ಕಲಬುರಗಿ ವಿಭಾಗ ಮಟ್ಟದ ದಸರಾ ಸಿ.ಎಂ. ಕಪ್ ಕ್ರೀಡಾಕೂಟಕ್ಕೆ ಚಾಲನೆ
ಬೀದರ:ಸೆ.30: ಜಿಲ್ಲಾಡಳಿತ ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಕಲಬುರಗಿ ವಿಭಾಗ ಮಟ್ಟದ ದಸರಾ ಸಿ.ಎಂ. ಕಪ್ ಕ್ರೀಡಾಕೂಟದ ಜಿಮ್ನಾಸ್ಟಿಕ್, ಬಾಕ್ಸಿಂಗ್ ಹಾಗೂ ಬ್ಯಾಡ್ಮಿಂಟನ್ ಸ್ಪರ್ಧೆಗಳನ್ನು ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು ಕಲಬುರಗಿ ವಿಭಾಗದ ಏಳು ಜಿಲ್ಲೆಯ ಸ್ಪರ್ಧಾಳುಗಳು ಭಾಗವಹಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಅಮೃತ ಎನ್ ಅಷ್ಟಗಿ ಅವರು ಕ್ರೀಡಾಕೂಟದ ಉದ್ಘಾಟನೆ ಮಾಡಿದರು. ಮುಖ್ಯ ಅತಿಥಿಗಳಾಗಿ ಶಿವರಾಜ ಕಣಜಿ, ಎಸ್.ಕೆ. ಮೇಡಗಾಲ್ಕರ, ಶಿವಕುಮಾರ, ಶ್ರೀಮತಿ ಪದ್ಮಾವತಿ ಹಾಗೂ ಶ್ರೀ ಘಟನಟ್ಟಿ, ಅಥ್ಲೆಟಿಕ್ಸ್ ತರಬೇತಿದಾರರು ಭಾಗವಹಿಸಿದರು. ಶಿವಕುಮಾರ ರವರ ಸ್ವಾಗತಿಸಿದರು. ಡಾ. ಶ್ರೀನಿವಾಸ ರೆಡ್ಡಿ ನಿರೂಪಿಸಿದರು. ಎಂ.ಜಿ. ಘಟನಟ್ಟಿ ವಂದಿಸಿದರು.
ವಿಜೇತರು:
ಬ್ಯಾಟಮೆಂಟನ್ ಮಹಿಳಾ ವಿಭಾಗ: ಪ್ರಥಮ ಸ್ಥಾನ ರಾಯಚೂರ, ದ್ವಿತೀಯ ಸ್ಥಾನ ಕಲಬುರಗಿ,
ಬ್ಯಾಟಮೆಂಟನ್ ಪರುಷರ ವಿಭಾಗ: ಪ್ರಥಮ ಸ್ಥಾನ ಕಲಬುರಗಿ, ದ್ವಿತೀಯ ಸ್ಥಾನ ಕೊಪ್ಪಳ ಪಡೆದಿದೆ.