ಎಲ್.ಬಿ.ಕೆ :ಬುದ್ಧಿ ಮಾಂದ್ಯ ಮಕ್ಕಳ ವಸತಿ ರಹಿತ ಶಾಲೆಗೆ ಭೇಟಿ , ಪ್ರಾತ್ಯಕ್ಷಿಕೆ ಅನುಭವ
ಸಂಜೆವಾಣಿ ವಾರ್ತೆ.
ಸಿಂಧನೂರು ಆ.೭ ನಗರದ ಎಲ್.ಬಿ.ಕೆ. ಪದವಿ ಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳು ಸ್ಥಳೀಯ ಮಾತೃ ಆಸರೆ ಶಿಕ್ಷಣ ಸಮಾಜ ಸೇವಾ ಪ್ರತಿಷ್ಠಾನ ಸಿಂಧನೂರ ಬುದ್ಧಿಮಾಂದ್ಯ ಮಕ್ಕಳ ವಸತಿ ರಹಿತ ಶಾಲೆಗೆ ಭೇಟಿ ನೀಡಿ ಬುದ್ಧಿಮಾಂದ್ಯ ಹಾಗೂ ದೈಹಿಕ ಮಾನಸಿಕವಾಗಿ ಅಸ್ವಸ್ಥರಾದಂತಹ ಮಕ್ಕಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವನ್ನು ಮೂಡಿಸಲಾಯಿತು.
ಕಾಲೇಜ್ ಶಿಕ್ಷಣ ಶಾಸ್ತ್ರ ಉಪನ್ಯಾಸಕ ಮೌಲಸಾಬ ಮಾತನಾಡಿ ಸಮಾಜದಲ್ಲಿ ಇಂತಹ ಮಕ್ಕಳಿಗೆ ಪ್ರೀತಿ ವಾತ್ಸಲ್ಯದಿಂದ ಕಾಣಬೇಕು ಅವರ ಸೇವೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಉಪನ್ಯಾಸಕ ಬಸವರಾಜ ದೇವಿಪುರ ಮಾತನಾಡಿ ಇಂತಹ ಮಕ್ಕಳ ಜನನಕ್ಕೆ ಅನುವಂಶೀಯತೆ ಕಾರಣ ಎಂದರು.
ಕವಿತಾ ಸಮಾಜ ಶಾಸ್ತ್ರ ಉಪನ್ಯಾಸಕಿ ಮಾತನಾಡಿ ಬುದ್ಧಿಮಾಂದ್ಯ ಮಕ್ಕಳು ಆಗಲು ಮೂಲ ಕಾರಣ ಗಳನ್ನು ತಿಳಿಸಿದರು.
ವಿದ್ಯಾರ್ಥಿಗಳಾದ ಮರಿಸ್ವಾಮಿ,ತನುಜಾ ,ವಿಶ್ವನಾಥ, ಯಮನೂರಪ್ಪ ಅನಿಸಿಕೆ ವ್ಯಕ್ತಪಡಿಸಿದರು .ಕಾರ್ಯಕ್ರಮ ಮುಗಿದ ನಂತರ ಬುದ್ಧಿಮಾಂದ್ಯ ಮಕ್ಕಳಿಗಾಗಿ ಕಾಲೇಜಿನ ವಿದ್ಯಾರ್ಥಿಗಳಿಂದ ಊಟದ ವ್ಯವಸ್ಥೆ ಮಾಡಿಸಲಾಗಿತ್ತು ಹಾಗೂ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು ಹಾಗೂ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಸಂಸ್ಥಾಪಕರಾದ ಹಾಲಯ್ಯ ಉಪಸ್ಥಿತರಿದ್ದರು.