ತೆಲಂಗಾಣದ ಜಮ್ಮಿಕುಂಟ ಗ್ರಾಮದಲ್ಲಿ ನಿರಂತರವಾಗಿ ನಡೆಯುತ್ತಿರುವ ಧ್ವಜಾರೋಹಣ ಹಾಗೂ ಸಾಮೂಹಿಕ ರಾಷ್ಟ್ರಗಾನವು ಶ್ಲಾಘನೀಯ ಹಾಗೂ ಇತರರಿಗೆ ಪ್ರೇರಣಾದಾಯಕ: ವೀರಭದ್ರಪ್ಪ ಉಪ್ಪಿನ
ಬೀದರ:ಸೆ.30:ಜಮ್ಮಿಕುಂಟ ಮಂಡಲದಲ್ಲಿ ವರ್ಷದ 365 ದಿವಸಗಳು ಬೆಳಿಗ್ಗೆ ಸರಿಯಾಗಿ 8 ಗಂಟೆಗೆ ಧ್ವಜಾರೋಹಣ ಹಾಗೂ ಸಾಮೂಹಿಕ ರಾಷ್ಟ್ರಗಾನ ಹಾಡುವ ವ್ಯವಸ್ಥೆಯನ್ನು ಮಾಡಿರುವುದು ಶ್ಲಾಘನಿಯವಾಗಿದೆ ಹಾಗೂ ರಾಷ್ಟ್ರದ ಜನತೆಗೆ ಪ್ರೇರಣೆಯಾಗಿದೆ ಎಂದು ಜೈಹಿಂದ್ ಹಿರಿಯ ನಾಯಕರ ಸಂಘದ ಕಾರ್ಯದರ್ಶಿ ವೀರಭ ದ್ರಪ್ಪ ಉಪ್ಪಿನರವರು ಅಭಿಪ್ರಾಯಪಟ್ಟರು. ಅವರು ತೆಲಂಗಾಣ ರಾಜ್ಯದ ಕರೀಮನಗರ ಜಿಲ್ಲೆಯ ಜಮ್ಮಿಕುಂಟ ಮಂಡಲದಲ್ಲಿ ನಿರಂತರ ನಡೆಯುವ ಧ್ವಜಾರೋಹಣ ಹಾಗೂ ರಾಷ್ಟ್ರಗಾನದಲ್ಲಿ ಭಾಗವಹಿಸಿ ಮಾತನಾಡುತ್ತಿ ದ್ದರು. ವರ್ಷದಲ್ಲಿ ಎರಡು ರಾಷ್ಟ್ರೀಯ ಹಬ್ಬಗಳ ದಿನದಂದು ಧ್ವಜಾರೋಹಣ ಹಾಗೂ ರಾಷ್ಟ್ರಗಾನದ ವ್ಯವಸ್ಥೆ ಮಾಡಲು ಎಷ್ಟೋ ಜನರು ಹಿಂದೇಟು ಹಾಕುತ್ತಿರುವ ಈ ದಿನಗಳಲ್ಲಿ, ಮಳೆ /ಬಿಸಿಲೆನ್ನದೆ ನಿರಂತರವಾಗಿ ವ್ಯವಸ್ಥೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಪೆÇಲೀಸರ ಕೆಲಸವು ಮೆಚ್ಚತಕ್ಕದ್ದು ಎಂದು ಹೇಳಿದರು. ದಿನಾಂಕ 15.8.2017 ರಂದು ಅಂದಿನ ಪೆÇೀಲಿಸ್ ಅಧಿಕಾರಿಯಾದ ಪ್ರಶಾಂತ ರೆಡ್ಡಿ ಆರಂಭಿಸಿದ ಸಾಮೂಹಿಕ ರಾಷ್ಟ್ರಗಾನದ ಈ ಕ್ರಮವನ್ನು ಚಾಚು ತಪ್ಪದೇ ಆಚರಿಸಿಕೊಂಡು ಬರಲಾಗುತ್ತಿದೆ. ಗ್ರಾಮದಾದ್ಯಂತ ಹರಡಿರುವ ಧ್ವನಿ ಪೆಟ್ಟಿಗೆಗಳಲ್ಲಿ ರಾಷ್ಟ್ರಗೀತೆ ಮೊಳಗುವ ಸಂದರ್ಭದಲ್ಲಿ, ಜನರು ಎಲ್ಲಿದ್ದರಲ್ಲಿಯೇ ನಿಂತುಕೊಂಡು