ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷ ಸ್ಥಾನ ಪೈಪೂಟಿ ಶುರು
ಸಿರವಾರ. ಅ.೭-
ಚುನಾವಣೆ ಜರುಗಿ ೨ ವರ್ಷ.೮ ತಿಂಗಳು ನಂತರ ಕೊನೆಗೂ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದ್ದೂ ಬಿಜೆಪಿಗೆ ಸುಲಭವಾಗಿ ಉಪಾದ್ಯಕ್ಷ ಸ್ಥಾನ ಒದಗಿ ಬಂದಿದ್ದರೆ, ಅದ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ಗೆ ಸುಲಭವಾಗಿದ್ದರೂ ಅನೇಕರು ಆಕಾಂಕ್ಷಿಗಳಾಗಿರುವದರಿಂದ ಯಾವ ಸದಸ್ಯರಿಗೆ ಸಚಿವ- ಶಾಸಕರು ಆಶಿರ್ವಾದ ದೊರೆಯಿತ್ತದೋ ಅವರು ಅದ್ಯಕ್ಷರಾಗುತ್ತಾರೆ.
ಕರ್ನಾಟಕ ಪುರಸಭೆಗಳ ಕಾಯಿದೆ, ೧೯೬೪ರ ಸೆಕ್ಷನ ೪೨ರ ಪ್ರಕಾರ ಮತ್ತು ಕರ್ನಾಟಕದ ನಿಯಮ ೧೩-ಎ ಮತ್ತು ೧೩ರ ಅಡಿಯಲ್ಲಿ ಕ ಕರ್ನಾಟಕದ ನಗರ/ ಪುರಸಭೆಯ ಕೌನ್ಸಿಲ್‌ಗೆ ಸಂಬಂಧಿಸಿದಂತೆ ವಿವಿಧ ವರ್ಗಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿಯನ್ನು ಪ್ರಕಟಿಸಿ ಚುನಾವಣೆ ತಿದ್ದುಪಡನಿಯಮಗಳು, ೨೦೨೪ರ ಪ್ರಕಾರ ಆದೇಶ ಹೊರಡಿಸಿದೆ.
ಸಿರವಾರ ಪ.ಪಂ ಒಟ್ಟು ೨೦ ಜನ ಸದಸ್ಯರ ಬಲದಲ್ಲಿ ಕಾಂಗ್ರೇಸ್ ೯, ಬಿಜೆಪಿ ೬, ಜೆಡಿಎಸ್೩, ಪಕ್ಷೇತರರು ೨ ಸದಸ್ಯರು ಇದಾರೆ. ಇಬ್ಬರು ಪಕ್ಷೇತರರ ಪೈಕಿ ವಾರ್ಡ ನಂ೧೯ ಸದಸ್ಯ ಹನುಮಂತಿ ಈಗಾಗಲೇ ಬಿಜೆಪಿಗೆ ಬೆಂಬಲ ಸೂಚಿಸಿ, ಬಿಜೆಪಿ ಪಾಳೇಯದಲ್ಲಿದ್ದಾರೆ. ಜೆಡಿಎಸನ ೩ ಜನ ಕೂಡ ಈ ಹಿಂದೆ ಬಿಜೆಪಿಗೆ ಬೆಂಬಲ ಘೋಷಿಸಿದ್ದರಿಂದ ಬಿಜೆಪಿ ಪಾಳಯಕ್ಕೆ ೧೦ ಸದಸ್ಯರ ಬಲ ಹೊಂದಿದೆ.
ಅತ್ತ ಕಾಂಗ್ರೆಸ ತನ್ನ ೯ ಸದಸ್ಯರು, ವಾರ್ಡ ನಂ ೦೮ ರ ಸದಸ್ಯ ಮಾರ್ಕಪ್ಪ ಕಾಂಗ್ರೇಸ್ ಜೊತೆ ಗುರುತಿಸಿಕೊಂಡಿದ್ದಾರೆ ಒಟ್ಟ ೧೦ ಸ್ಥಾನಗಳು ಶಾಸಕ ಮತ್ತು ಸಂಸದರ ಬೆಂಬಲದೊಂದಿಗೆ ೧೨ ಮತಗಳಾಗುತ್ತವೆ ಬಹುಮತಕ್ಕೆ ೧೧ ಮತ ಬೇಕು.
