ರೇಷ್ಮೆ ಇಲಾಖೆಗೆ ಲಕ್ಷ್ಮಣ ಪೂಜಾರಿ ಕೊಡುಗೆ ಅಪಾರ
ಹುಮನಾಬಾದ್ :ಆ.7: ಬಸವಕಲ್ಯಾಣ ಹಾಗೂ ಹುಮನಾಬಾದ್ ತಾಲೂಕ ವ್ಯಾಪ್ತಿಯ ರೇಷ್ಮೆ ಬೆಳೆಗಾರರ ಅಭಿವೃದ್ಧಿಗೆ ಪೂರಕವಾಗಿ ರೇಷ್ಮೆ ಇಲಾಖೆಯ ತಾಲೂಕ ಮಟ್ಟದ ಅಧಿಕಾರಿ ಲಕ್ಷ್ಮಣ ಪೂಜಾರಿ ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ರಾಜ್ಯ ರೇಷ್ಮೆ ಇಲಾಖೆ ತಾಂತ್ರಿಕ ನೌಕರರ ಕೇಂದ್ರ ಸಂಘದ ರಾಜ್ಯಾಧ್ಯಕ್ಷ ಕೆ.ಎಂ. ಉಮೇಶ ಹೇಳಿದರು.
ತಾಲೂಕಿನ ಮಾಣ ಕ ನಗರ ಗ್ರಾಮದ ಸರಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ ಸಭಾಂಗಣದಲ್ಲಿ ರೇಷ್ಮೆ ಇಲಾಖೆಯ ತಾಲೂಕ ಮಟ್ಟದ ಅಧಿಕಾರಿ ಲಕ್ಷ್ಮಣ ಪೂಜಾರಿ ಅವರ ವಯೋ ನಿವೃತ್ತಿ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ವಿಶೇಷ ಸನ್ಮಾನಿಸಿ ಮಾತನಾಡಿದರು.
ಕಳೆದ 23 ವರ್ಷಗಳಿಂದ ಹುಮನಾಬಾದ್ ತಾಲೂಕಿನ ರೇಷ್ಮೆ ಇಲಾಖೆಯಲ್ಲಿ ಇವರು ಸೇವೆ ಸಲ್ಲಿಸುತ್ತಾ ರೇಷ್ಮೆ ಬೆಳೆಗಾರರ ಏಳಿಗೆಗೆ ಶ್ರಮಿಸಿದ್ದಾರೆ. ಹೀಗಾಗಿ ಇವರ ಸಾಧನೆಗೆ ಗೌರವ ಸಲ್ಲಿಸುವುದಕ್ಕಾಗಿ ಒಟ್ಟು 4 ಜಿಲ್ಲೆಯ ರೇಷ್ಮೆ ಇಲಾಖೆ ಅಧಿಕಾರಿಗಳು, ರೈತರು ಬಂದಿದ್ದಾರೆ ಎಂದು ತಿಳಿಸಿದರು.
ಜಿಪಂ. ರೇಷ್ಮೆ ಉಪ ನಿರ್ದೇಶಕ ರಾಜೇಂದ್ರಕುಮಾರ ದೇವದುರ್ಗ ಮಾತನಾಡಿ, ಲಕ್ಷ್ಮಣ ಪೂಜಾರಿ ಅವರು ಸೇವಾ ಅವಧಿಯಲ್ಲಿ ಬಹಳ ಕಷ್ಟಪಟ್ಟು ರೇಷ್ಮೆ ಬೆಳೆಗಾರರರನ್ನು ಬೆಳೆಸುವ ಪ್ರಾಮಾಣ ಕ ಪ್ರಯತ್ನ ಮಾಡಿದ್ದಾರೆ. ಜತೆಗೆ ತಾಲೂಕಿನಲ್ಲಿ ರೇಷ್ಮೆ ಬೆಳೆಯ ಜಾಗೃತಿ ಮೂಡಿಸುವ ಕಾರ್ಯ ಕೂಡಾ ಮಾಡಿದ್ದಾರೆ ಎಂದು ಕೊಂಡಾಡಿದರು.
ರಾಜ್ಯ ರೇಷ್ಮೆ ಇಲಾಖೆ ತಾಂತ್ರಿಕ ನೌಕರರ ಕೇಂದ್ರ ಸಂಘದ ಮಾಜಿ ಅಧ್ಯಕ್ಷ ಭೀಮೇಶ ಪಂಚಾಳ ಮಾತನಾಡಿ, ಲಕ್ಷಣ ಪೂಜಾರಿಯವರು ಸರಕಾರಿ ಸೇವೆಯಲ್ಲಿ ತಮ್ಮ ಜೀವನ ತಪಸ್ಸಾಗಿ ನಿರ್ವಹಿಸಿ ಜಿಲ್ಲೆಯ ರೇಷ್ಮೆ ಬೆಳೆಗಾರರ ಅಭಿವೃದ್ಧಿಗಾಗಿ ಕಾಯ, ವಾಚ, ಮನಸಾ ಪೂರ್ವಕವಾಗಿ ಹಗಲು ರಾತ್ರಿ ಎನ್ನದೇ ದುಡಿದು ರೇಷ್ಮೆ ಬೆಳೆಗಾರರು ಆರ್ಥಿಕವಾಗಿ ಸದೃಡರಾಗುವಂತೆ ಮಾಡಿರುವುದನ್ನು ಇವರ ಬಹುದೊಡ್ಡ ಕೊಡುಗೆಯಾಗಿದೆ ಎಂದು ತಿಳಿಸಿದರು.
ಬೀದರ್, ಯಾದಗಿರಿ, ಕಲಬುರಗಿ ಹಾಗೂ ವಿಜಯಪೂರ ಜಿಲ್ಲೆಯ ಅಧಿಕಾರಿಗಳು ಹಾಗೂ ರೈತರು ಸೇರಿ ಸೇವಾ ನಿವೃತ್ತಿ ಹೊಂದುತ್ತಿರುವ ಲಕ್ಷ್ಮಣ ಪೂಜಾರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಬಾಬುರಾವ ಶೆಳಕೆ, ಪ್ರಕಾಶ ಬಾಬು, ಗೋವಿಂದರಾಜ ಉಪಾರ, ಗಣಪತಿ ಜಮಾದಾರ, ಶಿವಾಜಿರಾವ ಬಿರಾದಾರ, ವಿಶ್ವನಾಥ ಪಾಟೀಲ್ ಮಾಡಗೂಳ, ಸುಭಾಷ ಗಂಗಾ, ಡಿ.ಬಿ. ಪಾಟೀಲ್, ಜಿ.ಡಿ. ನಂದಿಕೂರ್, ಮಲ್ಲಿಕಾರ್ಜುನ್ ರಟಕಲ್, ವಿಜಯಕುಮಾರ ದೊಡ್ಡಮನಿ,ರವೀಂದ್ರ ಕೊಂಪಾಣಿ, ,ಸುಧಾಕರ ಧುಮ್ಮನಸೂರ , ಅನಿಲ ವಾಡಿ, ಸೇರಿದಂತೆ ಅನೇಕರು ಇದ್ದರು.