ಸ್ವಾತಂತ್ರ್ಯ ದಿನ: ಪೂರ್ವಭಾವಿ ಸಭೆ; ಮಹಾತ್ಮ ಗಾಂಧಿಜಿ- ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರ ಕಡ್ಡಾಯ
ಸಿರವಾರ, ಆ.೦೭- ಸ್ವಾತಂತ್ರ್ಯ ದಿನ ಎಲ್ಲಿಯೂ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡ ದಂತೆ ಹಾಗೂ ಹರಿದ, ಬಣ್ಣ ಮಾಸಿದ ಧ್ವಜ ಬಳಸದಂತೆ ಕಡಿವಾ ಣ,ರಾಷ್ಟ್ರಪಿತಿ ಮಹಾತ್ಮ ಗಾಂಧಿಜಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರವನ್ನು ಕಡ್ಡಾಯವಾಗಿ ಇಡುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಬೇಕು, ಯಾರಾದರೂ ಗೈರು ಆದರೆ ಕ್ರಮಕೈಗೊಳಲಾಗುವುದು ಎಂದು ತಹಸೀಲ್ದಾರ ರವಿ ಎಸ್ ಅಂಗಡಿ ಹೇಳಿದರು.
ತಹಸೀಲ್ದಾರ ಕಛೇ ರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕುರಿತು ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬರು ವ ಆ.೧೫ ರಂದು ಸ್ವಾತಂತ್ರ್ಯ ದಿನಾಚ ರಣೆಯನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಗು ವುದು.
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ಲಾಸ್ಟಿಕ್ ಧ್ವಜದ ಬಳಕೆ ಎಲ್ಲಿಯೂ ಆಗಬಾರದು.
ಇದಕ್ಕಾಗಿ ಯಾವುದೇ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಧ್ವಜಗಳ ಮಾರಾಟ ಬಳಸಬಾರದು. ೭:೪೫ ಕ್ಕೆ ಆಯಾ ಶಾಲೆ,ಪ.ಪಂಚಾಯತಿ, ಕಛೇರಿಗಳಲ್ಲಿ ಧ್ವಜಾ ರೋಹಣ ಮಾಡಲಾಗುವುದು, ತಹಸೀಲ್ದಾರ ಕಛೇರಿಯಲ್ಲಿ ೮:೩೦ಕ್ಕೆ, ತಾಲೂಕ ಆಡಳಿತದಿಂದ ಬಾಲಕೀ ಯರ ಪ್ರೌಡಶಾಲೆಯ ಆವರಣದಲ್ಲಿ ೯ ಗಂಟೆಗೆ ದ್ವಜಾರೋಹಣ, ವಿದ್ಯಾ ರ್ಥಿಗಳಿಂದ ನೃತ್ಯ ಕಾರ್ಯ ಕ್ರಮ, ಪಥಸಂಚಲ, ವಿವಿಧ ಸಾದಕರಿಗೆ ಸನ್ಮಾನ ಕಾರ್ಯಕ್ರಮ ಮಾಡಲಾಗುವುದು.
ಈ ಸಂದರ್ಭದಲ್ಲಿ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ಅನ್ನಭಾಗ್ಯ, ಮಕ್ಕಳಿಗೆ ಹಾಲು ವಿತರಣೆ ಯೋಜನೆ ಬಿಂಬಿಸುವ ವಿಶೇಷ ಚೀತ್ರ ಪ್ರದರ್ಶನ, ಅಲ್ಲದೆ ಬಾಲ್ಯ ಮದುವೆ, ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆ ಬಿಂಬಿಸು ವಂತಹ ಚಿತ್ರ ಪ್ರದರ್ಶಿಸಬೇಕು. ರಾಜ್ಯ ಸರ್ಕಾರದ ಯೋಜನೆಗಳು
ತಿಳಿಸುವ ಚಿತ್ರಗಳನ್ನು ಪ್ರದರ್ಶನ ಮಾಡಬೇಕು. ವಿವಿಧ ವೃತ್ತ ನಾಮಫಕಗಳಿಗೆ ದೀಪಾಲಂಕರ ಮಾಡಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳ ಅವದಿ ಕಡಿಮೆ ಇರಬೇಕು. ಅಧಿಕಾರಿಗಳು, ನೌಕರರು ತಪ್ಪದೆ ಭಾಗವಹಿಸಬೇಕು. ಗೈರು ಹಾಜರಾಗುವವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಜರುಗಿಸಲಾ ಗುವುದು ಎಂದರು.
ಈ ಸಂದರ್ಭದಲ್ಲಿ ಸಿಪಿಐ ಶಶಿಕಾಂತ ಎಂ, ಪ.ಪಂ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ, ನೌಕರ ಸಂಘದ ಅದ್ಯಕ್ಷೆ ನಾಗಮ್ಮ, ಪಿಎಸ್‌ಐ ಗುರುಚಂದ್ರಯಾದವ, ಜೇಸ್ಕಾಂ ಪ್ರಭಾರಿ ಎಇಇ ಮೋಹನ್ ಸಿಂಗ್,ಡಾ ಸುನೀಲ್ ಸರೋದೆ, ನಾಡ ತಹಸೀಲ್ದಾರ ಸಿದ್ದನಗೌಡ, ರಾಜಕುಮಾರ, ಸಿಆರ್ ಸಿ ದಿವಾಕರ, ನಾಗರಾಜ, ಮಹಿಬೂಬ ಪಾಷ, ಕೇಶಪ್ಪ, ಪ.ಪಂಚಾಯತಿ ಸದಸ್ಯರಾದ ಕೃಷ್ಣನಾಯಕ, ಅಜೀತ ಹೊನ್ನಟಗಿ, ಹಾಜಿಚೌದ್ರ, ಹಸೇನ ಅಲಿಸಾಬ್, ಮಲ್ಲಪ್ಪ,ನಾಗರಾಜ, ಕಂದಾಯ ನಿರೀಕ್ಷಕ ಶ್ರೀನಾಥ,ಎಪ್ ಡಿಎ ಈರೇಶ. ವಿ.ಎ ವಿಲ್ಸನ್ ಸೇರಿದಂತೆ ಇನ್ನಿತರರು ಇದರು.