ಮೂರನೇ ಶತಮಾನಕ್ಕಿಂತ ಪೂರ್ವದ ಇತಿಹಾಸ ಬಂಜಾರಾ ಸಮುದಾಯಕ್ಕಿದೆ : ಗೋವಿಂದಸ್ವಾಮಿ
ಬೀದರ:ಸೆ.30: ಮೂರನೇ ಶತಮಾನಕ್ಕಿಂತಲೂ ಪೂರ್ವದ ಇತಿಹಾಸ ಬಂಜಾರಾ ಸಮುದಾಯಕ್ಕಿದೆ. ಹಲವು ಪ್ರಥಮಗಳಿಗೆ ಸಮುದಾಯ ಸಾಕ್ಷಿಭೂತವಾಗಿ ನಿಲ್ಲುತ್ತದೆ ಎಂದು ಕರ್ನಾಟಕ ಬಂಜಾರಾ ಸಂಸ್ಕøತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ.ಎ.ಆರ್. ಗೋವಿಂದಸ್ವಾಮಿ ನುಡಿದರು.
ಬಂಜಾರಾ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಬೆಂಗಳೂರು ಮತ್ತು ಕರ್ನಾಟಕ ಸಾಹಿತ್ಯ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಭವನದಲ್ಲಿ ಜರುಗಿದ ಬಂಜಾರಾ ಸಾಂಪ್ರದಾಯಿಕ ನೃತ್ಯ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಬಂಜಾರಾ ಸಮುದಾಯ ರಸ್ತೆ ನಿರ್ಮಾಣ, ಸುರಪಾನ ತಯಾರಿಕೆ ಮತ್ತು ಶ್ರೀಕೃಷ್ಣನಿಗೆ ಕೊಳಲು ತಯಾರಿಸಿ ಕೊಟ್ಟಿದ್ದು, ನೃತ್ಯ ಸಂಸ್ಸೃತಿಗೆ ನಾಂದಿ ಹಾಡಿದ್ದು ಹೀಗೆ ಹಲವು ಪ್ರಥಮಗಳಿಗೆ ಸಮುದಾಯ ಸಾಕ್ಷಿಯಾಗಿ ನಿಲ್ಲುತ್ತದೆ ಎಂದರು. ಸಮುದಾಯಕ್ಕೆ ಜನಮನ್ನಣೆ ಸಿಗಬೇಕಾಗಿದೆ. ಬಂಜಾರಾ ನೃತ್ಯ ಕೇವಲ ಸರ್ಕಾರಿ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಸಿಗಬೇಕಾಗಿದೆ. ಇದು ಅತ್ಯಂತ ಶ್ರೀಮಂತ ಸಂಸ್ಕೃತಿ ಹೊಂದಿರುವ ನೃತ್ಯಪ್ರಕಾರವಾಗಿದ್ದು, ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಪೆÇ್ರ. ಜಗನ್ನಾಥ ಹೆಬ್ಬಾಳೆ ಮಾತನಾಡಿ ಕಲೆ ಸಾಹಿತ್ಯ ಮತ್ತು ಸಂಸ್ಕೃತಿ ಉಳಿಸುವಲ್ಲಿ ಬಂಜಾರಾ ಸಮುದಾಯದ ಪಾತ್ರ ಮಹತ್ವದ್ದಾಗಿದೆ. ಅನಾದಿ ಕಾಲದಿಂದಲೂ ಲಂಬಾಣಿ ನೃತ್ಯ ನಡೆದುಕೊಂಡು ಬಂದಿದೆ ಈ ನಿಟ್ಟಿನಲ್ಲಿ ಡಾ. ಗೋವಿಂದಸ್ವಾಮಿ ಅವರು ಬಂಜಾರಾ ಭಾಷಾ ನಿಘಂಟು ಪ್ರಕಟಣೆ ಮಾಡುವ ವಿಷಯ ತಮ್ಮ ಅಜೆಂಡಾದಲ್ಲಿ ಇಟ್ಟುಕೊಂಡಿದ್ದು ಶ್ಲಾಘನೀಯ. ಆದಷ್ಟು ಬೇಗ ನಿಘಂಟು ಹೊರಬರಲಿ. ಬಂಜಾರಾ ಸಮುದಾಯದ ಸಂಸ್ಕೃತಿ ಜಾಗತಿಕ ಮಟ್ಟದಲ್ಲಿ ಬೆಳೆಯಲೆಂದು ಶುಭ ಹಾರೈಸಿದರು.
ಬಂಜಾರಾ ಸಮಾಜದ ಹಿರಿಯ ಮುಖಂಡರಾದ ಬಾಬು ಹೊನ್ನಾನಾಯಕ ಮಾತನಾಡಿ ನಶಿಸಿ ಹೋಗುತ್ತಿರುವ ಬಂಜಾರಾ ನೃತ್ಯ ಸಂಸ್ಸೃತಿಯನ್ನು ತರಬೇತಿ ಶಿಬಿರದ ಮೂಲಕ ಮತ್ತೆ ಸಮಾಜದ ಮುಖ್ಯವಾಹಿನಿಗೆ ತರುತ್ತಿರುವ ಮತ್ತು ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಆಶಾ ರಾಠೋಡ್ ಅವರ ಕಾರ್ಯ ಸ್ಮರಣೀಯವಾಗಿದೆ. ಇದಕ್ಕೆ ನಿರಂತರ ಸಹಕಾರ ನೀಡುತ್ತಿರುವ ಅಕಾಡೆಮಿ ಅಧ್ಯಕ್ಷರಿಗೆ ಕೃತಜ್ಞತೆಗಳು ಎಂದರು.
ಖ್ಯಾತ ವಕೀಲರಾದ ಬಸವರಾಜ ಪವಾರ್ ಮಾತನಾಡಿದರು. ವೇದಿಕೆ ಮೇಲೆ ಶಶಿ ರಾಠೋಡ, ಲಂಬಾಣಿ ನೃತ್ಯ ತರಬೇತುದಾರರಾದ ಆಶಾ ರಾಠೋಡ್, ಮೀರಾಬಾಯಿ, ಸದಸ್ಯ ಸಂಚಾಲಕಿ ಭಾರತಿಬಾಯಿ, ಅಣ್ಣಾರಾವ ರಾಠೋಡ, ಶಂಕರರಾವ ಹೊನ್ನಾ ಉಪಸ್ಥಿತರಿದ್ದರು. ಇದೇ ವೇಳೆ ಆಶಾ ರಾಠೋಡ್ ಅವರ ನೇತೃತ್ವದಲ್ಲಿ ಲಂಬಾಣಿ ನೃತ್ಯ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಸಂಜೀವಕುಮಾರ ಜುಮ್ಮಾ, ವಸಂತ ಹುಣಸನಾಳೆ, ಶಿವಶರಣಪ್ಪ ಗಣೇಶಪುರ, ಪ್ರಕಾಶ ಕನ್ನಾಳೆ, ಮಹಾರುದ್ರ ಡಾಕುಳಗೆ, ಶಿವಶರಣಪ್ಪ ವಲ್ಲೆಪುರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ಎಸ್.ಬಿ.ಕುಚಬಾಳ ನಿರೂಪಿಸಿದರು. ನಿಜಲಿಂಗಪ್ಪ ತಗಾರೆ ವಂದಿಸಿದರು.