ರಾಹುಲ್‍ಗಾಂಧಿ- ದೊಡ್ಡಮನಿ ಭೇಟಿ: ಸಮಸ್ಯೆಗಳ ಕುರಿತು ಚರ್ಚೆ
ಕಲಬುರಗಿ:ಆ.7: ನವದೆಹಲಿಯಲ್ಲಿ ಲೋಕಸಭೆಯಲ್ಲಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ನೂತನ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ಭೇಟಿ ಮಾಡಿ ಕ್ಷೇತ್ರದ ಮತ್ತು ಕಲ್ಯಾಣ ಕರ್ನಾಟಕ ಸಂಬಂಧಿಸಿದ ಸಮಸ್ಯೆಗಳ ಕುರಿತು ವಿವರಿಸಿದರು.
ಕಲ್ಯಾಣದ ಸಮಸ್ಯೆಗಳನ್ನು ಸಂಸತ್ ನಲ್ಲಿ ಪ್ರಸ್ತಾಪಿಸಲು ಮತ್ತು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂಪೂರ್ಣವಾಗಿ ಬೆಂಬಲ ನೀಡುವುದಾಗಿ ರಾಹುಲ್‍ಗಾಂಧಿ ಅವರು ಭರವಸೆ ನೀಡಿದ್ದಾರೆ ಎಂದು ಭೇಟಿ ನಂತರ ಸಂಸದ ದೊಡ್ಡಮನಿ ಅವರು ಹೇಳಿದರು.