ಟೇಕ್ವಾಂಡೋ ಚಾಂಪಿಯನ್‍ಶಿಪ್‍ನಲ್ಲಿ ಸಾಧನೆ
ಕೊಲ್ಹಾರ:ಆ.7:ಪಟ್ಟಣದ ವಿಶ್ವಭಾರತಿ ವಿದ್ಯಾವರ್ಧಕ ಸಂಘದ ಯಲ್ಲಮ್ಮದೇವಿ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಕಾವ್ಯಾ ಏಳಂಗಡಿ ಹಾಗೂ ಕಲ್ಪನಾ ಹಿರೇಮಠ ಬೆಂಗಳೂರಿನಲ್ಲಿ ಜರುಗಿದ ರಾಜ್ಯ ಟೇಕ್ವಾಂಡೋ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಪಡೆದು ಶಾಲೆಯ ಕೀರ್ತಿಯನ್ನು ಬೆಳಗಿದ್ದಾರೆ. ಕಾವ್ಯ ಏಳಂಗಡಿ ಚಿನ್ನದ ಪದಕ ಹಾಗೂ ಕಲ್ಪನಾ ಹಿರೇಮಠ ಬೆಳ್ಳಿ ಪದಕ ಪಡೆದ ಪ್ರಯುಕ್ತ ವಿದ್ಯಾರ್ಥಿನಿಯರ ಸಾಧನೆಗೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ಬೆಳ್ಳುಬ್ಬಿ
ಹರ್ಷವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿನಿಯರ ಸಾಧನೆಗೆ ಶಾಲಾ ಆಡಳಿತ ಮಂಡಳಿ ಹಾಗೂ ಪಟ್ಟಣದ ನಾಗರಿಕರ ನೇತೃತ್ವದಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಆಡಳಿತಾಧಿಕಾರಿ ಬಿ.ಎಸ್ ನಿಂಬಾಳ್ಕರ್, ಚಂದ್ರಶೇಖರಯ್ಯ ಹಿರೇಮಠ, ಮಂಜುನಾಥ ತುಂಬರಮಟ್ಟಿ, ಹಿರಸಂಗಪ್ಪ ಏಳಂಗಡಿ, ಪ.ಪಂ ಸದಸ್ಯರಾದ ಬಾಬು ಬಜಂತ್ರಿ, ಅಪ್ಪಾಸಿ ಮಟ್ಟಿಹಾಳ, ಸದಾಶಿವ ಗಣಿ, ರಾಜು ತುಂಬರಮಟ್ಚಿ, ಭುವನೇಶ್ವರಿ ಮರನೂರ ಹಾಗೂ ಇನ್ನಿತರರು ಇದ್ದರು.