ಸಮಾಜದ ಸಂಘಟನೆಗೆ ದುಡಿಯಲು 24 ಗಂಟೆ ಸಿದ್ಧ; ಮೋದಿ
ಚಿತ್ತಾಪುರ;ಸೆ.30: ಸಮಾಜದ ಸಂಘಟನೆಗೆ ದುಡಿಯಲು ನಾನು ದಿನದ 24 ಗಂಟೆಗಳ ಕಾಲ ಸಿದ್ಧನಿದ್ದೇನೆ ಎಂದು ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ಹೇಳಿದರು.
ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಭಿನಂದನಾ ಮತ್ತು ಸನ್ಮಾನ ಸಮಾರಂಭದಲ್ಲಿ ವಿಶೇಷ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಮಾಜದ ಮೇಲೆ ಅನ್ಯಾಯ ಮತ್ತು ದೌರ್ಜನ್ಯ ಆದಾಗ ನನಗೆ ಕರೆ ಮಾಡಿ ನಾನು ನಿಮ್ಮ ಸೇವೆಗೆ ಸದಾ ಸಿದ್ಧನಿದ್ದೇನೆ. ಈಗಾಗಲೇ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ ಮಾಡಲಾಗಿದೆ. ತಾಲೂಕಿನಲ್ಲಿಯೂ ಹಾಸ್ಟೆಲ್ ಮಾಡಿ ಅದಕ್ಕೆ ನಾನು ವೈಯಕ್ತಿಕವಾಗಿ 5 ಲಕ್ಷ ಸಹಾಯಧನ ನೀಡುತ್ತೇನೆ ಎಂದರು.
ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿ, ವೀರಶೈವ ಲಿಂಗಾಯತ ಸಮಾಜ ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿಯಲು ಸಂಘಟನೆ ಕೊರತೆಯೇ ಕಾರಣ, ಸಮಾಜದ ಮೇಲೆ ದೌರ್ಜನ್ಯ ಮತ್ತು ಅನ್ಯಾಯ ಆದಾಗ ಎಲ್ಲರೂ ಒಗ್ಗೂಡಿ ಕೈಜೋಡಿಸಬೇಕು. ಸಮಾಜದ ರಕ್ಷಣೆಗಾಗಿ ಸಂಘಟನೆ ಆಗಬೇಕು ಹೊರತು ಬೇರೆ ಸಮಾಜದ ಮೇಲೆ ಭಲ ಪ್ರಯೋಗ ಮಾಡಲು ಅಲ್ಲ.
ಬಸವ ಭವನ ನಿರ್ಮಾಣಕ್ಕೆ 50 ಲಕ್ಷ ಮಂಜೂರಾಗಿ ಎರಡು ವರ್ಷ ಆಗಿದೆ ಎಂದು ಹೇಳಿದರು.
ಬಿಜೆಪಿ ಮುಖಂಡ ಚಂದ್ರಶೇಖರ ಅವಂಟಿ ಮಾತನಾಡಿ, ಚಿತ್ತಾಪುರದಲ್ಲಿ ಎಲ್ಲ ಸಮಾಜಗಳಿಗೆ ಸಮುದಾಯದ ಭವನ ಆಗಿವೆ ಆದರೆ ವೀರಶೈವ ಲಿಂಗಾಯತ ಸಮಾಜಕ್ಕೆ ಬಸವ ಭವನ ಆಗಿಲ್ಲ ಇದು ಬಹಳ ಬೇಸರದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದಲ್ಲಿರುವ ಸಮಾಜದ ಮುಖಂಡರು ಶಾಸಕರು, ಸಚಿವರ ಗಮನಕ್ಕೆ ತರುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು. ಆಗ ಮತ್ತೆ ನಾಗರೆಡ್ಡಿ ಪಾಟೀಲ ಕರದಾಳ ಎದ್ದು ನಿಂತು ಬಸವ ಭವನದ ಸ್ಥಳದ ಸಮಸ್ಯೆ ಇತ್ತು ಈ ಕುರಿತು ಸಚಿವರ ಗಮನಕ್ಕೆ ತರಲಾಗಿದೆ, ಇನ್ನೂ ಎರಡು ತಿಂಗಳಲ್ಲಿ ಅಡಿಗಲ್ಲು ಆಗಲಿದೆ ಸುಮಾರು ಎರಡು ಕೋಟಿ ಎಸ್ಟಿಮೇಟ್ ಇದೆ ಎಂದು ಸ್ಪಷ್ಟಪಡಿಸಿದರು. ಮತ್ತೆ ಚಂದ್ರಶೇಖರ ಅವಂಟಿ ಮಾತನಾಡಿ, ಈಗ ಎರಡು ತಿಂಗಳು ಅಂತ ಹೇಳುತ್ತಾರೆ ಮುಂದೆ ಕೇಳಿದರೆ ಮತ್ತೆ ಎರಡು ತಿಂಗಳು ಅಂತ ಹೇಳಿ ದಿನ ಮುಂದುಡುತ್ತಾರೆ ಎಂದರು.
