ವಿಭೂತಿ, ರುದ್ರಾಕ್ಷಿ, ಮಂತ್ರ ಬದುಕಿನ ಸಂಪತ್ತು
ಕಲಬುರಗಿ:ಆ.7:ವಿಭೂತಿ, ರುದ್ರಾಕ್ಷಿ ಮತ್ತು ಮಂತ್ರಗಳು ಬದುಕಿನ ಸಂಪತ್ತುಗಳಾಗಿವೆ ಎಂದು ಶರಣಬಸವೇಶ್ವರ ಸಂಸ್ಥಾನದ ತಂಗಿಯರಾದ ಕು. ಶಿವಾನಿ ಎಸ್.ಅಪ್ಪ, ಕು. ಭವಾನಿ. ಎಸ್ ಅಪ್ಪ ಮತ್ತು ಕು. ಮಹೇಶ್ವರಿ ಎಸ್.ಅಪ್ಪ ಹೇಳಿದರು.
ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣಮಾಸ ಸಾಂಸ್ಕøತಿಕ ಕಾಯ9ಕ್ರಮಗಳ ಉಪನ್ಯಾಸ ಮಾಲಿಕೆಯಲ್ಲಿ ವಿಭೂತಿ, ರುದ್ರಾಕ್ಷಿ ಮತ್ತು ಮಂತ್ರದ ಮಹತ್ವ ಕುರಿತು ಬುಧವಾರ ಮಾತನಾಡಿದರು.
ಕು. ಶಿವಾನಿ ಎಸ್. ಅಪ್ಪ ಮಾತನಾಡಿ ವಿಭೂತಿ ಶಿವನಿಗೆ ಪ್ರಿಯವಾದದ್ದು ,ಜೀವನದ ಕೊನೆಯ ಹಂತದವರೆಗೂ ಬರುವುದು ವಿಭೂತಿ.ವಿಭೂತಿ ಧರಿಸುವುದರಿಂದ ಪುಣ್ಯ ಬರುತ್ತದೆ, ರೋಗಗಳು ನಿವಾರಣೆಯಾಗುತ್ತವೆ. ಮುಖದ ಕಾಂತಿ ಬೆಳಗುತ್ತದೆ. ಮೂರು ಬೆರಳುಗಳ ವಿಭೂತಿಯು ಮೊದಲನೆಯದು ಅಲಂಕಾರ, ಎರಡನೇಯದು ಅಜ್ಞಾನ ಹೋಗಲಾಡಿಸುತ್ತದೆ, ಮೂರನೇಯದು ಕೆಟ್ಟ ಗುಣಗಳನ್ನು ನಾಶ ಮಾಡುತ್ತದೆ. ವಿಭೂತಿಯು ದೇವರ ಆರಾಧನೆಗೆ ಮಾತ್ರವಲ್ಲ ಅದರಲ್ಲಿ ಬೇರೆಯ ಉಪಯೋಗಗಳಿವೆ. ವಿಭೂತಿ ಹಚ್ಚಿಕೊಳ್ಳುವುದರಿಂದ ಧನಾತ್ಮಕ ಶಕ್ತಿಯನ್ನು ಉಂಟುಮಾಡುತ್ತದೆ. ವಿಭೂತಿಯು ಕೆಮ್ಮು, ಶೀತ, ನೆಗಡಿಯನ್ನು ನಿಯಂತ್ರಿಸುತ್ತದೆ. ಇದು ದೈಹಿಕ ಉಷ್ಣತೆಯನ್ನು ಹೆಚ್ಚಿಸುತ್ತದೆ. ವಿಭೂತಿಗೆ ಯಾವುದೇ ಜಾತಿ ಇಲ್ಲ ಎಂದು ಹೇಳಿದರು.
ಕು. ಭವಾನಿ. ಎಸ್. ಅಪ್ಪ ಮಾತನಾಡಿ, ರುದ್ರ ಮತ್ತು ಅಕ್ಷ ಇದು ಸಂಸ್ಕøತ ಪದವಾಗಿದೆ.ಇದು ಪೂಜೆಗೆ ವಿಶೇಷ ಸ್ಥಾನವಿದೆ. ಆರೋಗ್ಯದ ಮನಸ್ಸಿಗೆ ಬಹಳ ಉಪಯೋಗವಿದೆ. ಮನಸ್ಸನ್ನು ನಿಯಂತ್ರಣದಲ್ಲಿರಿಸುತ್ತದೆ. ಏಕಾಗ್ರತೆ ಬೆಳೆಸುತ್ತದೆ. ದುಷ್ಟ ಶಕ್ತಿ ದೂರ ಮಾಡುತ್ತದೆ.ಶಿವನ ಮೂರನೇ ಕಣ್ಣು ರುದ್ರಾಕ್ಷಿಯಾಗಿದೆ. ರುದ್ರಾಕ್ಷಿಯನ್ನು ಏಕಮುಖ ರುದ್ರಾಕ್ಷಿ ಶಕ್ತಿಯುತವಾದ್ದು, ದ್ವಿಮುಖ ರುದ್ರಾಕ್ಷಿ ಉತ್ತಮ ನಿಧಾ9ರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಮೂರು ಮುಖದ ರುದ್ರಾಕ್ಷಿ ಬ್ರಹ್ಮ, ವಿಷ್ಣು, ಮಹೇಶ್ವರ ಆಗಿದೆ.
ಕು. ಮಹೇಶ್ವರಿ ಎಸ್ ಅಪ್ಪ ಮಾತನಾಡಿ, ಮನಾನತ್ ತ್ರಯತೇ ಇತಿ ಮಂತ್ರಃ ಆಗಿದೆ. ಮಂತ್ರವು ಧ್ವನಿ-ರಚನೆಯೋಳಗೆ ಆವರಿಸಿರುವ ದ್ವೈವತ್ವವಾಗಿದೆ, ಮಂತ್ರಗಳು ಪಠಿಸುವಾಗ ಉತ್ತಮ ಪರಿಣಾಮ ಬಿರುತ್ತವೆ. ಮನಸ್ಸು ಹೆಚ್ಚು ಹೆಚ್ಚು ಆನಂದಗೊಳ್ಳುತ್ತದೆ. ಮಂತ್ರ ಹೇಳುವುದರಿಂದ ವಿಶ್ರಾಂತಿ ತರಬಹುದು. ಓಂ ನಮಃ ಶಿವಾಯ ಎಂಬ ಮಂತ್ರವು ಮಂತ್ರಗಳ ರಾಜ ಆಗಿದೆ. ಮಂತ್ರಗಳು ಆತ್ಮದ ಶುದ್ಧೀಕರಣ ಮಾಡುತ್ತವೆ. ಸ್ಮರಣೆ ಶಕ್ತಿ ಹೆಚ್ಚಿಸುತ್ತವೆ. ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.