ತಾಳಿಕೋಟೆ ಕ.ಸಾ.ಪ ಸಮ್ಮೇಳನಕ್ಕೆ ಭರದ ಸಿದ್ಧತೆ:ತಾಳಿಕೋಟೆಯಲ್ಲಿ ವಿವಿಧೆಡೆ ರಾರಾಜಿಸುತ್ತಿರುವ ಕಟೌಟಗಳು
ತಾಳಿಕೋಟೆ:ಸೆ.30: ಅಕ್ಟೋಬರ 1 ರಂದು ಜರುಗಲಿರುವ ಕನ್ನಡ ಸಾಹಿತ್ಯ ಪರಿಷತ್ತ ನೇತೃತ್ವದಲ್ಲಿ ತಾಳಿಕೋಟೆ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗುತ್ತಿರುವ ಕಾರ್ಯಗಳನ್ನು ನೊಡಿದರೇ ಈ ಸಮ್ಮೇಳನ ಯಶಸ್ವಿಯತ್ತ ದಾಪುಗಾಲು ಹಾಕುವುದರಲ್ಲಿ ಯಾವ ಸಂದೇಹವಿಲ್ಲವೆಂದು ಹೇಳಬಹುದಾಗಿದೆ.
ತಾಳಿಕೋಟೆ ಪಟ್ಟಣದಲ್ಲಿಯ ಬಸ್ಸನಿಲ್ದಾಣ, ಕತ್ರಿ ಬಜಾರ್, ಡಾ.ಅಂಬೇಡ್ಕರ ಸರ್ಕಲ್, ಶಿವಾಜಿ ಮಹಾರಾಜ ಸರ್ಕಲ್, ಬಸವೇಶ್ವರ ಸರ್ಕಲ್‍ಗಳಲ್ಲದೆ ತಾಳಿಕೋಟೆ ವಿಜಯಪುರ, ದೇವರಹಿಪ್ಪರಗಿ ಹಾಗೂ ಗುಲ್ಬರ್ಗಾಕ್ಕೆ ತೆರಳುವ ಪ್ರಮುಖ ರಸ್ತೆಗಳ ಮದ್ಯಭಾಗದಲ್ಲಿರುವ ವಿದ್ಯುತ್ ಕಂಬಗಳಲ್ಲಿಯೂ ಸಹ ಶಾಸಕರಾದ ಸಿ.ಎಸ್.ನಾಡಗೌಡ ಅವರ ಅಲ್ಲದೇ ಶಾಸಕರಾದ ರಾಜುಗೌಡ ಪಾಟೀಲ ಅವರ ಹಾಗೂ ಕ.ಸಾ.ಪ ದ ರಾಜ್ಯಾಧ್ಯಕ್ಷರಾದ ಡಾ.ಮಹೇಷ ಜೋಶಿ, ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಗುರುಪಾದ ಘೀವಾರಿಯವರ ಮತ್ತು ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅವರವರ ಅಭಿಮಾನಿ ಬಳಗದವರ ಭಾವಚಿತ್ರದೊಂದಿಗೆ ಕಟೌಟ್‍ಗಳು ಅಲ್ಲಲ್ಲಿ ರಾರಾಜೀಸುತ್ತಲಿವೆ.
ಇದು ಅಲ್ಲದೆ ಈ ಅಕ್ಷರ ಜಾತ್ರೆಗೆ ಅಕ್ಕರೆಯ ಸ್ವಾಗತಕೋರಲು ಸಂಗಮೇಶ್ವರ ಸಭಾಭವನವು ಕೂಡ ಸಜ್ಜಾಗುತ್ತಲಿದೆ. ಆ ಭವನದ ಮುಂಭಾಗದಲ್ಲಿ ಬೃಹತ್ ಆಕಾರದ ಮೈದಾನವಿದ್ದು ಆ ಮೈದಾನದ ಎಡ-ಬಲದಲ್ಲಿ ವಿವಿಧ ನಮೂನೇಯ ಮಾರಾಟದ ಮಳಿಗೆಗಳು ನಿರ್ಮಾಣಗೊಳ್ಳುತ್ತಿರುವ ಮಳಿಗೆಗಳಲ್ಲಿ ಪುಸ್ತಕ ಮಳಿಗೆ, ಗ್ರಾಮುದ್ಯೋಗ ಸಂಭಂದಿತ ನೂಲು ನೈಗೆ ಸಂಭಂದಿತ ವಿವಿಧ ನಮೂನೆಯ ಅರಿವೆಯ ಮಳಿಗೆ ಇದು ಅಲ್ಲದೇ ಚಿತ್ರಕಲಾ ಮಳಿಗೆ ಹಾಗೂ ರೈತರಿಗೆ ಮಾಹಿತಿ ನೀಡುವಂತಹ ಕೃಷಿಗೆ ಸಂಭಂದಿತ ಮಳಿಗೆಗಳು ಸಹ ನಿರ್ಮಾಣಗೊಳ್ಳುತ್ತಲಿವೆ.
ಶಾಲಾ ಕಾಲೇಜುಗಳಿಗೆ ರಜೆ