ಬಿಜೆಪಿ ಮುಖಂಡ ಸೋಮಶೇಖರ ಪಾಟೀಲ ಬೆಳಗುಂಪಾ ಮಾತನಾಡಿ, ವೇದಿಕೆಯ ಮೇಲೆ ಬರೀ ಭಾಷಣ ಮಾಡುವುದೇ ಸಾಧನೆ ಅಲ್ಲ, ಭಾಷಣ ಮಾಡಿದ ಹಾಗೇ ಕೆಲಸ ಮಾಡಿ ತೋರಿಸಬೇಕು. ಸಮಾಜದ ಮೇಲೆ ದೌರ್ಜನ್ಯ ಆದಾಗ ಪಕ್ಷಪಾತ ಮರೆತು ಪ್ರತಿಯೊಬ್ಬರು ಸ್ಪಂದಿಸಬೇಕು ಎಂದರು.
ಕಾಂಗ್ರೆಸ್ ಮುಖಂಡ ಶಾಂತಣ್ಣ ಚಾಳೀಕಾರ ಮಾತನಾಡಿ, ಸಮಾಜದ ಮುಖಂಡರಿಂದ ವೀರಶೈವ ಲಿಂಗಾಯತ ಸಮಾಜ ಹಾಳಾಗಿದ್ದು ಹೊರತು ಹಳ್ಳಿಯ ಮುಖಂಡರಿಂದಲ್ಲ, ಮುಖಂಡರು ಸರಿ ದಾರಿಗೆ ಹೋದಾಗ ಸಮಾಜ ಸರಿ ದಾರಿಗೆ ಹೋಗಲಿದೆ ಎಂದು ಹೇಳಿದರು.
ಸಮಾರಂಭ ಉದ್ಘಾಟಿಸಿದ ರಾವೂರನ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಅಧ್ಯಕ್ಷತೆ ವಹಿಸಿದ್ದ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಮಾತನಾಡಿದರು.
ಸೇಡಂನ ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು, ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು, ಹಲಕರ್ಟಿಯ ಸಿದ್ದೇಶ್ವರ ಹಿರೇಮಠದ ಶ್ರೀ ರಾಜಶೇಖರ ಶಿವಾಚಾರ್ಯರು, ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ, ಗೌರವಾಧ್ಯಕ್ಷ ಲಿಂಗಾರೆಡ್ಡಿ ಬಾಸರೆಡ್ಡಿ, ಶಿವಲಿಂಗಪ್ಪ ವಾಡೇದ್, ಶರಣಬಸಪ್ಪ ಕೋಬಾಳ ಶಹಾಬಾದ, ಶಶಿಕಾಂತ್ ಪಾಟೀಲ ಬೆಳಗುಂಪಾ, ರಾಜಶೇಖರ್ ಸಿರಿ ಜೇವರ್ಗಿ, ಗೌರಿ ಚಿಂತಕೋಟಿ, ಸೋಮಶೇಖರ ಹಿರೇಮಠ, ಶರಣು ಪಾಟೀಲ ಚಿಂಚೋಳಿ, ರಾಜಶೇಖರ್ ನೀಲಂಗಿ ಸೇಡಂ, ಸಿದ್ದು ಅಂಗಡಿ ಜೇವರ್ಗಿ, ಸಿದ್ದುಗೌಡ ಅಫಜಲಪುರ, ಶೇಖರ ಪಾಟೀಲ ಕಾಳಗಿ, ಬಸವರಾಜ ಪಾಟೀಲ ಭಾಗೋಡಿ, ಪ್ರಸಾದ್ ಅವಂಟಿ, ಅನೀಲ್ ವಡ್ಡಡಗಿ, ವೆಂಕಟಮ್ಮ ಪಾಲಪ್, ವೀರಣ್ಣ ಸುಲ್ತಾನಪೂರ, ಮಹೇಶ್ ಬಟಗೇರಿ, ರಾಜಶೇಖರ್ ತಿಮ್ಮನಾಕ, ಆನಂದ ಪಾಟೀಲ ನರಿಬೋಳ, ಸೋಮು ನಾಲವಾರ, ಡಿ.ಕೆ.ಪಾಟೀಲ, ಸಂತೋಷ ಹಾವೇರಿ, ಜಗದೇವ ದಿಗ್ಗಾಂವಕರ್, ಮಹೇಶ್ ಬಾಳಿ, ಮಲ್ಲರೆಡ್ಡಿ ಗೋಪಸೇನ್, ರವೀಂದ್ರ ಸಜ್ಜನಶೆಟ್ಟಿ, ಪ್ರಕಾಶ್ ಹಂಚಿನಾಳ, ಚಂದ್ರಶೇಖರ ಬಳ್ಳಾ, ವಿಶ್ವನಾಥ ನೆನಕಿ, ಚಂದ್ರಶೇಖರ ಉಟಗೂರ, ಕೋಟೇಶ್ವರ ರೇಷ್ಮೆ, ಬಸವರಾಜ ಸಂಕನೂರ, ಈಶ್ವರ ಬಾಳಿ, ನಿಂಬಣ್ಣಗೌಡ ಇಟಗಿ, ಬಸವಂತರಾವ್ ಮಾಲಿ ಪಾಟೀಲ, ಬಸವರಾಜ ಕೀರಣಗಿ ಸೇರಿದಂತೆ ಇತರರು ಇದ್ದರು.
ಅಂಬರೀಷ್ ಸುಲೇಗಾಂವ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂತಣ್ಣ ಚಾಳೀಕಾರ ಸ್ವಾಗತಿಸಿದರು. ವಿರೇಶ್ ಕರದಾಳ ನಿರೂಪಿಸಿದರು.