ಮಮ್ತಾಜ್ ಶಾಲೆ ಮಕ್ಕಳಿಂದ ಬುದ್ಧಿಮಾಂದ್ಯ ಮಕ್ಕಳಿಗೆ ಸಹಾಯ ಹಸ್ತ
ಸಂಜೆವಾಣಿ ವಾರ್ತೆ
ಹರಿಹರ ಆ 08;   ಬುದ್ಧಿಮಾಂದ್ಯ, ವಿಶೇಷ ವಿಕಲ ಚೇತನರು  ಮಕ್ಕಳ ಪಾಲನೆ, ಪೋಷಣೆಗೆ ಹೆತ್ತವರೇ ಹಿಂದೇಟು ಹಾಕುವರು. ಕೆಲವರು ಅಂಥ ಮಕ್ಕಳನ್ನು ಎಲ್ಲೋ ಬಿಟ್ಟು ಬಂದರೆ ಮತ್ತೆ ಕೆಲವರು ವಸತಿ ಶಾಲೆಗೆ ಸೇರಿಸಿ ತಮ್ಮ ಜವಾಬ್ದಾರಿಯಿಂದ ಮುಕ್ತಿ ಪಡೆಯಲು ಮುಂದಾಗುವರು. ಆದರೆ ಇಂಥ ಮಕ್ಕಳ ಬಾಳಿಗೆ  ಬೆಳಕಾಗುವ ನಿಟ್ಟಿನಲ್ಲಿ ಮಮತಾಜ್  ಶಾಲೆ ಮಕ್ಕಳಿಂದ  ಸಣ್ಣ ಪ್ರಮಾಣದ ಸಹಾಯ ಹಸ್ತ ಮತ್ತು  ನಮ್ಮ ಶಾಲೆ  ಮಕ್ಕಳಿಗೆ ಈ ಮಕ್ಕಳನ್ನು ತೋರಿಸಬೇಕೆಂದು   ನಗರದ ನಗರದ ವರವಲಯದಲ್ಲಿರುವ  ಅಮರಾವತಿಯಲ್ಲಿರುವ  ಶ್ರೀ ಹರಿಹರೇಶ್ವರ ಬುದ್ಧಿಮಾಂದ್ಯ  ವಿಶೇಷ ವಿಕಲ ಚೇತನರ  ಶಾಲೆಗೆ ಮಕ್ಕಳನ್ನು ಕರೆತಂದು  ತೋರಿಸುವಂತಹ ನಮ್ಮ ಶಾಲೆಯ ಮುಖ್ಯ ಉಪಾಧ್ಯಾಯರು ಮಾಡಿದ್ದಾರೆ ಎಂದು ಮಮ್ತಾಜ್ ಶಾಲೆಯ ವ್ಯವಸ್ಥಾಪಕ ಮಹಮ್ಮದ್ ರಫೀಕ್ ಹೇಳಿದರು.ಕೈ ಕಾಲಲ್ಲಿ ಶಕ್ತಿ ಇರೋದೆಲ್ಲ     ಬುದ್ಧಿಮಾಂದ್ಯ ವಿಶೇಷ ವಿಕಲಚೇತನರು ಅಂತ ಮಕ್ಕಳು ಓದಿನಲ್ಲಿ ಸಾಧನೆ ಮಾಡಿ ಗುರಿ ಸಾಧಿಸುತ್ತಾರೆ ನಮ್ಮ ಶಾಲೆಯ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆದು ದೇಶದ ಅತ್ಯುತ್ತಮ ಪ್ರಜೆಗಳಾಗಿ ದೇಶ ರಾಜ್ಯ ಪೋಷಕರಿಗೆ ತಾವು ವಿದ್ಯಾಭ್ಯಾಸ ಮಾಡಿದಂತಹ ಶಾಲೆಗೆ ಹೆಸರು ತರುವಂತ ಶಿಕ್ಷಣ ಪಡಬೇಕು ಈ ನಿಟ್ಟಿನಲ್ಲಿ ನಮ್ಮ ಶಾಲೆಯ ಮುಖ್ಯ ಉಪಾಧ್ಯಾಯರು ಶಿಕ್ಷಕ ಶಿಕ್ಷಕರು ಶಿಕ್ಷಣಕ್ಕೆ ಹೆಚ್ಚು ಆಸಕ್ತಿ ಕೊಡಬೇಕೆಂದು ಹೇಳಿದರು ಶಾಲೆಯ ಮುಖ್ಯ ಉಪಾಧ್ಯಾಯನಿ ಶಾಹಿದ್ ಪರ್ವೀನ್. ಶಾಲೆಯ ಮಕ್ಕಳು ಇದ್ದರು