ಬಂಥನಾಳ ಶಿವಯೋಗಿಗಳ ಕೊಡುಗೆ ಅಪಾರ: ಯಾದವಾಡ
ವಿಜಯಪುರ,ಆ.7:ಬಂಥನಾಳ ಶಿವಯೋಗಿಗಳ ಕೊಡುಗೆ ಅಪಾರವಾಗಿದೆ. ಬಿಎಲ್‍ಡಿಇ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ ಎಂದು ಸಾಹಿತಿ ಸುಭಾಸ ಯಾದವಾಡ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ವೀರಶೈವ ಸಭಾಭವನದಲ್ಲಿ ಏರ್ಪಡಿಸಿದ ಮಾಸಿಕ ಶಿವಾನುಭವ ಗೋಷ್ಟಿಯಲ್ಲಿ ಪೂಜ್ಯ ಬಂಥನಾಳ ಶಿವಯೋಗಿಗಳ ಕೊಡುಗೆ ಕುರಿತು ಸಾಹಿತಿ ಸುಭಾಸ ಯಾದವಾಡ ಮಾತನಾಡಿದರು.
ಬಂಥನಾಳ ಶಿವಯೋಗಿಗಳು ಆಧ್ಯಾತ್ಮಕ, ಸಾಂಸ್ಕøತಿಕವಾಗಿ ಕಾರ್ಯ ಮಾಡಿದವರು. ನಮ್ಮ ನಾಡಿನ ಜನÀಸೇವೆ ಮಾಡಿದವರು. ಜನಮನ ಗೆದ್ದವರು ಹಾಗೂ ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳಿಸಿದವರು. ಅವರ ಕೊಡುಗೆ ಅಪಾರ ಎಂದು ಹೇಳಿದರು.
ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೆಶ ಬಬಲೇಶ್ವರ ಮಾತನಾಡಿ, 18 ವರ್ಷದೊಳಗಿನ ಮಕ್ಕಳು ಅಕಾಡೆಮಿ ವ್ಯಾಪ್ತಿಯಲ್ಲಿ ಬರುವುದರಿಂದ ನವಜಾತ ಶಿಶು, ನೊಂದವರ, ನಿರ್ಗತಿಕರ ಮಕ್ಕಳ ವಸತಿ ನಿಲಯ ಮೇಲುಸ್ತುವಾರಿ ಇದೆ. ಹೀಗಾಗಿ ಮಕ್ಕಳ ಮನಸ್ಸನ್ನು ಅರಳಿಸುವ ಕಾರ್ಯವಾಗಬೇಕಾಗಿದೆ. ಕರ್ನಾಟಕದಲ್ಲಿ ಮಕ್ಕಳಿಗಾಗಿ ಕೇವಲ ಇದೊಂದೆ ಸಂಸ್ಥೆ. 2 ಕೋಟಿ ಮಕ್ಕಳ ಅಕಾಡೆಮಿ ವ್ಯಾಪ್ತಿಯಲ್ಲಿ ಬರುವುದರಿಂದ ಆ ಜವಾಬ್ದಾರಿ ಕೂಡ ನನ್ನ ಮೇಲಿದೆÀ. ಅದನ್ನು ನಿಷ್ಠೆ, ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುವೆ ಎಂದು ಗೌರವ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಮಕ್ಕಳ ವೈಜ್ಞಾನಿಕ ಕಾದಂಬರಿ ‘ಮತ್ತೆ ಅವತರಿಸಿದ ದೈತ್ಯರು’ ಕೃತಿಗೆ ವಿದ್ಯಾ ಚೇತನ ಪ್ರಸಸ್ತಿ ಪಡೆದ ಮಕ್ಕಳ ಸಾಹಿತಿ ಜಂಬುನಾಥ ಕಂಚ್ಯಾಣಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಶರಣರ ವಚನಗಳಿಂದ ಆಚಾರ, ವಿಚಾರ, ಸಮಾನತೆ, ಪರಿಶುದ್ದತೆ, ಸತ್ಯ, ಶುದ್ದ ಕಾಯಕದಿಂದ ನೆಮ್ಮದಿ ಸಂತೃಪ್ತಿ ನೀಡುತ್ತದೆ. ಫ.ಗು. ಹಳಕಟ್ಟಿ. ಹರ್ಡೇಕರ ಮಂಜಪ್ಪ ಸಂಗನಬಸವ ಶಿವಯೋಗಿಗಳು ಮಾಡಿದ ಕಾರ್ಯ ಶ್ಲಾಘನೀಯ ಎಂದರು
ಎಂ. ಜಿ. ಯಾದವಾಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹಿತಿ ಸಂಗಮೇಶ ಬದಾಮಿ ನಿರೂಪಿಸಿದರು.
ಡಾ. ವ್ಹಿ. ಡಿ. ಐಹೊಳ್ಳಿ, ದೊಡ್ಡಣ್ಣ ಭಜಂತ್ರಿ, ಅಕ್ಕಮಹಾದೇವಿ ಬುರ್ಲಿ, ಅಪ್ಪಾಸಾಹೇಬ ಕೋರಿ, ಭೀಮಣ್ಣ ಭಜಂತ್ರಿ, ಎಸ್.ಎಚ್. ನಾಡಗೌಡರ, ಡಾ. ಸೋಮಶೇಖರ ವಾಲಿ, ರವೀಂದ್ರ ಬ್ಯಾಕೋಡ, ಬಸವರಾಜ ಒಂಟಗೂಡಿ, ಪರಶುರಾಮ ಪೋಳ, ನೂತನ ಬ್ಯಾಕೋಡ ಶಾರದಾ ಕೊಪ್ಪ, ಎಂ.ಎಂ. ಅವರಾದಿ, ಮಹಾದೇವ ಹಾಲಳ್ಳಿ ಉಪಸ್ಥಿತರಿದ್ದರು.