ಮುಂದಿನ ತಿಂಗಳಿನಲ್ಲಿ ಬೀದಿ ವ್ಯಾಪಾರಿಗಳ ಸಮಾವೇಶ: ಸೂರ್ಯವಂಶಿ
ಕಲಬುರಗಿ,ಅ7- ಬೀದಿ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ಸಮರ್ಪಕವಾಗಿ ನಿರ್ವಹಿಸಲು ಮತ್ತು ವ್ಯಾಪಾರದಿಂದ ಲಾಭ ಗಳಿಸಲು ಹಣಕಾಸಿನ ಸಹಾಯ ಅಗತ್ಯವಾಗಿದೆ. ಕಡಿಮೆ ಬಡ್ಡಿದರದಲ್ಲಿ ಅವರಿಗೆ ಸಾಲ ನೀಡಿವ ಮೂಲಕ ಪ್ರೊತ್ಸಹಿಸಿ ವ್ಯಾಪಾರವನ್ನು ಬೆಂಬಲಿಸಲು ಹಾಗೂ ಅವರಲ್ಲಿ ಸರ್ಕಾರದ ಯೋಜನೆಗಳು ಮತ್ತು ಸ್ವಚ್ಛತೆ, ಕಾನೂನು ಸುವ್ಯವಸ್ಥೆಯ ಕುರಿತು ಜಾಗ್ರತಿ ಮೂಡಿಸಲು ಮುಂದಿನ ತಿಂಗಳು ಬೃಹತ ಸಮಾವೇಶ ಮಾಡಲಾಗುವುದು ಎಂದು ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ ಅವರು ಹೇಳಿದರು.
ನಗರದ ಸುಪರ ಮಾರುಕಟ್ಟಿ ಸಿ.ಟಿ ಬಸ್ ನಿಲ್ದಾಣದ ಹತ್ತಿರು ಇರುವ ಸಂಘದ ಕಾರ್ಯಾಲಯದಲ್ಲಿ ಬೀದಿವ್ಯಾಪಾರಿಗಳ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಆಡಳಿತ ಮಂಡಳಿಯ ವಿಶೇಷ ಸಭೆಯಲ್ಲಿ ನಿರ್ಣಯಿಸಿದಂತೆ ಮುಂದಿನ ಸೆಪ್ಟಂಬರ ತಿಂಗಳಿನಲ್ಲಿ ಸಮಾವೇಶ ಸಂಘಟಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲ್ಲದೇ ಈ ತಿಂಗಳಿನಲ್ಲಿ ಸಂಘದ 15ನೇ ವಾರ್ಷಿಕೋತ್ಸವದ ನಂತೆ ಸೆಪ್ಟಂಬರ ತಿಂಗಳಿನಲ್ಲಿ ಸರ್ವ ಸದಸ್ಯರ ಮಹಾ ಸಮಾವೇಶಕ್ಕೆ ರಾಜ್ಯ ಸರ್ಕಾರದ ಸಚಿವರು, ಸೇರಿದಂತೆ ಚುನಾಯಿತ ಜನಪ್ರತಿನಿಧಗಳನ್ನು, ಗಣ್ಯಮಾನ್ಯರನ್ನು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಆಹ್ವಾನಿಸಲಾಗುವುದು.
ಕಳೆದ ಒಂದುವರೆ ದಶಕಗಳಿಂದ ಈ ಸಂಘ ಬೀದಿಬದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ, ಬಹು ಸಂಖ್ಯೆಯಲ್ಲಿ ಸದಸ್ಯತ್ವ ಪಡೆದಿರುವ ಬೀದಿಬದಿ ವ್ಯಾಪಾರಿಗಳಿಗೆ ಸಾಲ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ, ಸ್ವಚ್ಛತೆ, ತಮ್ಮ ವೃತ್ತಿ ಕಸುಬುಗಳಲ್ಲಿ ಕೈಗೊಳ್ಳಬೇಕಾದ ವೈಜ್ಞಾನಿಕ ತರಬೇತಿಯನ್ನು ಸಹ ನೀಡಲಾಗುತ್ತಿದೆ ಎಂದು ಸೂರ್ಯವಂಶಿ ಅವರು ಹೇಳಿದರು.
ವಾಹನಗಳ ಸಂಚಾರಕ್ಕೆ ಅಡ್ಡಿಯಾಗದಂತೆ ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಬಗ್ಗೆ ಕೈಗೊಳ್ಳಬೇಕಾಗ ಅಗತ್ಯ ಮುಂಜಾಗ್ರತೆಗಳ ಕುರಿತು ಬೀದಿ ಬದಿ ವ್ಯಾಪಾರಿಗಳಿಗೆ ಸಂಚಾರಿ ನಿಯಮಗಳ ಪಾಲನೆಯ ಮಾಹಿತಿಯನ್ನು ಸಹ ಸಂಘದ ವತಿಯಿಂದ ಕಾಲಕಾಲಕ್ಕೆ ನೀಡಲಾಗುತ್ತಿದೆ. ಅಲ್ಲದೇ ಮಹಾನಗರ ಪಾಲಿಕೆ ನಿಗದಿ ಪಡಿಸಿದ ಚೌಪಾಡಿಗಳಲ್ಲಿ ಬೀದಿವ್ಯಾಪಾರ ನಡೆಸಲು ಅಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸುವಂತೆ ವಿಭಿನ್ನ ಹೋರಾಟದ ಮೂಲಕ ಸಂಘದಿಂದ ಪಾಲಿಕೆಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.