ಬೆಳೆಯುವ ಸಿರಿ ಮೊಳಕೆಯಲ್ಲಿ: ಹ.ಮ ಪೂಜಾರಿ
ಇಂಡಿ:ಆ.7: ಬೆಳೆಯುವ ಸಿರಿ ಮೋಳಕೆಯಲ್ಲಿ ಎಂಬ ನಾಣ್ಮುಡಿಯಂತೆ ಮಕ್ಕಳಿಗೆ ಒಳ್ಳೇಯ ಅಭಿರುಚಿ, ಆಸಕ್ತಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕಾದರೆ ಮಕ್ಕಳಲ್ಲಿ ಸಾಹಿತ್ಯ ಚಟುವಟಿಕೆಗಳು ಮೈದಳೆಯುವಂತಾಗಬೇಕು. ಮಕ್ಕಳೇ ದೇಶ ಆಸ್ತಿ ಇಂದಿನ ಮಕ್ಕಳು ನಾಡಿನ ನಾಡಿನ ಪ್ರಭುಗಳು ಸಾಹಿತ್ಯದ ಮೂಲಕ ಸಂಸ್ಕಾರ ನೀಡಿ ಎಂದು ಹಿರಿಯ ಮಕ್ಕಳ ಸಾಹಿತಿ ಹ.ಮ ಪೂಜಾರಿ ಹೇಳಿದರು.
ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ಕಾರ್ಯದರ್ಶಿ ಎಸ್.ಎಸ್ ಸಾತಿಹಾಳ ಮುಖ್ಯ ಅತಿಥಿಗಳಾಗಿ ಮಾತನಾಡಿ ಇಂಡಿ ತಾಲೂಕು ಗಡಿಭಾಗದ ಜಾನಪದ ಸಾರಸ್ವತ್ವ ಲೋಕಕ್ಕೆ ನೀಡಿದ ಕೊಡುಗೆ ಅನನ್ಯ ಹಲಸಂಗಿ ಗೆಳೆಯರಾದ ಮಧುರಚೆನ್ನ, ಸಿಂಪಿಲಿಂಗಣ್ಣ, ಧೂಲಾಸಾಹೇಬ , ನಾಟಕ ಬ್ರಹ್ಮ ಅಗರಖೇಡದ ಶ್ರೀರಂಗರು ಸಾಹಿತ್ಯವನ್ನು ನಾಡಿಗೆ ಕೃಷಿ ಮಾಡಿದ್ದಾರೆ ಇಂಡಿ ಸಾಧು ಸಂತರ ,ಶರಣರ ಕವಿಗಳ ,ಸಾಹಿತಿಗಳ ಪುಣ್ಯದ ನೆಲ ಸಾಹಿತಿಗಳ ಬೀಡು ಎಂದರೆ ತಪ್ಪಾಗುವುದಿಲ್ಲ.
1989ರಲ್ಲಿ ಮಕ್ಕಳ ಸಾಹಿತ್ಯ ಸಂಗಮ ಘಟಕ ಹುಟ್ಟು ಹಾಕಲಾಗಿದೆ. ವಿಜಯಪೂರ ಜಿಲ್ಲೆಯ ಮಕ್ಕಳ ಸಾಹಿತ್ಯ ಸಂಗಮ ಹುಲಸಾಗಿ ಬೆಳೆಯಲು ಅನೇಕ ಪೂರ್ವಜನರ ಕೊಡುಗೆ ಇದೆ ಎಂದರು.
