ಜನಾರ್ಧನ ರೆಡ್ಡಿ ಬಳ್ಳಾರಿ‌ ಪ್ರವೇಶಕ್ಕೆ ಇದ್ದ ನಿರ್ಬಂಧ  ತೆರವು ವನವಾಸ ಅಂತ್ಯರಂಗೇರಲಿದೆ ಬಳ್ಳಾರಿ ರಾಜಕೀಯ ಚಿತ್ರಣ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.30: ಅಕ್ರಮ ಗಣಿಗಾರಿಕೆ, ಸಾಗಾಣಿಕೆ, ಹಣ ವರ್ಗಾವಣೆಯ ಆರೋಪ ಎದಿರಿಸುತ್ತಿರುವ ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ  ಅವರಿಗೆ ಇವರಗೆ ಇದ್ದ ಬಳ್ಳಾರಿ ಜಿಲ್ಲೆಯ ಪ್ರವೇಶಕ್ಕೆ ಇದ್ದ ನಿಷೇಧವನ್ನು ಸುಪ್ರೀಂ‌ಕೋರ್ಟು ಇಂದು ತೆರವುಗೊಳಿಸಿದ್ದು ವನವಾಸ ಅಂತ್ಯಗೊಂಡಿದೆ.  ಇದರಿಂದ ಇನ್ನು ಮುಂದೆ ಬಳ್ಳಾರಿ‌ ಜಿಲ್ಲೆಯ ರಾಜಕಾರಣ ರಂಗೇರಲಿದೆ.
ಅಕ್ರಮ ಗಣಿಗಾರಿಕೆಯ ಆರೋಪದಿಂದ ಸಿಬಿಐ 2011 ರ ಸೆ.5 ರಂದು ಬಂಧನ ಮಾಡಿ ಹೈದ್ರಬಾದಿಮ ಚಂಚಲಗುಡ ಜೈಲಿನಲ್ಲಿ ಇರಿಸಿದ ಮೇಲೆ. ಸುಪ್ರೀಂ ಕೋರ್ಟ್ ತಮ್ಮ ಪ್ರಭಾವ ಹೊಂದಿರುವ ಬಳ್ಳಾರಿ, ಅನಂತಪುರಂ ಮತ್ತು ಕರ್ನೂಲ್ ಜಿಲ್ಲೆಗಳಿಗೆ ಪ್ರವೇಶ ಮಾಡದಂತೆ ನಿರ್ಬಂಧ ಏರಿತ್ತು.  ಅದಕ್ಕಾಗಿ ಈ ಹಿಂದಿನ 2019 ಚುನಾವಣೆಯನ್ನು ಜಿಲ್ಲೆಯ ಹೊರಗಿನಿಂದ ಇದ್ದು ಸ್ನೇಹಿತ ಶ್ರೀರಾಮುಲು ಜೊತೆ ಎದುರಿಸಿದ್ದರು.
ಹಲವು ಬಾರಿ ಅನುಮತಿ ಪಡೆದು ಕೆಲ ದಿನ‌ ಬಂದು ಹೋದರು.  ಜೈಲಿನಿಂದ ಹೊರಗಡೆ ಇರಲು ಅನುಮತಿ‌ ನೀಡಿತು. ಆದರೂ ಬಳ್ಳಾರಿ ಪ್ರವೇಶಕ್ಕೆ ನಿರ್ಬಂಧ ಇತ್ತು. ಅದಕ್ಕಾಗಿ ಅವರು ಗಂಗಾವತಿಯಿಂದ ಸ್ಪರ್ಧೆ ಮಾಡಿ ಶಾಸಕರಾಗಿದ್ದಾರೆ.
ಬಳ್ಳಾರಿ ನನ್ನ ತವರು, ಜನ್ಮ ಭೂಮಿ ಇಂದಲ್ಲ ನಾಳೆ ಬರುತ್ತೇನೆ ಬಳ್ಳಾರಿಯ ಅಭಿವೃದ್ಧಿಯೇ ನನ್ನ ಕನಸು ಎಂದು ತಮ್ಮ‌ಪತ್ನಿಯನ್ನು ಕಳೆದ ಚುನಾವಣೆಯಲ್ಲಿ ಇಲ್ಲಿ ಕಣಕ್ಕಿಳಿಸಿದ್ದರು.
ಈಗ ಬಳ್ಳಾರಿಗೆ ಮುಕ್ತ ಪ್ರವೇಶಕ್ಕೆ ಅನುಮತಿ ದೊರೆತಿದ್ದರಿಂದ ಪ್ರಬಲವಾಗಿರುವ ಕಾಂಗ್ರೆಸ್ ನ್ನು ಸಮರ್ಥವಾಗಿ ಎದುರಿಸಲು ರೆಡ್ಡಿ ರೆಡಿಯಾಗುವುದಂತು ಸತ್ಯ.
 ಗುರುವಾರ ಬರ್ತಾರಂತೆ:
ಬಳ್ಳಾರಿಗೆ ಬರಲು ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಇದ್ದ ನಿರ್ಬಂಧತೆರವಾಗಿದ್ದು. ಅವರು ಗುರುವಾರ  ಅ 3 ರಂದು ತವರು ಬಳ್ಳಾರಿಗೆ ಬರಲಿದ್ದಾರಂತೆ. ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಅವರ ಬೆಂಬಲಿಗರ ಬಳಗ ಸಿದ್ದತೆ ಮಾಡಿಕೊಳ್ಳಲಿದೆಯಂತೆ.