ಲಕ್ಷ್ಮಿಗೆ ಒಲಿದ ಅದೃಷ್ಠ:- ವಾರ್ಡ ನಂ ೦೫ ಲಕ್ಷ್ಮಿ ಆದೇಪ್ಪ ಅವರು ಜಿದಾಜಿದಿನ ಚುನಾವಣೆಯಲ್ಲಿ ಕೇವಲ ಒಂದು ಮತದಿಂದ ವಿಜೇತರಾದರು, ಈಗ ಎಸ್ ಟಿ ಮಹಿಳೆ ಮಿಸಲಾಗಿರುವುದರಿಂದ ೨೦ ಸದಸ್ಯರಲಿ ಇವರು ಒಬ್ಬರೆ ಎಸ್ ಟಿ ಮಹಿಳೆ ಆಗಿರುವ ಕಾರಣ ಬಯಸದೆ ಭಾಗ್ಯ ಒಲಿದಿದೆ. ಆಕಾಂಕ್ಷಿಗಳು :- ಅದ್ಯಕ್ಷ ಸ್ಥಾನ ಸಾಮಾನ್ಯವಾಗಿರುವದರಿಂದ ಕಾಂಗ್ರೇಸ್ ನಲ್ಲಿ ವಾರ್ಡ ನಂ ೧೧ ವೈ ಭೂಪನಗೌಡ, ವಾರ್ಡ ನಂ ೩ ಹಸೇನ ಅಲಿ ಸಾಬ್, ವಾರ್ಡ ನಂ ೪ ಅಮರಮ್ಮ , ವಾರ್ಡ. ನಂ ೧೨ ಅಮರಮ್ಮ, ವಾರ್ಡ ನಂ ೬ ಹಾಜಿಚೌದ್ರ, ವಾರ್ಡ ನಂ ೯ ರ ಸೂರಿ ದುರುಗಣ್ಣ ನಾಯಕ ಅದ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಅವರಲ್ಲಿ ವೈ ಭೂಪನಗೌಡ, ಅಮರಮ್ಮ , ಅಮರಮ್ಮ ತೀರ್ವ ಸ್ಪರ್ದೆ ಇದೆ. ಸಚಿವರು, ಶಾಸಕರು, ಸ್ಥಳಿಯ ಮುಖಂಡರ ಒಲವು ಯಾರ ಕಡೆ ಎಂಬುದು ಕಾದು ನೋಡಬೇಕಾಗಿದೆ. ಬಿಜೆಪಿಯಲ್ಲಿ ಸಂದೀಪ್ ಪಾಟೀಲ್, ಹನುಮಂತಿ ಆಕಾಂಕ್ಷಿಗಳಾಗಿದ್ದಾರೆ.
ಕಾಂಗ್ರೇಸ್ ಸದಸ್ಯರಿಗೆ ಸದಸ್ಯರೆ ಮುಳ್ಳು :- ಅದ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಹೆಚ್ಚಿನವರು ಕಾಂಗ್ರೇಸ್ ಸದಸ್ಯರೆ ಇದ್ದಾರೆ. ಮುಂದೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರೆ ಎದುರಾಗುವ ಲಕ್ಷಣ ಇವೆ, ಜೆಡಿಎಸ್ ಸದಸ್ಯರು ನಿಮಗೆ ಬೆಂಬಲ ನೀಡುತ್ತೆವೆ ಎಂದು ಕೇಲ ಆಕಾಂಕ್ಷಿಗಳಿಗೆ ಹೇಳಿದರೆ ಅ?ವಪಕ್ಷದವರೆ ಮುಳ್ಳಾಗುವುದರಲ್ಲಿ ಅನುಮಾನವೆ ಇಲ್ಲಾ. ಮತ್ತೊಂದು ಕಡೆ ಕಾಂಗ್ರೇಸ್ ಒಳಜಗಳದ ಲಾಭವನ್ನು ಬಿಜೆಪಿ ಪಡೆದು ಅದ್ಯಕ್ಷ ಗಾದಿ ಹಿಡಿಯುವ ಲೆಕ್ಕಾಚಾರಗಳು ಸಹ ನಡೆದಿವೆ. ಸಚಿವ- ಶಾಸಕರ ಮನೆಗೆ ಆಕಾಂಕ್ಷಿಗಳು:- ಅದ್ಯಕ್ಷ ಸ್ಥಾನದ ಆಕಾಂಕ್ಷಿಗಳು ತಮ್ಮ ಬೆಂಬಲಿತ ಸದಸ್ಯರೊಂದಿಗೆ ಸ್ಥಳೀಯ ಮುಖಂಡರನ್ನು ಕರೆದುಕೊಂಡು ಸಣ್ಣ ನೀರಾವರಿ ಸಚಿವರಾದ ಎನ್ ಎಸ್ ಬೋಸರಾಜು ಹಾಗೂ ಮಾನ್ವಿ ಕ್ಷೇತ್ರದ ಶಾಸಕರಾದ ಜಿ.ಹಂಪಯ್ಯನಾಯಕ ಅವರ ಮನೆಗಳಿಗೆ ತೆರಳಿ ಪೆರೆಡ್ ಮಾಡಿ ನಾನು ಆಕಾಂಕ್ಷಿಯಾಗಿರುವ ಆಶಿರ್ವಾದ ಮಾಡಿ ಎಂದು ಕೇಳಿಕೊಳುತ್ತಿದ್ದಾರೆ. ದಿನಾಂಕ ನಿಗದಯಾಗದೆ ಇದರೂ ಕೇಲ ಸದಸ್ಯರು ಭಾರಿ ಮೊತ್ತದ ಡಿಮ್ಯಾಂಡ್ ಇಡುತ್ತಿದ್ದಾರೆ.