ಗ್ರಾಮೀಣ ಭಾಗದಲ್ಲಿ ದಾಖಲಾತಿ ಹೆಚ್ಚಾಗಿರುವುದು ಸಂತಸದ ವಿಷಯ
ಸೈದಾಪುರ:ಆ.7:ಗಡಿ ಗ್ರಾಮೀಣ ಭಾಗದಲ್ಲಿರುವ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ದಾಖಲಾತಿ ಹೆಚ್ಚಾಗಿರುವುದು ಸಂತಸದ ವಿಷಯವಾಗಿದ್ದೂ ಇನ್ನೂ ಹೆಚ್ಚಿನ ಗುಣಮಟ್ಟದ ಶಿಕ್ಷಣ ನೀಡಿದರೆ ಸಂಸ್ಥೆಯ ಮಹತ್ವ ಹೆಚ್ಚಾಗುತ್ತದೆ ಎಂದು ಡಯಟ್ ಪ್ರಾಂಶುಪಾಲ ವೃಷಬೇಂದ್ರಯ್ಯ ಅಭಿಪ್ರಾಯಟ್ಟರು.
ಪಟ್ಟಣದ ವಿದ್ಯಾ ವರ್ಧಕ ಡಿ.ಎಲ್.ಇಡಿ ಕಾಲೇಜಿಗೆ ಹಠಾತ ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಶಿಕ್ಷಣಾರ್ಥಿಗಳು ಹಾಗೂ ಸಿಬ್ಬಂದಿಗಳನ್ನು ಕುರಿತು ಮಾತನಾಡಿದರು. ಸತತ ಪ್ರಯತ್ನದಿಂದ ಉತ್ತಮ ಸಾಧನೆ ನಮ್ಮದಾಗುತ್ತದೆ. ಇದಕ್ಕಾಗಿ ಕಡ್ಡಾಯವಾಗಿ ಹಾಜರಾತಿ ಹೊಂದಬೇಕು. ಪ್ರಮಾಣ ಪತ್ರ ಪಡೆಯುವ ಶಿಕ್ಷಕರು ನೀವಾಗದೆ ಆದರ್ಶ ಮಾದರಿ ಶಿಕ್ಷಕರು ನೀವಾಗುವಂತೆ ಹೇಳಿದರು. ವಿಶೇಷವಾಗಿ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಡಯಟ್ ಹಿರಿಯ ಉಪನ್ಯಾಸಕ ಡಿ.ಎಂ.ಹೊಸಮನಿ ಮಾತನಾಡಿ, ಮುಂದಿನ ದಿನಗಳಲ್ಲಿ ಡಿ.ಎಲ್.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ಇದೊಂದು ಅಂತ್ಯಂತ ಗೌರವಯುತವಾದ ವೃತ್ತಿಯಾಗಿದ್ದೂ ಇದರ ಮಹತ್ವ ಹೆಚ್ಚಾಗುವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಎಲ್ಲರೂ ಉತ್ತಮ ಸಾಧನೆ ಮಾಡಲು ಸಾಧ್ಯವಿದೆ. ಅದಕ್ಕಾಗಿ ಗುರಿ ಮತ್ತು ಸಾಧನೆಯ ಛಲ ನಮ್ಮದಾಗಬೇಕು ಎಂದು ಕಿವಿ ಮಾತುಗಳನ್ನು ಹೇಳಿದರು.
ಡಿ.ಎಲ್.ಇಡಿ ಕಾಲೇಜುಗಳಲ್ಲಿ ಕಂಡು ಬಂದಿರುವ ದಾಖಲಾತಿ ಸಮಸ್ಯೆಯಿಂದಾಗಿ ಕೆಲ ಕಾಲೇಜುಗಳು ಬಂದಾಗಿವೆ. ಆದರೆ ಗಡಿ ಗ್ರಾಮೀಣ ಭಾಗದಲ್ಲಿರುವ ಈ ಸಂಸ್ಥೆಯಲ್ಲಿ ಉತ್ತಮ ದಾಖಲಾತಿ ಹೊಂದಿದೆ. ಇದೊಂದು ಹೆಮ್ಮೆ ಪಡುವ ವಿಷಯವಾಗಿದ್ದೂ ಈ ಸಾಧನೆಗೆ ನಾನು ವಿದ್ಯಾ ವರ್ಧಕ ಸಂಸ್ಥೆಯನ್ನು ಅಭಿನಂದಿಸುತ್ತೇನೆ. ಗುಣಮಟ್ಟದ ಶಿಕ್ಷಣಕ್ಕಾಗಿ ನಿಮಗೆ ಬೇಕಾದ ಎಲ್ಲಾ ಸಹಾಯವನ್ನು ಡಯಟ್ ವತಿಯಿಂದ ನೀಡಲಾಗುವುದು.
ವೃಷಬೇಂದ್ರಯ್ಯ ಡಯಟ್ ಪ್ರಾಂಶುಪಾಲರು ಯಾದಗಿರಿ