ಮಕ್ಕಳು ಬೆಣ್ಣೆ ಮುದ್ದೆ ಇದ್ದ ಒಳ್ಳೇಯ ಸಂಸ್ಕಾರ ಮಾನವೀಯ ಮೌಲ್ಯಗಳನ್ನು ಬಿತ್ತಬೇಕು. ಮಕ್ಕಳ ಸಾಹಿತಿಗಳಾದವರು ಮಕ್ಕಳ ಪರಕಾಯಪ್ರವೇಶ ಮಾಡಬೇಕು . ಮಕ್ಕಳ ಸಾಹಿತ್ಯದಲ್ಲಿ ಅವರ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ವೇದಿಕೆ ಸಿದ್ದಪಡಿಸಿ ಅಂತರಿಕ ಶಕ್ತಿ ಹೊರಹಾಕಬೇಕು ಇಂಡಿ ಸಾಹಿತಿಕ ನೆಲೆಬೀಡು ಮಕ್ಕಳ ಸಾಹಿತಿಕ ಸಂಗಮ ರಚನಾತ್ಮವಾಗಿ ನಡೆಯಲಿ ಪ್ರತಿಹಂತದಲ್ಲಿ ಸಹಾಯ ಸಹಕಾರ ನೀಡುವುದಾಗಿ ವಿಜಯಪೂರ ಮಕ್ಕಳ ಸಾಹಿತ್ಯ ಸಂಗಮ ಜಿಲ್ಲಾ ಅಧ್ಯಕ್ಷ ಎ.ಆರ್ ಹೆಗ್ಗನದೊಡಿ ಮಾತನಾಡಿದರು.
ಮುಖ್ಯಗುರು ಎಸ್.ಆಯ್ ಹಿರೇಮಠ, ಮಕ್ಕಳ ಸಾಹಿತ್ಯ ಸಂಗಮದ ತಾಲೂಕಾ ಘಟಕದ ನೂತನ ಅಧ್ಯಕ್ಷ ಸದಾನಂದ ಈರನಕೇರಿ ಮಾತನಾಡಿದರು.
ಇಂಡಿ ಓಂಕಾರಾಶ್ರಮದ ಡಾ. ಸ್ವರೂಪಾನಂದ ಮಹಾಸ್ವಾಮಿಗಳು ದಿವ್ಯಸಾನಿಧ್ಯವಹಿಸಿ ಅರ್ಶೀವಚನ ನೀಡಿದರು.
ಹಿರಿಯ ಸಾಹಿತಿ ಡಿ.ಎನ್ ಅಕ್ಕಿ , ಗಂಗಾಗಲಗಲಿ, ಬಿ.ಎಸ್ ಪಾಟೀಲ, ಎಸ್.ಆಯ್ ಸುಗೂರ, ಶರಣಬಸಪ್ಪಾ.ಎನ್ ಕಾಂಬಳೆ ವೇದಿಕೆಯಲ್ಲಿದ್ದರು.
ವಿಜಯಲಕ್ಷ್ಮೀ ಕ್ಷತ್ರಿ, ಪಾರ್ವತಿ ಸೊನ್ನದ , ಜೆ.ಡಿ ಪೂಜಾರ, ಕೃಷ್ಣಾ ಎಚ್, ವ್ಹಿ ಎಮ್ ಸಿಂಧೆ, ಅಶೋಕ ಬಿರಾದಾರ, ಡಿ.ಎಸ್ ಹಿರೇಮಠ, ಎಸ್.ಎಸ್ ಕಡಣಿ, ಎ.ಬಿ ಪಾಟೀಲ, ಪ್ರಕಾಶ ಕರಿಗಣ್ಣನವರ್, ಎಸ್.ಎಂ ಖಾಜಿ, ಶಿಕ್ಷಕ ಗೋಟ್ಯಾಳ ಶ್ಯಾಮ ಬೆನಕನಹಳ್ಳಿ ಸೇರಿದಂತೆ ಮಕ್ಕಳ ಸಾಹಿತ್ಯ ಸಂಗಮ ಪದಾಧಿಕಾರಿಗಳು ಹಾಗೂ ಶ್ರೀಮತಿ ರಮಾಬಾಯಿ ಪ್ರೌಢ ಶಾಲೆಯ ಶಿಕ್ಷಕರು, ವಿಧ್ಯಾರ್ಥಿ, ವಿಧ್ಯಾರ್ಥಿನಿಯವರು ಉಪಸ್ಥಿತರಿದ್ದರು.