ಕ್ರಿಕೆಟ್ ಪಂದ್ಯಾವಳಿ: ಟ್ರೋಫಿ ತುಂಗಳ ಸಿ.ಬಿ.ಎಸ್.ಇ ಮಡಿಲಿಗೆ
ಬೀಳಗಿ:ಸೆ.30: ತಾಲೂಕಿನ ಅನಗವಾಡಿಯ ಬನಶಂಕರಿದೇವಿ ವಿದ್ಯಾ ಸಂಸ್ಥೆಯ ಪ್ರತಿಷ್ಠಾನದ ಬಿ.ಎನ್.ಖೋತ ಅಂತರಾಷ್ಟ್ರೀಯ ಪಬ್ಲಿಕ್ ಶಾಲೆ ಮತ್ತು ಬಿ.ಎನ್.ಖೋತ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ವiಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ನಾಡಹಬ್ಬ ದಸರಾ ಹಬ್ಬದ ಪ್ರಯುಕ್ತ 16 ವರ್ಷದೊಳಗಿನ ಬಾಲಕರಿಗೆ ಅಂತರ್ ಪ್ರೌಢ ಶಾಲಾ ಕ್ರಿಕೆಟ್ ಪಂದ್ಯಾವಳಿಯನ್ನು ಸೆ.24,25,26 ಮತ್ತು27ರ ವರೆಗೆ ಜರುಗಿದವು. 30ಕ್ಕಿಂತ ಹೆಚ್ಚು ತಂಡಗಳು ಭಾಗವಹಿಸಿದ್ದವು.
ವಿಜಯಪುರದ ತುಂಗಳ ಸಿ.ಬಿ.ಎಸ್.ಇ ಸ್ಕೂಲ್ ಪ್ರಥಮ ಬಹುಮಾನದೊಂದಿಗೆ ರೂ.1ಲಕ್ಷ ಜೊತೆಗೆ ಕ್ರಿಕೆಟ್ ಟ್ರೋಫಿ, ಪ್ರಶಸ್ತಿ ಪತ್ರ ಪಡೆದರೆ, ಗುಳೇದಗುಡ್ಡದ ನೆಹರು ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ದ್ವಿತೀಯ ಬಹುಮಾನ ರೂ.50 ಸಾವಿ, ಪ್ರಶಸ್ತಿ ಪತ್ರ ಪಡೆದಿದೆ. ಹಾಗೂ ಬಾಗಲಕೋಟಯ ಸೈಂಟ್ ಆನ್ಸ್ ಸ್ಕೂಲ್ ಐ.ಸಿ.ಎಸ್.ಇ ತೃತೀಯ ಬಹುಮಾನದೊಂದಿಗೆ ರೂ.20 ಸಾವಿರ, ಪ್ರಶಸ್ತಿ ಪತ್ರವನ್ನು ಪಡೆದುಕೊಂಡವು. ತುಂಗಳ ಸಿ.ಬಿ.ಎಸ್.ಇ ಶಾಲೆಯ ವಿದ್ಯಾರ್ಥಿ ಮ್ಯಾನ್ ಆಫ್ ದಿ ಮ್ಯಾಚ್ ಅಮರ ಕೋಲೂರ, ಕೆ.ಎಲ್.ಇಯ ಬಸವಪ್ರಭು, ಸಿ.ಬಿ.ಎಸ್.ಇ ಸ್ಕೂಲ್, ಅಂಕಲಿಯ ವಿದ್ಯಾರ್ಥಿ ಬೆಸ್ಟ್ ಬ್ಯಾಟ್ಸಮನ್, ವಿವೇಕಾನಂದ ರಾಯಮಾನೆ, ಸೈಂಟ್ ಆನ್ಸ್ ಸ್ಕೂಲ್ ಐ.ಸಿ.ಎಸ್.ಇ ಬಾಗಲಕೋಟ ವಿದ್ಯಾರ್ಥಿ ಬೆಸ್ಟ್ ಬಾ¯ರ್ ಧೃವರಾಜ ಜಾಧವ ತಮ್ಮ ಬಹುಮಾನಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಕ್ರಿಕೆಟ್‍ನಲ್ಲಿ ವಿಜಯ ಸಾಸಿದ ಮಕ್ಕಳಿಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಖೋತ ಅಭಿನಂದನೆಗಳನ್ನು ಸಲ್ಲಿಸಿದರು. ಸಂಸ್ಥೆಯ ಸದಸ್ಯರಾದ ಶೋಭಾ ಖೋತ, ಖಜಾಂಚಿ ವಿಕ್ರಮ್ ಖೋತ, ಪ್ರಾಂಶುಪಾಲ ಸುರೇಶ ಹವಾಲ್ದಾರ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ನಿರ್ಣಾಯಕರಾದ ವಿನಾಯಕ ಕಮ್ಮಾರ, ಅನೀಲ ಕೋರಿ, ವೀಕ್ಷಕ ವಿವರಣಾಕಾರ ಜೀವನ ಗಾಯಕವಾಡ, ಶಿವನಗೌಡ ಪಾಟೀಲ ಮತ್ತು ಕಲ್ಮೇಶ ಬೀಳಗಿ, ಮಧ್ಯಸ್ಥಗಾರರು ಮಹಾಂತೇಶÀ ಚಟ್ನಳ್ಳಿ, ಪುನೀತ ಕದ್ರೊಳ್ಳಿ ಮತ್ತು ರಾಚಯ್ಯ ಚರಂತಿಮಠ, ವಿದ್ಯಾ ಬೇವಿನಕಟ್ಟಿ ನಿರ್ವಹಿಸಿದರು.