ಪಕ್ಷ ಬೇದ ಮರೆತು, ಶಕ್ತಿ ಅನುಸಾರವಾಗಿ ಸದಸ್ಯತ್ವ ಪಡೆಯಿರಿ
ಸಂಜೆವಾಣಿ ವಾರ್ತೆ.
ಸಿಂಧನೂರು ಆ.೭ ವೀರಶೈವ ಸಮಾಜದ ಸಕಲ ಬಂಧುಗಳು ಪಕ್ಷ ಬೇದ ಮರೆತು ತಮ್ಮ ಶಕ್ತಿಗೆ ಅನುಸಾರವಾಗಿ ತಾಲೂಕು ವೀರಶೈವ ಲಿಂಗಾಯತ ಸಮಾಜದ ಸದಸ್ಯತ್ವ ಪಡೆದು ನೊಂದಣಿ ಪಡೆಯಿರಿ ಎಂದು ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಚಂದ್ರು ಭೂಪಾಲ್ ನಾಡಗೌಡ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಟಿ ನಡೆಸಿ ಮಾತನಾಡಿದರು.ನೊಂದಣಿಗೆ ಜುಲೈ ೧೪ ರಿಂದ ಆಗಸ್ಟ್ ೧೫ ರವರೆಗೆ ಕಾಲ ಅವಕಾಶ ಇದ್ದು ಈ ಮುಂಚೆ ಕೇವಲ ನಗರವಾಸಿಗಳು ಮಾತ್ರ ಮಾಹಿತಿ ಇತ್ತು ಈಗ ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ನೊಂದಣಿ ಮಾಡಿಸಿ ಮತ್ತು ಈ ಕಾರ್ಯ ಕೈಗೆತ್ತಿಕೊಂಡ ಹಿರಿಯರು ರಾಜಶೇಖರ ಪಾಟೀಲ್ ಸೇರಿದಂತೆ ಹಲವರಿಗೆ ಅಭಿನಂದನೆ ಗಳನ್ನು ತಿಳಿಸಿದರು.
ಆರ್.ಡಿ.ಸಿ.ಸಿ ಬ್ಯಾಂಕ್ ಮಾಜಿ ಜಿಲ್ಲಾಧ್ಯಕ್ಷ ಪಂಪನಗೌಡ ಬಾದರ್ಲಿ ಮಾತನಾಡಿ ಈಗಾಗಲೇ ಪೋಷಕ ಸದಸ್ಯತ್ವ ೩ ಜನ ,ದಾನಿಗಳ ಸದಸ್ಯತ್ವ ೭ , ಅಜೀವ ಸದಸ್ಯತ್ವ ೨೨೨ ,ವಾರ್ಷಿಕ ಸದಸ್ಯತ್ವ ೩೧೩ ಪಡೆದಿದ್ದಾರೆ. ಸದಸ್ಯತ್ವ ಆಧರಿಸಿ ಸಮಾಜದ ಚುನಾವಣೆಯಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಮಾಜದ ಹಿರಿಯರಾದ ರಾಜಶೇಖರ ಪಾಟೀಲ್ ,ಹಂಪಯ್ಯ ರಾವಿಹಾಳ ,ಎನ್.ರಾಮನಗೌಡ ,ವಿರೇಶಪ್ಪ ,ಶರಣಪ್ಪ ಟೆಂಗಿನಕಾಯಿ,ವೀರಯ್ಯ ಸ್ವಾಮಿ ಉಪಸ್ಥಿತರಿದ್ದರು.