ಸೈದಾಪುರ:ವಿವಿಧ ಪರೀಕ್ಷೆ ಕೇಂದ್ರಗಳಿಗೆ ಡಯಟ್ ಪ್ರಾಂಶುಪಾಲರ ಭೇಟಿ, ಪರಿಶೀಲನೆ
ಸೈದಾಪುರ:ಆ.7:ಪಟ್ಟಣದ ಶ್ರೀ ಭಗವಾನ ಮಹಾವೀರ ಪ್ರೌಢ ಶಾಲೆ ಹಾಗೂ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯುತ್ತಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಕೇಂದ್ರಗಳಿಗೆ ಡಯಟ್ ಪ್ರಾಂಶುಪಾಲರಾದ ವೃಷಬೇಂದ್ರಯ್ಯ ಭೇಟಿ ನೀಡಿದರು. ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳ ಮಾಹಿತಿ ಪಡೆದರು. ಅಲ್ಲದೆ ಪರೀಕ್ಷೆ ಕೇಂದ್ರದಲ್ಲಿನ ವ್ಯವಸ್ಥೆ ಬಗಗೆ ಪರಿಶೀಲನೆ ಮಾಡಿ ಮಾತನಾಡಿ, ಸರಕಾರ ಸೂಚಿಸಿರುವ ನಿಯಮಗಳಂತೆ ಪರೀಕ್ಷೆಗಳು ನಡೆಯುತ್ತಿದ್ದೂ ಉತ್ತಮ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ತೊಂದರೆಯಾಗದಂತೆ ಹೆಚ್ಚಿನ ಕಾಳಜಿ ವಹಿಸಬೇಕು. ಪರೀಕ್ಷೆ ಕೇಂದ್ರದಲ್ಲಿ ಪ್ರತಿಯೊಬ್ಬರಿಗೂ ವಹಿಸಿದ ಆಯಾ ಜವಬ್ದಾರಿಯನ್ನು ಕಟ್ಟು ನಿಟ್ಟಿನೊಂದಿಗೆ ಕಾರ್ಯ ನಿರ್ವಹಿಸಿ ಪರೀಕ್ಷೆಯನ್ನು ಯಶಸ್ವಿಗೊಳಿಸುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಡಯಟ್ ಹಿರಿಯ ಉಪನ್ಯಾಸಕರಾದ ಡಿ.ಎಂ.ಹೊಸಮನಿ, ಪರೀಕ್ಷೆ ಕೇಂದ್ರದ ಶಿವಾನಂದ ನಾಯಕ, ವಾಗೀಶ, ಬಸವರಾಜ ಹಾಗೂ ಶರಣಗೌಡ, ವೆಂಕಟೇಶ ಸೇರಿದಂತೆ ಇತರರಿದ್ದರು.