ಗೆಳೆತನ ಹಾಗೂ ಸದ್ಭಾವನಾ ತತ್ವಗಳೇ ರೋಟರಿ ಸಂಸ್ಥೆಗೆ ಆಧಾರಿತ –  ಮಳವಳ್ಳಿ ಎಸ್ ಎನ್.*
ಸಂಜೆವಾಣಿ ವಾರ್ತೆ
ದಾವಣಗೆರೆ ಆ ೮; ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯು ಗೆಳೆತನ ಹಾಗೂ ಸದ್ಭಾವನ ತತ್ವಗಳ ಮೇಲೆ ರಚನೆಯಾಗಿ ಇಂದು ವಿಶ್ವದಾದ್ಯಂತ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದೆ.ಈ ಹಿನ್ನಲೆಯಲ್ಲಿ ನಮ್ಮ ಸುತ್ತ-ಮುತ್ತಲಿನ ಪರಿಸರ ಸ್ವಚ್ಛತೆ ಕಾಪಾಡುವ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು , ಆ ಮೂಲಕ ಅವರ ಕೆಲಸದ ಜವಾಬ್ದಾರಿ ಹೆಚ್ಚಿಸುವುದು ರೋಟರಿಯ ಉದ್ದೇಶವಾಗಿದೆ. ರೋಟರಿಯ ಈ ಕಾರ್ಯ ಅತ್ಯಂತ ಶ್ಲಾಘನೀಯ. ಇಂತಹ  ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆಯವರು ಮಾಡಿಕೊಂಡು ಬರುತ್ತಿದ್ದಾರೆ ಎಂದು ದಾವಣಗೆರೆ ವಿದ್ಯಾನಗರ ರೋಟರಿ ಕ್ಲಬ್ ಅಧ್ಯಕ್ಷರಾದ ಮಳವಳ್ಳಿ ಎಸ್ ಎನ್ ತಿಳಿಸಿದರು.ಅವರು ಇತ್ತೀಚಿಗೆ ದಾವಣಗೆರೆ ವಿದ್ಯಾನಗರ ರೋಟರಿ ಕ್ಲಬ್ ವತಿಯಿಂದ ವಿದ್ಯಾನಗರದಲ್ಲಿ ಏರ್ಪಡಿಸಿದ ವಿಶ್ವ ಫ್ರೆಂಡ್ಶಿಪ್ ಡೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.