ತೆರಿಗೆ ಪಾವತಿಸಿ-ಅಭಿವೃದ್ಧಿಗೆ ಸಹಕರಿಸಿ
ಸಿರವಾರ.ಅ.೭-
ಪಟ್ಟಣದಲ್ಲುರುವ ವರ್ತರಕರು ಸಾರ್ವಜನಿಕರು ಪಂಚಾಯತಿಗೆ ಪಾವತಿಸಬೇಕಾಗಿರುವ ತಮ್ಮ ತಮ್ಮ ತೆರಿಗೆ ಪಾವತಿಸುವ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಪ.ಪಂಚಾಯತಿ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ ಹೇಳಿದರು.
ಪಟ್ಟಣ ಪಂಚಾಯತಿಯ ಹಳೆ ಕಟ್ಟಡದ ಮುಂದೆ ತೆರಿಗೆ ಅಭಿಯಾನ ಕಾರ್ಯಕ್ರಮದ ಜಾಗೃತಿ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಆಸ್ತಿ ತೆರಿಗೆ, ಉದ್ದಿಮೆ ಪರವಾನಿಗೆ ಕರ, ನೀರಿನ ಕರ, ಜಾಹಿರಾತು ಕರ ಸೇರಿದಂತೆ ಇನ್ನಿತರ ಕರ, ತೆರಿಗೆ ಪಾವತಿಸಬೇಕು. ತೆರಿಗೆ ಹಣದಿಂದ ವಿವಿದ ಅಭಿವೃದ್ದಿ ಕಾರ್ಯಗಳನ್ನು ಮಾಡಲು ಸಾದ್ಯ ತೆರಿಗೆ ಪಾವತಿ ಮಾಡಲು ನಿರ್ಲಕ್ಷ್ಯ ತೊರಿದರೆ, ಪುರಸಭೆ ಕಾಯ್ದೆ ೧೯೬೪ ರ ಪ್ರಕಾರ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪ.ಪಂ ಸದಸ್ಯ ಸಂದೀಪ ಪಾಟೀಲ್, ಕಿರಿಯ ಆರೋಗ್ಯ ಸಹಾಯಕಿ ಸುನೀತ ಸಜ್ಜನ್, ನಂದಕುಮಾರ ಸೇರಿದಂತೆ ಇನ್ನಿತರರು ಇದರು