ಸಹಾಯಕ ಆಯುಕ್ತರಿಂದ ನೀರಿನ ಮಟ್ಟ ವಿಕ್ಷಣೆ ಕೇಳಭಾಗಕ್ಕೆ ತಲುಪಿಸಲು ತಾಕೀತು
ಸಿರವಾರ.ಅ.೭-
ರಾಯಚೂರು ಸಹಾಯಕ ಆಯಕ್ತರಾದ ಮಹಿಬೂಬಿ ಅವರು ತುಂಗಭದ್ರಾ ಎಡದಂಡೆ ನಾಲೆಯ ಮೈಲ್ ನಂ ೭೧ ರಿಂದ ೧೦೪ ವರೆಗೂ ನೀರಿನ ಮಟ್ಟವನ್ನು ಮಂಗಳವಾರ ಸಂಜೆ ಯಿಂದ ರಾತ್ರಿಯವರೆಗೂ ವಿಕ್ಷಣೆ ಮಾಡಿದರು. ಮೇಲ್ಭಾಗದಿಂದ ಕೇಳ ಭಾಗಕ್ಕೆ ನೀರು ಬರುತ್ತಿಲ, ಇದರಿಂದ ನೀರಿನ ಕೃತಕ ಅಭಾವ ಸೃಷ್ಠಿಯಾಗಿದೆ, ಈಗಾಗಲೇ ತಹಸೀಲ್ದಾರ ನೇತೃತ್ವದಲ್ಲು ವಾರದಲ್ಲಿ ಎರಡನೇ ಬಾರಿ ಕಾಲುವೆ ಮೇಲೆ ಸಂಚಾರ ಮಾಡಲಾಗಿದ್ದೂ, ಕೊನೆಭಾಗಕ್ಕೆ ನೀರು ತಲುಪಿಲ, ಒಂದು ಕಡೆ ಮಳೆ ಸುರಿಯುತ್ತಿಲ, ಮತ್ತೊಂದು ಕಡೆ ಜಿಲ್ಲೆಯಲ್ಲಿ ಎರಡು ನದಿಗಳು ತುಂಬಿ ಹರಿಯುತ್ತಿದ್ದರೂ, ನಮ್ಮ ಭಾಗದ ರೈತರ ಜಮಿನುಗಳಿಗೆ ನೀರು ತಲುಪುತ್ತಿಲ ಎಂಬ ಆರೋಪದ ಹಿನ್ನೆಲೆಯಲ್ಲಿ ಬೇಟಿ ನೀಡಿ ವಿಕ್ಷಣೆ ಮಾಡಿದರು ಸಿರವಾರ ತಹಸೀಲ್ದಾರ ಹಾಗೂ ತಾಲೂಕ ದಂಡಾಧಿಕಾರಿ ರವಿ ಎಸ್ ಅಂಗಡಿ, ಮಾನ್ವಿ ತಹಸೀಲ್ದಾರ ರಾಜು ಪಿರಂಗಿ. ಸಿಪಿಐ ಶಶಿಕಾಂತ ಎಂ, ನೀರಾವರಿ ಇಲಾಖೆ ಇಇ ಶಿವಶಂಕರ, ಎಇಇ ವಿಜಯಲಕ್ಷ್ನಿ, ಜೇಸ್ಕಾಂ ಪ್ರಭಾರಿ ಎಇಇ ಮೋಹನ ಸಿಂಗ್, ಕಂದಾಯ ನಿರೀಕ್ಷಕ ಶ್ರೀನಾಥ, ಶಿರಸ್ತೆದಾರ ಪಕೃದ್ದಿನ್, ಎಪ್ ಡಿ ಎ ಈರೇಶ, ಅಮರ, ಪೋಲಿಸ್ ಇಲಾಖೆಯ ಅದಿಕಾರಿಗಳು ಇದರು.