೆಗಳಿಂದ ಹೊರ ಚೆಲ್ಲುವ ತ್ಯಾಜ್ಯದ ನೀರು, ಚಿರಂಡಿ ನೀರು, ಯುಜಿಡಿ ಪೈಪಿನ ನೀರು, ಪಾರ್ಕ್ಗಳಲ್ಲಿ ಹೊರ ಚೆಲ್ಲಿ, ಪೂರ್ತಿ ಪಾರ್ಕ್ ಅನ್ನ ಆವರಿಸಿಕೊಂಡು, ಸೊಳ್ಳೆಗಳಿಗೆ ವಾಸಸ್ಥಳವಾಗಿ ಮಾರ್ಪಾಡಾಗುತ್ತಿದೆ. ವಿದ್ಯಾವಂತರ ಇರುವಂತಹ ಬಡಾವಣೆಯಲ್ಲಿ, ನಗರಸಭೆಯವರು ಯಾವುದೇ ಸೂಕ್ತ ಕ್ರಮಗಳನ್ನು ಜರಗಿಸದೆ, ಯುಜಿಡಿ ಪೈಪಿನ ನೀರು ಪಾರ್ಕ್ಗಳಲ್ಲಿ ಹರಡುವಂತೆ ಬಿಟ್ಟು, ನಾಗರಿಕರಿಗೆ ಬದುಕಲು ಅಸಾಧ್ಯವಾದಂತಹ ಪರಿಸರ ನಿರ್ಮಾಣ ಮಾಡಿರುವುದು, ಎಷ್ಟರಮಟ್ಟಿಗೆ ನ್ಯಾಯ ಎಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್.ಸ್ವಾಮಿಯವರು ಪ್ರಶ್ನಿಸಿದ್ದಾರೆ.ಹೆಸರಿನಲ್ಲೇ ಗೌರವವನ್ನು ಸಂಪಾದಿಸಿಕೊಂಡಿರುವ ಟೀಚರ್ಸ್ ಕಾಲೋನಿ, ಬದುಕಿನಲ್ಲಿ ಇಷ್ಟೊಂದು ಕಷ್ಟಕರವಾದಂತ ವಾತಾವರಣವನ್ನ ನಿರ್ಮಾಣವಾಗಿರುವುದು ಶೋಚನಿಯವಾಗಿದೆ. ಎಲ್ಲಾ ವಿದ್ಯಾವಂತರು, ಸಣ್ಣ ಸಣ್ಣ ಅಧಿಕಾರದಲ್ಲಿರುವಂಥವರು, ಸಮಾಜ ಸೇವೆ ಮಾಡಿ ನಿವೃತ್ತರಾದಂತವರು, ಎಷ್ಟೇ ವಿನಂತಿಸಿಕೊAಡರು, ಮನವಿ ಪತ್ರಗಳನ್ನು ಸಲ್ಲಿಸಿದರು ಸಹ, ಕಾಟಾಚಾರಕ್ಕೆ ಒಂದಿಷ್ಟು ರಿಪೇರಿ ಮಾಡಿ, ಮತ್ತೆ ಮತ್ತೆ ಆ ಯುಜಿಡಿ ಪೈಪ್ನಿಂದ ಕೆಟ್ಟ ಗಲೀಜು ನೀರು, ಎರಡು ಸುಂದರವಾದ ಪಾರ್ಕ್ಗಳಲ್ಲಿ ಹೊರ ಚೆಲ್ಲಿ, ಪೂರ್ತಿ ಕೊಳಚೆ ಗುಂಡಿತರ ನಿರ್ಮಾಣ ಮಾಡಿ, ಸೊಳ್ಳೆಗಳಿಗೆ ವಾಸ ಸ್ಥಳವನ್ನು ಕಲ್ಪಿಸಿಕೊಟ್ಟು, ಈ ಸೇವೆ ಮನೋಭಾವದ ವ್ಯಕ್ತಿಗಳಿಗೆ, ಕುಟುಂಬಗಳಿಗೆ ರೋಗ ರುಜಿನಗಳು ಹರಡಲಿ, ಆರೋಗ್ಯ ಕೆಡಲಿ, ಡೆಂಗ್ಯೂ ಬಂದು ಅಸ್ವಸ್ಥರಾಗಲಿ ಎಂದು ತೊಂದರೆ ನೀಡುವ ಉದ್ದೇಶದಿಂದನೇ ಇದನ್ನ ರಿಪೇರಿ ಮಾಡದಲೇ ಹಾಗೆ ಮುಂದೂಡುತ್ತಾ ಬಂದಿರುವುದೆAದು ನಾಗರಿಕರಲ್ಲಿ ಸಂಶಯ ಮೂಡುತ್ತಿದೆ ಎಂದರು.