ಆ. 19 ರಂದು ನುಲಿಯ ಚಂದಯ್ಯ ಜಯಂತಿ ಆಚರಣೆ
ಕಲಬುರಗಿ: ಅ. 7: ಪ್ರತಿವರ್ಷವದಂತೆ ಈ ವರ್ಷವೂ ಕೂಡ ನುಲಿಯ ಚಂದಯ್ಯ ಜಯಂತಿಯನ್ನು ಆಚರಿಸಲು ಚುನುವಣಾ ತಹಶೀಲ್ದಾರರು ಪಂಪಯ್ಯ ಅವರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶನಿವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನುಲಿಯ ಚಂದಯ್ಯ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಗಸ್ಟ್ 19 ರಂದು ಡಾ.ಎಸ್.ಪಂಡಿತ್ ರಂಗಮಂದಿರದಲ್ಲಿ ಮಧ್ಯಾಹ್ನ 1 ಗಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸೂಚಿಸಿದರು.
ಎಲ್ಲ ಸರಕಾರಿ ಅರೆಸರಕಾರಿ ಕಚೇರಿಗಳಲ್ಲಿ ಬೆಳಿಗ್ಗೆ 9 ಗಂಟೆಗೆ ಆಚರಿಸಬೇಕು ಮತ್ತು ಸರಕಾರಿ ಶಾಲಾ ಕಾಲೇಜುಗಳಲ್ಲಿ ಹಾಗೂ ಅನುದಾನ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಜಯಂತಿಯನ್ನು ಆಚರಿಸಲು ತಿಳಿಸಿದರು.
ಭಾವಚಿತ್ರಕ್ಕೆ ಮಾಲಾರ್ಪಣೆ ಹೂದಾನಿಗಳಿಂದ ಆಲಂಕರಿಸಲು ಸಂಬಂದಪಟ್ಟ ಅಧಿಕಾರಿಗಳಿಗೆ ಕುಡಿಯುವ ನೀರು ಹಾಗೂ sಸ್ವಚ್ಛತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಮಾತನಾಡಿ,ನಾಡಗೀತೆ ಸಂಗೀತ ಕಾರ್ಯಕ್ರಮ ಹಾಗೂ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಲಾಗುವುದು ಎಂದರು ಸಮಾಜದ ಮುಖಂಡರು ಒಬ್ಬ ನುರಿತ ಉಪನ್ಯಾಸಕರನ್ನು ಹಾಗೂ ಒಬ್ಬ ಅಧ್ಯಕ್ಷರನ್ನು ನೇಮಿಸಬೇಕೆಂದರು.
ಈ ಒಂದು ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಬಾಬುರಾವ ಟಿ ಜಾಧವ, ರಮೇಶ ಜಾಧವ,ಸೈಬಣ್ಣ ಬಜಂತ್ರಿ, ಪ್ರಕಾಶ ಬಜಂತ್ರಿ, ಶರಣು ಬಜಂತ್ರಿ, ಸುಭಾಶ ಬಜಂತ್ರಿ, ಜಗನ್ನಾಥ ಬಜಂತ್ರಿ, ಶರಣುಬಸಪ್ಪಾ ಬಜಂತ್ರಿ, ಸಂಗೀತ ಆಳಂದ ಉಪಸ್ಥಿತರಿದ್ದರು.