ಸಿದ್ಧಾರೂಡ ಕಾಲೋನಿ ಮಹಾನಗರ ಪಾಲಿಕೆ ಸೇರ್ಪಡೆಗೆ ಆಗ್ರಹ
ಕಲಬುರಗಿ: ಆ.7: ನಗರದ ಹೊರವಲಯದ ಕಪನೂರ ಕೈಗಾರಿಕೆ ಪ್ರದೇಶದ ಪಕ್ಕದ ವಾರ್ಡ ನ.2 ರ ಸಿದ್ಧಾರೂಡ ಬಡಾವಣೆಯ ಮೂಲ ಸೌಕರ್ಯ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿಯ ವಕ್ತಾರ ಆನಂದ ತೆಗನೂರ ನೇತೃತ್ವದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಪ್ರದೇಶ ಅತ್ತ ಪಾಲಿಕೆ ವ್ಯಾಪ್ತಿಗೆ ಒಳಪಡೆದ ಇತ್ತ ಯಾವುದೇ ಗ್ರಾಮ ಪಂಚಾಯತ ವ್ಯಾಪ್ತಿಗೆ ಸೇರದೆ ಅತಂತ್ರ ಪರಿಸ್ಥಿತಿಯ ಸಾರ್ವಜನಿಕರು ಬದುಕುತ್ತಿದ್ದಾರೆ ಎಂದರು. ಇಲ್ಲಿ ಸುಮಾರು 350ಕ್ಕೂ ಹೆಚ್ಚು ಮನೆಗಳು ಹಾಗೂ 1700 ಕ್ಕೂ ಹೆಚ್ಚು ಜನಸಂಖ್ಯೆ ವಾಸಿಸುತ್ತಿದ್ದಾರೆ. ಇಲ್ಲಿ ಹೆಚ್ಚಾಗಿ ಪ.ಜಾತಿ, ಪ.ಪಂಗಡ, ಹಿಂದುಳಿದ, ವರ್ಗ, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಸಮುದಾಯಗಳ ಜನರು ಇಲ್ಲಿ ವಾಸವಾಗಿದ್ದಾರೆ.ಈ ಬಡಾವಣೆಯೂ ಉತ್ತರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತಿದ್ದು, ಪಾಲಿಕೆ ಸದಸ್ಯರು ಹಾಗೂ ಶಾಸಕರಿಗೆ ಸೌಲಭ್ಯ ಕೇಳುವಂತಿಲ್ಲ. ಈ ಮೊದಲು ಸದರಿ ಪ್ರದೇಶವು ತಾಜಸುಲ್ತಾನಪೂರ ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಟ್ಟಿತ್ತು, ನಂತರ ಕಪನೂರ ಗ್ರಾಮ ಪಂಚಾಯತಗೆ ಸೇರಿತ್ತು, ಸದರಿ ಕಪನೂರ ಗ್ರಾಮ ಪಂಚಾಯತವು ಕಲಬುರಗಿ ಮಹಾನಗರ ಪಾಲಿಕೆಗೆ ಒಳಪಟ್ಟಿದ್ದೆ.ಆದರೆ ಸದರಿ ಪ್ರದೇಶದ ಸಿದ್ಧಾರೂಢ ಕಾಲೋನಿ ಮಾತ್ರ ಅತಂತ್ರವಾಗಿ ಉಳಿದಿದೆ.
ಇದರಿಂದ ಅಲ್ಲಿನ ಸಾರ್ವಜನಿಕರು ತಮ್ಮ ಸಮಸ್ಯೆಗಳು ಯಾರ ಹತ್ತಿರ ಹೇಳಿಕೊಳ್ಳಬೇಕೆಂಬುವುದೇ ತೋಚದಾಗಿದೆ. ಇದರಿಂದ ಸದರಿ ಪ್ರದೇಶದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡು ಸಾರ್ವಜನಿಕರ ಅನೇಕ ಬೇಡಿಕೆಗಳು ಎಲಮರೆ ಕಾಯಿದಂತೆ ತಪ್ಪಿಹೋಗುತ್ತಿವೆ. ಈ ನಮ್ಮ ಪ್ರದೇಶವನ್ನು ಕಲಬುರಗಿ ಮಹಾನಗರ ಪಾಲಿಕೆಗೆ ವ್ಯಾಪ್ತಿಗೆ ಒಳಪಡಿಸಿದ್ದಲ್ಲಿ ನಾವು ಎಲ್ಲರೂ ಅದರ ತೆರಿಗೆ ಪಾವತಿ ಮಾಡಲು ಸಿದ್ಧರಿರುತ್ತೇವೆ ಎಂದರು.
ಸಾರ್ವಜನಿಕರ ಬೇಡಿಕೆಗೆ ಪಾಲಿಕೆ ಮಹಾಪೌರರಾದ ತಾವು ಕೂಡಲೇ ಕ್ರಮ ಕೈಕೊಂಡು ಇದರ ಸಮಸ್ಯೆ ಬಗೆ ಹರಿಸಿಕೊಟ್ಟು ಇವರಿಗೆ ಒಂದು ನೆಲೆ ನಿಲ್ಲುವಂತೆ ಮಾಡಿ ಮುಂದಿನ ಚಟುವಟಿಕೆಗೆ ಅನುವು ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಡಾವಣೆಯ ನಾಗರೀಕರಾದ ಆಶೀಫ ಮಿಯಾ,ಶರಣು ಮೇತ್ರೆ, ಬಂಗಾರಪ್ಪಾ ಗುತ್ತೇದಾರ, ಜಗನ್ನಾಥ ಪಿ.ಕೆ,ಜಗನ್ನಾಥ ಜಮಾದಾರ, ಗಫಾರ ಷಾ, ಶಿವುಕುಮಾರ ಪೂಜಾರಿ,ನಾಗಣ್ಣ ಮಗಿ,ಶಿವರಾಯ ಜಮಾದಾರ, ಇಮಾಮಶಾ ದರವೇಶ ,ಶ್ರೀಕಾಂತ ತೊಂಡಿ, ಮಂಜುನಾಥ ಗುತ್ತೇದಾರ, ಸಂತೋಷ ಗುತ್ತೇದಾರ, ಸೇರಿದಂತೆ ಇತರರು ಇದ್ದರು.