ರಾಷ್ಟ್ರ ಗಾನಕ್ಕೆ ಗೌರವ ಕೊಡುವ ಸಂದರ್ಭದಲ್ಲಿ ಒಂದು ನಿಮಿಷ ಊರಿಗೆ ಊರೇ ಸ್ತಬ್ಧವಾಗಿ ಬಿಡುವ ದೃಶ್ಯವು ನಿಜಕ್ಕೂ ರೋಮಾoಚನ ಕಾರಿಯಾಗಿದೆ ಎಂದು ನುಡಿದರು. ಈ ವ್ಯವಸ್ಥೆಯನ್ನು ನಮ್ಮಲ್ಲಿಯೂ ಜಾರಿಗೆ ತರುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದು ನುಡಿದರು. ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅರವಿಂದ ಕುಲಕರ್ಣಿಯವರು ಮಾತನಾಡಿ, ಜಾತಿ, ಮತ ಪಂಥದ ಭೇದವಿಲ್ಲದೆ ನಾವೆಲ್ಲರೂ ಭಾರತೀಯರು ಎನ್ನುವ ಸಂದೇಶ ನೀಡುವ ಈ ವ್ಯವಸ್ಥೆಯು ರಾಷ್ಟ್ರದಾದ್ಯಂತ ಜಾರಿಗೆ ಬರಬೇಕು ಎಂದು ನುಡಿದರು. ಯುವ ಜನತೆಯಲ್ಲಿ ದೇಶಾಭಿಮಾನದ ಕೊರತೆಯಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದ ಅವರು, ಜಮ್ಮಿ ಕುಂಟದ ವ್ಯವಸ್ಥೆಯಲ್ಲಿ ಹೆಚ್ಚಿನ ಯುವಕರನ್ನು ಸೇರ್ಪಡಿಸಬೇಕು ಹಾಗೂ ಇದಕ್ಕೆ ಹೆಚ್ಚಿನ ಪ್ರಚಾರ ನೀಡಬೇಕೆಂದು ಪೆÇೀಲಿಸ್ ಇಲಾಖೆ ಹಾಗೂ ಮಾಧ್ಯಮದವರಿಗೆ ಮನವಿ ಮಾಡಿದರು. ಕೋಶ್ಯಾಧ್ಯಕ್ಷರಾದ ಗಂಗಪ್ಪ ಸಾವಳೆಯವರು ಮಾತನಾಡಿ, ದಿನನಿತ್ಯ ಬೆಳಿಗ್ಗೆ ನಡೆಸುವ ಜಮ್ಮಿಕುಂಟದ ವ್ಯವಸ್ಥೆಯು ದೇಶದ ಸಮಸ್ತ ಜನರಿಗೆ ಅಭಿಮಾನದ ಸಂಗತಿಯಾಗಿದೆ ಎಂದು ನುಡಿದರು. ಸಂಘದ ಅಧ್ಯಕ್ಷ ರಾಮಕೃಷ್ಣ ಮುನಿಗ್ಯಾಲ ರವರು ನೇತೃತ್ವವಹಿದ್ದರು. ಸದಸ್ಯರಾದ ನಿಜಲಿಂಗಪ್ಪ ತಗಾರೆ ಯವರು ಮಾತನಾಡಿದರು ಮಲ್ಲಿಕಾರ್ಜುನ ಪಾಟಿಲ, ರತಿನ ಕಮಲರವರು ಹಾಜರಿದ್ದರು. ಪೆÇಲೀಸ ಅಧಿಕಾರಿಗಳು, ಸಿಬ್ಬಂದಿಯವರು, ಊರಿನ ಗಣ್ಯ ವ್ಯಕ್ತಿಗಳು, ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.